CET Exam: ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆ: ಕಂಗಾಲಾದ ವಿದ್ಯಾರ್ಥಿಗಳು, ಪೋಷಕರು
ಸಿಇಟಿ ಪರೀಕ್ಷೆಗಳಲ್ಲಿ ಕೇಳಲಾದ ಜೀವಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳ ಕೈಬಿಟ್ಟಿರೋ ಪಠ್ಯಕ್ರಮ ಹಾಗೂ ವಿಷಯಗಳ ಪ್ರಶ್ನೆ ಕೇಳಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವಾಗಿದೆ. ಸದ್ಯ ಸಿಇಟಿ ಪರೀಕ್ಷೆಗಳ ಇಂದು ಮುಗಿದ್ದಿದ್ದರೂ ಕೈಬಿಟ್ಟಿರೋ ಪಠ್ಯಕ್ರಮ ಹಾಗೂ ವಿಷಯಗಳ ಪ್ರಶ್ನೆ ಕೇಳಿದ್ದು ವಿದ್ಯಾರ್ಥಿಗಳ ಮಾನಸೀಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಮತ್ತು ಸಿಇಟಿ ತರಬೇತುದಾರ ಕೆಎಸ್ ಶ್ರೀಕಾಂತ ಆರೋಪಿಸಿದ್ದಾರೆ.
ವಿಜಯಪುರ, ಏಪ್ರಿಲ್ 19: ಕರ್ನಾಟಕ ರಾಜ್ಯಾದ್ಯಂತ ನಡೆದ ವಿವಿಧ ವೃತ್ತಿಪರ ಕೋರ್ಸಗಳ ಸಾಮಾನ್ಯ ಪ್ರವೇಶ ಪರೀಕ್ಷೆ (CET Exam) ಯಲ್ಲಿ ಕೈಬಿಟ್ಟಿರುವ ಪಠ್ಯಕ್ರಮ ಹಾಗೂ ವಿಷಯಗಳ ಪ್ರಶ್ನೆಗಳನ್ನು ಕೇಳಲಾಗಿದೆ. ಇದರಿಂದ ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ (Students) ಭವಿಷ್ಯಕ್ಕೆ ಮಾರಕವಾಗಿದೆ ಎಂಬ ಆಕ್ರೋಶದ ಜೊತೆಗೆ ಕೃಪಾಂಕ ನೀಡುವಂತೆ ಆಗ್ರಹ ಕೇಳಿ ಬಂದಿದೆ. ಈ ಕುರಿತು ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಮತ್ತು ಸಿಇಟಿ ತರಬೇತುದಾರ ಕೆಎಸ್ ಶ್ರೀಕಾಂತ ಆರೋಪ ಮಾಡಿದ್ದಾರೆ. ನಿನ್ನೆ ಹಾಗೂ ಇಂದು ರಾಜ್ಯಾದ್ಯಂತ ನಡೆದ ವಿವಿಧ ವೃತ್ತಿಪರ ಕೋರ್ಸಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೈಬಿಟ್ಟಿರುವ ಪಠ್ಯಕ್ರಮ ಹಾಗೂ ವಿಷಯಗಳ ಪ್ರಶ್ನೆಗಳನ್ನು ಕೇಳಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಹಾಗೂ ಆತಂಕ ಉಂಟು ಮಾಡಲಾಗಿದೆ ಎಂಬ ಆರೋಪಿಸಿದ್ದಾರೆ.
ವಿದ್ಯಾರ್ಥಿ ಸ್ನೇಹಿ ಪ್ರಶ್ನೆ ಪತ್ರಿಕೆ ತಯಾರಿಸಬೇಕು
ಜೀವಶಾಸ್ತ್ರ ಪರೀಕ್ಷೆಯಲ್ಲಿ ಕಡಿತಗೊಳಿಸಲಾದ ಪಠ್ಯ ಕ್ರಮದಿಂದ 10 ಪ್ರಶ್ನೆಗಳನ್ನು ಕೇಳಿದರೆ, ಗಣಿತದಲ್ಲಿ 11 ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಗಳ ಕನಸಿಗೆ ಕೊಕ್ಕೆ ಹಾಕಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೋರ್ಡನಿಂದ ನಡೆಸುವ ಪರೀಕ್ಷಾ ಪ್ರಶ್ನೆ ಪತ್ರಿಕೆಯಾಗಲಿ, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ ಇ ಟಿ) ಯಾಗಲಿ ವಿದ್ಯಾರ್ಥಿ ಸ್ನೇಹಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸಬೇಕು. ಹಾಗೆಂದ ಮಾತ್ರಕ್ಕೆ ಸರಳ ಪ್ರಶ್ನೆಗಳನ್ನು ಕೇಳಬೇಕೆಂದಲ್ಲ ಎಂದೂ ಸಮಜಾಯಿಸಿ ನೀಡಿದ್ದಾರೆ.
