ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದ್ರೆ ಮಾತ್ರ ಹೊಸ ವಾಹನ ನೋಂದಣಿ
ಬೆಂಗಳೂರು: ನಗರದ ವಾಹನ ಪ್ರಿಯರಿಗೆ ಸಾರಿಗೆ ಇಲಾಖೆ ಶಾಕಿಂಗ್ ಸುದ್ದಿಯನ್ನ ನೀಡಿದೆ. ಹೊಸ ವಾಹನ ಖರೀದಿಸಬೇಕಾದ್ರೆ ಪಾರ್ಕಿಂಗ್ ಜಾಗ ಕಡ್ಡಾಯ. ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದ್ರೆ ಮಾತ್ರ ನೋಂದಣಿ ಮಾಡಲಾಗುತ್ತೆ. ಇಲ್ಲದಿದ್ರೆ ಹೊಸ ವಾಹನ ನೋಂದಣಿಗೆ ಅನುಮತಿ ಸಿಗುವುದಿಲ್ಲ ಎಂದು ಟಿವಿ9ಗೆ ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಲು ಹೊಸ ನಿಯಮ ರೂಪಿಸಲಾಗಿದೆ. ಪಾರ್ಕಿಂಗ್ಗೆ ಜಾಗ ಇಲ್ದೆ ಹೋದ್ರು ಜನ ವಾಹನ ಖರೀದಿಸುತ್ತಿದ್ದಾರೆ. ಫುಟ್ […]
ಬೆಂಗಳೂರು: ನಗರದ ವಾಹನ ಪ್ರಿಯರಿಗೆ ಸಾರಿಗೆ ಇಲಾಖೆ ಶಾಕಿಂಗ್ ಸುದ್ದಿಯನ್ನ ನೀಡಿದೆ. ಹೊಸ ವಾಹನ ಖರೀದಿಸಬೇಕಾದ್ರೆ ಪಾರ್ಕಿಂಗ್ ಜಾಗ ಕಡ್ಡಾಯ. ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದ್ರೆ ಮಾತ್ರ ನೋಂದಣಿ ಮಾಡಲಾಗುತ್ತೆ. ಇಲ್ಲದಿದ್ರೆ ಹೊಸ ವಾಹನ ನೋಂದಣಿಗೆ ಅನುಮತಿ ಸಿಗುವುದಿಲ್ಲ ಎಂದು ಟಿವಿ9ಗೆ ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಲು ಹೊಸ ನಿಯಮ ರೂಪಿಸಲಾಗಿದೆ. ಪಾರ್ಕಿಂಗ್ಗೆ ಜಾಗ ಇಲ್ದೆ ಹೋದ್ರು ಜನ ವಾಹನ ಖರೀದಿಸುತ್ತಿದ್ದಾರೆ. ಫುಟ್ ಪಾತ್, ಕಂಡವರ ಮನೆ ಮುಂದೆ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.
ಇದರಿಂದ ಕಿರಿಕಿರಿ ಉಂಟಾಗುತ್ತಿದೆ ಹೀಗಾಗಿ ಹೊಸ ವಾಹನ ಖರೀದಿ ಮಾಡುವ ಮಾಲೀಕರು ಪಾರ್ಕಿಂಗ್ ಗೆ ಜಾಗ ಇದೇಯಾ ಇಲ್ಲವಾ ಎನ್ನುವುದರ ಬಗ್ಗೆ ಬಿಬಿಎಂಪಿಯಿಂದ ಎನ್ಓಸಿ ಕಡ್ಡಾಯವಾಗಿ ಪಡೆಯಬೇಕು. ಬಿಬಿಎಂಪಿ ಎನ್‌ಒಸಿ ನೀಡದಿದ್ರೆ ಕಾರು ನೋಂದಣಿ ಮಾಡಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ಸ್ಪಷ್ಟಪಡಿಸಿದ್ದಾರೆ.