ಹಂಪಿಯಲ್ಲಿ ಜಿ-20 ಶೃಂಗಸಭೆ: ಹಿಂದಿನ ಎರಡು ಸಿಡಬ್ಲೂಜಿ ಸಭೆಗಳ ಶಿಫಾರಸುಗಳ ಮೇಲೆ ಸಹಮತ ಮೂಡಿಸಲು ಹೆಚ್ಚಿನ ಒತ್ತು

ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಮೂರನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆ ಕರ್ನಾಟಕದ ಹಂಪಿಯಲ್ಲಿ ಇಂದು ತೆರೆಕಂಡಿದೆ. 3ನೇ ಸಿಡಬ್ಲೂಜಿ ಗೋಷ್ಠಿಯು ವಾರಣಾಸಿಯಲ್ಲಿ 2023ರ ಆಗಸ್ಟ್ 26ರಂದು ನಡೆಯಲಿದೆ.

ಹಂಪಿಯಲ್ಲಿ ಜಿ-20 ಶೃಂಗಸಭೆ: ಹಿಂದಿನ ಎರಡು ಸಿಡಬ್ಲೂಜಿ ಸಭೆಗಳ ಶಿಫಾರಸುಗಳ ಮೇಲೆ ಸಹಮತ ಮೂಡಿಸಲು ಹೆಚ್ಚಿನ ಒತ್ತು
ಜಿ-20 ಶೃಂಗಸಭೆ
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 12, 2023 | 5:29 PM

ವಿಜಯನಗರ-ಹಂಪಿ: ಭಾರತದ ಜಿ-20 (G-20 Summit) ಅಧ್ಯಕ್ಷತೆಯಲ್ಲಿ ಮೂರನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆ ಕರ್ನಾಟಕದ ಹಂಪಿಯಲ್ಲಿ ಇಂದು ತೆರೆಕಂಡಿದೆ. 3ನೇ ಸಿಡಬ್ಲೂಜಿ ಗೋಷ್ಠಿಯು ವಾರಣಾಸಿಯಲ್ಲಿ 2023ರ ಆಗಸ್ಟ್ 26ರಂದು ನಡೆಯಲಿರುವ ಮುಂಬರುವ ಜಿ-20 ಸಂಸ್ಕೃತಿ ಸಭೆಯ ತಾಜಾ ಮಾಹಿತಿ ಹಾಗೂ ಬೆಳವಣಿಗೆಗಳೊಂದಿಗೆ 3ನೇ ಸಿಡಬ್ಲೂಜಿಯ ಅಂತಿಮ ಗೋಷ್ಠಿ ಮುಕ್ತಾಯವಾಯಿತು.

ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ, ಸಿಡಬ್ಲೂಜಿಯು ನೀತಿ ರಚನೆಯಲ್ಲಿ ಸಂಸ್ಕೃತಿಯನ್ನು ಕೇಂದ್ರ ಬಿಂದುವನ್ನಾಗಿರಿಸಲು ಶ್ರಮಿಸುತ್ತದೆ. ಕ್ರಮವಾಗಿ ಖಜುರಾಹೊ ಮತ್ತು ಭುವನೇಶ್ವರದಲ್ಲಿ ಆಯೋಜಿಸಲಾದ ಹಿಂದಿನ ಎರಡು ಸಿಡಬ್ಲೂಜಿ ಸಭೆಗಳಲ್ಲಿ ಚರ್ಚಿಸಲಾದ ಶಿಫಾರಸುಗಳ ಮೇಲೆ ಒಮ್ಮತವನ್ನು ಸಾಧಿಸುವತ್ತ 3ನೇ ಸಿಡಬ್ಲೂಜಿ ಗಮನಹರಿಸಿತು.

