AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ಕೋಟಿಗೆ ಡಿಮ್ಯಾಂಡ್, ಬೆದರಿಕೆ ಆರೋಪ: ಕುಮಾರಸ್ವಾಮಿಗೆ ಸದ್ಯಕ್ಕಿಲ್ಲ ತನಿಖೆ ತಲೆಬಿಸಿ, ದಾಖಲೆ ನೀಡದ ವಿಜಯ್ ಟಾಟಾ

50 ಕೋಟಿ ರೂ. ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ್ದಾರೆಂದು ಇತ್ತೀಚೆಗೆ ವಿಜಯ್ ಟಾಟಾ ಆರೋಪ ಮಾಡಿದ್ದರು. ಅವರ ದೂರಿನ ಅನ್ವಯ ಮಾಜಿ ಎಂಎಲ್​ಸಿ ರಮೇಶ್ ಗೌಡ ಹಾಗೂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಪೊಲೀಸರಿಗೆ ಇನ್ನೂ ಪ್ರಾಥಮಿಕ ದಾಖಲಾತಿ ನೀಡಿಲ್ಲ. ಹೀಗಾಗಿ ಮುಂದಿನ ತನಿಖೆಗೆ ಅಡ್ಡಿಯಾಗುತ್ತಿದೆ.

50 ಕೋಟಿಗೆ ಡಿಮ್ಯಾಂಡ್, ಬೆದರಿಕೆ ಆರೋಪ: ಕುಮಾರಸ್ವಾಮಿಗೆ ಸದ್ಯಕ್ಕಿಲ್ಲ ತನಿಖೆ ತಲೆಬಿಸಿ, ದಾಖಲೆ ನೀಡದ ವಿಜಯ್ ಟಾಟಾ
50 ಕೋಟಿಗೆ ಡಿಮ್ಯಾಂಡ್, ಬೆದರಿಕೆ ಆರೋಪ: ಕುಮಾರಸ್ವಾಮಿಗೆ ಸದ್ಯಕ್ಕಿಲ್ಲ ತನಿಖೆ ತಲೆಬಿಸಿ, ದಾಖಲಾತಿ ನೀಡದ ವಿಜಯ್ ಟಾಟಾ
Jagadisha B
| Edited By: |

Updated on:Oct 06, 2024 | 10:53 AM

Share

ಬೆಂಗಳೂರು, ಅಕ್ಟೋಬರ್​​ 06: ಉದ್ಯಮಿ ವಿಜಯ್​ ಟಾಟಾಗೆ ಬೆದರಿಕೆ ಕೇಸ್‌ನಲ್ಲಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) ಮತ್ತು ಜೆಡಿಎಸ್‌ ಮಾಜಿ ಎಂಎಲ್ಸಿ ರಮೇಶ್ ಗೌಡ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆದರೆ ದೂರುದಾರ ವಿಜಯ್​ ಟಾಟಾ, ಅಮೃತಹಳ್ಳಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ಅಷ್ಟೇ ನೀಡಿದ್ದಾರೆ ಹೊರತು ಯಾವುದೇ ಪ್ರಾಥಮಿಕ ದಾಖಲಾತಿ ನೀಡಿಲ್ಲವೆಂಬುವುದು ಪೊಲೀಸ್ ಮೂಲಗಳಿಂದ ಟಿವಿ9ಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಸದ್ಯ ಹೆಚ್​ಡಿ ಕುಮಾರಸ್ವಾಮಿಗೆ ಯಾವುದೇ ತನಿಖೆ ತಲೆಬಿಸಿ ಇಲ್ಲ.

ಪ್ರಾಥಮಿಕ ದಾಖಲಾತಿ ಸಿಗದೆ ಮುಂದಿನ ತನಿಖೆ ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಪ್ರಾಥಮಿಕ ದಾಖಲಾತಿಗಳನ್ನು ನೀಡುವಂತೆ ಉದ್ಯಮಿ ವಿಜಯ್​ ಟಾಟಾಗೆ ಪೊಲೀಸರು ಸೂಚಿಸಿದ್ದಾರೆ.