ಇದನ್ನೂ ಓದಿ: CET Exam: ಇಂದಿನಿಂದ ಸಿಇಟಿ ಪರೀಕ್ಷೆ; ಪರೀಕ್ಷಾ ಕೇಂದ್ರ ನಿಗದಿಪಡಿಸುವಲ್ಲಿ ಕೆಇಎ ಎಡವಟ್ಟು
ಕಠಿಣ ಪ್ರಶ್ನೆಗಳು ಇದ್ದರೂ ಕೂಡ ಕೈಬಿಟ್ಟಿರೋ ಪಠ್ಯಕ್ರಮ ಹಾಗೂ ವಿಷಯಗಳ ಪ್ರಶ್ನೆಗಳು ಬಂದರೆ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುವುದು ಸಹಜ. ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ ಮತ್ತು ಅದರ ಬಗ್ಗೆ ಪರಿಪೂರ್ಣ ಜ್ಞಾನವಿರುವದಿಲ್ಲ. ಹೀಗಿದ್ದಾಗ ಕೋವಿಡ್ ಸಂದರ್ಭದಲ್ಲಿ ಜೀವಶಾಸ್ತ್ರ ಪಠ್ಯದಲ್ಲಿ ಕಡಿತಗೊಳಿಸಲಾದ 5 ಅಧ್ಯಾಯಗಳಿಂದ 10 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಾಗಿರುವ ಲೋಪದ ಕುರಿತು ಮಾಹಿತಿ ನೀಡಿದ್ದಾರೆ.
ಗಣಿತ ವಿಷಯ ಪಠ್ಯದಿಂದ ಕೈ ಬಿಟ್ಟಿರುವ 3 ಪಠ್ಯಗಳಿಂದ ಸಿಇಟಿ ಪರೀಕ್ಷೆಯಲ್ಲಿ 11 ಪ್ರಶ್ನೆಗಳನ್ನು ಕೇಳಲಾಗಿದೆ. ಇನ್ನುಳಿದಂತೆ ಇಂದು ನಡೆದ ಭೌತಶಾಸ್ತ್ರ ವಿಷಯದಲ್ಲಿ ಕೈಬಿಟ್ಟಿರುವ ಕೆಲ ವಿಷಯಗಳಿಂದ 5 ಪ್ರಶ್ನೆಗಳನ್ನು ಕೇಳಲಾಗಿದೆ. ರಸಾಯನ ಶಾಸ್ತ್ರದಲ್ಲಿ ಕೈ ಬಿಟ್ಟಿರೋ 8 ಪಠ್ಯಗಳಿಂದ 18 ಪ್ರಶ್ನೆಗಳನ್ನು ಕೇಳಲಾಗಿದೆ. ಈ ಕಾರಣಗಳಿಂದ ಸಿಇಟಿ ಎದುರಿಸಿರೋ ವಿದ್ಯಾರ್ಥಿಗಳಿಗೆ ಇದು ಸಮಸ್ಯೆಯಾಗಿದೆ. ಅತಿ ಹೆಚ್ಚು ಅಂಕ ಗಳಿಸಿ ರ್ಯಾಂಕ್ ಪಡೆದು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸಗಳನ್ನು ಸೇರುವ ಭವಿಷ್ಯ ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳ ಆಸೆಗೆ ತಣ್ಣೀರು ಎರೆಚಿದಂತಾಗಿದೆ ಎಂದು ಸಿಇಟಿ ಪರೀಕ್ಷಾ ಪ್ರಾಧಿಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಳೆಯ ಎನ್ಸಿಇಆರ್ಟಿ ಪಠ್ಯದಲ್ಲಿನ ಪ್ರಶ್ನೆಗಳು ಬಂದಿವೆ. ಹೊಸ ಪಠ್ಯದಲ್ಲಿ ಇಲ್ಲದಿರುವ ಪ್ರಶ್ನೆಗಳು ಬಂದಿದ್ದು ವಿದ್ಯಾರ್ಥಿಗಳಿಗೆ ಗೊಂದಲವಾಗಿದ್ದು ಸಹಜ. ಈ ದಿಸೆಯಲ್ಲಿ ಸಂಬಂಧಪಟ್ಟ ಇಲಾಖೆ ಅಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಕೆ ಇ ಎ) ಸೂಕ್ತ ಪರಿಹಾರ ಒದಗಿಸಿಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕೆಎಸ್ ಶ್ರೀಕಾಂತ ಹೇಳಿದ್ದಿಷ್ಟು
ಈ ಕುರಿತಾಗಿ ಮಾತನಾಡಿರುವ ಕೆಎಸ್ ಶ್ರೀಕಾಂತ, ಸಿಇಟಿ ಪರೀಕ್ಷೆಗಳಲ್ಲಿ ಕೇಳಲಾದ ಜೀವಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳ ಕೈಬಿಟ್ಟಿರೋ ಪಠ್ಯಕ್ರಮ ಹಾಗೂ ವಿಷಯಗಳ ಪ್ರಶ್ನೆ ಕೇಳಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವಾಗಿದೆ. ಸದ್ಯ ಸಿಇಟಿ ಪರೀಕ್ಷೆಗಳ ಇಂದು ಮುಗಿದ್ದಿದ್ದರೂ ಕೈಬಿಟ್ಟಿರೋ ಪಠ್ಯಕ್ರಮ ಹಾಗೂ ವಿಷಯಗಳ ಪ್ರಶ್ನೆ ಕೇಳಿದ್ದು ವಿದ್ಯಾರ್ಥಿಗಳ ಮಾನಸೀಕತೆಯ ಮೇಲೆ ಪರಿಣಾಮ ಬೀರಲಿದೆ.