ಸಾಂಸ್ಕೃತಿಕ ಮೇಳದ ಅನುಭವದ ಭಾಗವಾಗಿ ನಿನ್ನೆ, ಹಂಪಿಯಲ್ಲಿನ ಐತಿಹಾಸಿಕ ರಾಣಿಯ ಸ್ನಾನದ ಕೋಣೆಯ ಜಾಗದಲ್ಲಿ ಸಸಿಗಳನ್ನು ನೆಡುವ ಚಟುವಟಿಕೆ ಕೈಗೊಳ್ಳಲಾಗಿತ್ತು. ಪ್ರತಿನಿಧಿಗಳಿಗೆ ರಾಜ ಸಂಭಾಗಣದ ವೀಕ್ಷಣೆಗೆ ಮಾರ್ಗದರ್ಶನ ನೀಡಲಾಯಿತು, ಅವರು ಆ ಪ್ರದೇಶದಲ್ಲಿನ ಶ್ರೀಮಂತ ಪರಂಪರೆ ಮತ್ತು ವಾಸ್ತುಶಿಲ್ಪ ವೈಭವವನ್ನು ಶ್ಲಾಘಿಸಿದರು. ಪ್ರಯಾಣದ ವೇಳೆ ಪ್ರತಿನಿಧಿಗಳು ವಿರೂಪಾಕ್ಷ ದೇವಾಲಯದ ಮುಂದಿರುವ ಎದುರು ಬಸವಣ್ಣ ಸಂಕೀರ್ಣದತ್ತ ಸಾಗಿದರು.

ಇದನ್ನೂ ಓದಿ: ಸಂಸ್ಕೃತಿ, ಪರಂಪರೆ ಭೂತಕಾಲದ ಆಧಾರ ಸ್ತಂಭ ಮತ್ತು ಭವಿಷ್ಯಕ್ಕೆ ದಾರಿದೀಪ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ

ಈ ಸುಂದರವಾದ ಸ್ಥಳದಲ್ಲಿ, ಶ್ರೀಮತಿ ಕೌಸಲ್ಯ ರೆಡ್ಡಿ ಅವರಿಂದ ಆಯೋಜಿತವಾಗಿದ್ದ ರಾಧಾ ಮತ್ತು ರಾಜಾ ರೆಡ್ಡಿ ಗುರುಗಳ ತಂಡಗಳಿಂದ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಅವರು ದಕ್ಷಿಣ ಭಾರತದಿಂದ ನಾಲ್ಕು ವಿಭಿನ್ನ ನೃತ್ಯ ಶೈಲಿಗಳನ್ನು ಪ್ರದರ್ಶಿಸಿದರು, ಅವುಗಳೆಂದರೆ ತಮಿಳುನಾಡಿನ ಭರತನಾಟ್ಯಂ, ಕೇರಳದಿಂದ ಮೋಹಿನಿಯಾಟ್ಟಂ, ಆಂಧ್ರಪ್ರದೇಶದ ಕೂಚಿಪುಡಿ ಮತ್ತು ಒಡಿಶಾದಿಂದ ಒಡಿಸ್ಸಿ. ಸ್ಮಾರಕಗಳ ಹಿನ್ನೋಟದಲ್ಲಿ ಈ ಅದ್ಭುತ ಪ್ರದರ್ಶನವು ಪ್ರತಿನಿಧಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ಜುಲೈ 10ರಂದು ಕರ್ನಾಟಕದ ಹಂಪಿಯಲ್ಲಿ ಜಿ-20 ಸಂಸ್ಕೃತಿ ಕಾರ್ಯಕಾರಿ ಗುಂಪು (ಸಿಡಬ್ಲೂಜಿ)ನ ಉದ್ಘಾಟನಾ ಗೋಷ್ಠಿ ನಡೆಯಿತು. ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ನೀತಿ ರಚನೆಯಲ್ಲಿ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಳ್ಳುವುದು ಮಹತ್ವದ ಹೆಜ್ಜೆಯಾಗಿಸುವ ನಿಟ್ಟಿನಲ್ಲಿ ನಾವು ನಾಲ್ಕು ಆದ್ಯತೆಗಳನ್ನು ಗುರುತಿಸುವ ಮತ್ತು ಚರ್ಚಿಸುವ ಮೂಲಕ ಕ್ರಮ-ಆಧಾರಿತ ಶಿಫಾರಸುಗಳ ಕುರಿತು ಸಹಮತವನ್ನು ಮೂಡಿಸುವಲ್ಲಿ ಪ್ರಗತಿ ಹೊಂದಿದ್ದೇವೆ. ನಾಲ್ಕು ಆದ್ಯತೆಯ ವಲಯಗಳೆಂದರೆ: ಸಾಂಸ್ಕೃತಿಕ ಆಸ್ತಿಯ ರಕ್ಷಣೆ ಮತ್ತು ಮರುಸ್ಥಾಪನೆ; ಸುಸ್ಥಿರ ಭವಿಷ್ಯಕ್ಕಾಗಿ ಜೀವಂತ ಪರಂಪರೆ ಬಳಸಿಕೊಳ್ಳುವುದು; ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳು ಮತ್ತು ಸೃಜನಾತ್ಮಕ ಆರ್ಥಿಕತೆಯ ಪ್ರಚಾರ; ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ನಿಯಂತ್ರಿಸುವುದು ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Hampi: ಐತಿಹಾಸಿಕ ಹಂಪಿಯಲ್ಲಿ ಜುಲೈ 12ರವರೆಗೂ ಜಿ20 ಸಿಡಬ್ಲ್ಯುಜಿ ಸಭೆ; 29 ದೇಶಗಳ 50 ಪ್ರತಿನಿಧಿಗಳು ಭಾಗಿ