ಇದನ್ನೂ ಓದಿ: 50 ಕೋಟಿ ರೂಗೆ ಡಿಮ್ಯಾಂಡ್​: ಹೆಚ್​ಡಿಕೆ ವಿರುದ್ಧ ದೂರು ನೀಡಿದ್ದ ಉದ್ಯಮಿ ವಿರುದ್ಧವೇ ಪ್ರತಿದೂರು

50 ಕೋಟಿ ರೂ. ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ್ದಾರೆಂದು ಇತ್ತೀಚೆಗೆ ವಿಜಯ್ ಟಾಟಾ ಆರೋಪ ಮಾಡಿದ್ದರು. ಅವರ ದೂರಿನ ಅನ್ವಯ ಮಾಜಿ ಎಂಎಲ್​ಸಿ ರಮೇಶ್ ಗೌಡ ಹಾಗೂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

ಇನ್ನು ರಮೇಶ್ ಗೌಡ ಕೂಡ 5 ಕೋಟಿ ರೂ. ಡಿಮ್ಯಾಂಡ್ ಮಾಡಿ ಬೆದರಿಸಿದ್ದಾರೆ ಅಂತ‌ ಕೂಡ ದೂರು ನೀಡಲಾಗಿತ್ತು. ರಮೇಶ್ ಗೌಡ ವಾಟ್ಸಪ್ ಚಾಟ್ ಕೂಡ ಮಾಡಿದ್ದರು ಎಂದು ದೂರಿನಲ್ಲಿ‌ ಉಲ್ಲೇಖಿಸಿದ್ದಾರೆ. ಆದರೆ ವಾಟ್ಸಪ್ ಚಾಟ್ ಹಾಗೂ ಫೋನ್ ಕರೆ ಬಗ್ಗೆ ದೂರುದಾರ ವಿಜಯ್ ಟಾಟಾ ಯಾವುದೇ ದಾಖಲಾತಿ‌ ನೀಡಿಲ್ಲ. ಪೊಲೀಸರ ಮುಂದೆ ಹಾಜರಾದ ವೇಳೆ ಪ್ರಾಥಮಿಕ ದಾಖಲೆ ಒದಗಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚಿನ ಬಗ್ಗೆ ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿಖಿಲ್ ಕುಮಾರಸ್ವಾಮಿ ಪರ‌ ಸೋಶಿಯಲ್​ ಮೀಡಿಯಾ ಪ್ರಚಾರ ಮಾಡಲಾಗಿತ್ತು. ಪ್ರಚಾರಕ್ಕೆ ತಮ್ಮ ಕೈಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಯಾವ ದಾಖಲಾತಿ ನೀಡಿಲ್ಲವಂತೆ. ಹೀಗಾಗಿ ಮಾಡಿರುವ ಆರೋಪಕ್ಕೆ ಪ್ರಾಥಮಿಕ ದಾಖಲಾತಿ‌ ನೀಡದ ಕಾರಣ ತನಿಖೆಗೆ ವೇಗವಿಲ್ಲದಂತಾಗಿದೆ.

ಇದನ್ನೂ ಓದಿ: ಎಫ್​ಐಆರ್​ ದಾಖಲಾದ ಬಳಿಕ ನಾನು ಯಾರು ಅಂತ ಗೊತ್ತಾಗಿದೆ: ಕುಮಾರಸ್ವಾಮಿಗೆ ವಿಜಯ್ ಟಾಟಾ ಟಾಂಗ್​

ಪ್ರಾಥಮಿಕ ದಾಖಲಾತಿ ನೀಡಿದ ನಂತರ ತನಿಖೆಯ ಮುಂದಿನ ಪ್ರಕ್ರಿಯೆ ಶುರುವಾಗಲಿದೆ. ಬಳಿಕ 41(ಎ) ಅಡಿ ವಿಚಾರಣೆಗೆ ಹಾಜರಾಗಿ ಎಂದು ಹೆಚ್​ಡಿ ಕುಮಾರಸ್ವಾಮಿ ಹಾಗೂ ರಮೇಶ್ ಗೌಡಗೆ ನೋಟಿಸ್‌ ನೀಡುವ ಸಾಧ್ಯತೆ ಇದೆ. ಸದ್ಯ ಮುಂದಿನ‌ ತನಿಖಾ ಪ್ರಕ್ರಿಯೆಗೆ ದೂರುದಾರರ ವಿಳಂಬ ಅಡ್ಡಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:00 am, Sun, 6 October 24

ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