ಜುಲೈ 10ರಂದು ಸಂಜೆ ಪ್ರತಿನಿಧಿಗಳನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಹಂಪಿಯ ಸಮೂಹ ಸ್ಮಾರಕಗಳ ಗುಂಪಿನಲ್ಲಿ ವಿಜಯ ವಿಠಲ ಮಂದಿರ, ರಾಜ ಸಭಾಂಗಣ ಮತ್ತು ಎದುರು ಬಸವಣ್ಣ ಸಂಕೀರ್ಣಗಳಿಗೆ ಸುತ್ತಾಟಕ್ಕೆ ಕರೆದೊಯ್ಯಲಾಗಿತ್ತು. ತುಂಗಭದ್ರಾ ನದಿಯಲ್ಲಿ ದೋಣಿ ವಿಹಾರಕ್ಕೂ ಕರೆದೊಯ್ಯಲಾಗಿತ್ತು.

ಘಟಂ ಅನ್ನು ನಮ್ಮ ಶಾಸ್ತ್ರೀಯ ಸಂಗೀತ ಸಂಪ್ರದಾಯಗಳ ಪ್ರಮುಖ ಭಾಗವನ್ನಾಗಿಸಿ ವಿಶ್ವ ಸಂಗೀತಗಾರರ ಜೊತೆಗಿನ ಫ್ಯೂಷನ್ ಸಂಗೀತ ಕಾರ್ಯಕ್ರಮಗಳ ಮೂಲಕ ವಿಶ್ವ ವೇದಿಕೆಗೆ ಕೊಂಡೊಯ್ದ ಖ್ಯಾತ ಸಂಗೀತಗಾರ ವಿಕ್ಕು ವಿನಾಯಕರಾಮ್ ಅವರ ತಾಳವಾದ್ಯವನ್ನು ಪ್ರತಿನಿಧಿಗಳು ಆನಂದಿಸಿದರು. ವಿಜಯ ವಿಠಲ ದೇವಾಲಯದ ಸಂಕೀರ್ಣದ ಅವಶೇಷಗಳ ಹಿನ್ನೋಟದಲ್ಲಿ 30 ನಿಮಿಷಗಳ ಸಂವಾದಾತ್ಮಕ ಪ್ರಸ್ತುತಿಯಲ್ಲಿ ಭರತನಾಟ್ಯಂ ನೃತ್ಯಪಟುಗಳು ವಿಜಯನಗರ ಸಾಮ್ರಾಜ್ಯದ ವೈಭವವನ್ನು ಜೀವಂತಗೊಳಿಸಿದರು.

ಇಂದು ಕರ್ನಾಟಕದ ಹಂಪಿಯ ಹಜಾರ ರಾಮ ದೇವಸ್ಥಾನದಲ್ಲಿ ಜಿ20 ಪ್ರತಿನಿಧಿಗಳು ಯೋಗ ಅಧಿವೇಶನದಲ್ಲಿ ಪಾಲ್ಗೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!