ಈ ಪರಿಣಾಮ ಮುಂದೆ ಮೇ 5 ರಂದು ನಡೆಯಲಿರೋ ನೀಟ್ ಪರೀಕ್ಷೆ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ. ಇಲ್ಲಿ ಉಂಟಾದ ಗೊಂದಲದ ಕಾರಣ ಯಾವ ವಿಷಯ ಏನನ್ನು ಓದಬೇಕು ಎಂದು ವಿದ್ಯಾರ್ಥಿಗಳು ಗೊಂದಲಕ್ಕಿಡಾಗುತ್ತಾರೆ. ಜೊತೆಗೆ ಅಲ್ಲಿಯೂ ಇಂಥದ್ದೇ ಕೈಬಿಟ್ಟಿರೋ ಪಠ್ಯಕ್ರಮ ಹಾಗೂ ವಿಷಯಗಳ ಕುರಿತ ಪ್ರಶ್ನೆ ಕೇಳಿದರೆ ಹೇಗೆ ಎಂಬ ಆತಂಕ ಅವರಲ್ಲಿ ನೆಗೆಟಿವ್ ವಿಚಾರ ಬರುತ್ತಿದೆ. ಆದ್ದರಿಂದ ಕೆ ಇ ಎ ಬೋರ್ಡ್ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು. ಕೈಬಿಟ್ಟಿರೋ ಪಠ್ಯಕ್ರಮ ಹಾಗೂ ವಿಷಯಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕಿದೆ ಎಂದು ಹೇಳಿದ್ದಾರೆ.
ಕಂಗಾಲಾದ ಪೋಷಕರು
ಕೆಇಎ ಮಾಡಿರುವ ಈ ಎಡವಟ್ಟಿಗೆ ವಿದ್ಯಾರ್ಥಿಗಳ ಪೋಷಕರು ಕೂಡ ಕಂಗಲಾಗಿದ್ದಾರೆ. ತಮ್ಮ ಮಕ್ಕಳ ಭವಿಷ್ಯದ ಕುರಿತು ಅವರು ಚಿಂತಿತರಾಗಿರೋದು ಕಂಡು ಬಂದಿದೆ. ಹಲವಾರು ವಿಷಯಗಳ ಕೈ ಬಿಟ್ಟಿರುವ ಪಠ್ಯಗಳ ಮತ್ತು ವಿಷಯಗಳ ಕುರಿತು ಪ್ರಶ್ನೆಗಳನ್ನ ಕೇಳುವುದು ಏನು ಅಗತ್ಯವಿತ್ತು. ಇದು ನಮ್ಮ ಮಕ್ಕಳ ಭವಿಷ್ಯದ ಮೇಲೆ ಮಾನಸಿಕ ಸೀಮಿತದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಪೋಷಕರು ಹೊರಹಾಕಿದ್ದಾರೆ. ಈ ಕುರಿತು ಟಿವಿ 9 ಡಿಜಿಟಲ್ನೊಂದಿಗೆ ಮಾತನಾಡಿದ ಹಲವಾರು ಪೋಷಕರು, ಸಿಟಿಇ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳ ಕುರಿತು ತೀವ್ರ ಆತಂಕವನ್ನು ಹೊರ ಹಾಕಿದ್ದಾರೆ.
ಇದನ್ನೂ ಓದಿ: ಪ್ರಯತ್ನ ಯಶಸ್ಸಿಗೆ ಸೋಪಾನ: 2 ಬಾರಿ ಪಿಯುಸಿ ಫೇಲ್ ಆಗಿದ್ದ ಕರುನಾಡಿನ ಶಾಂತಪ್ಪ ಯುಪಿಎಸ್ಸಿ ಪಾಸ್
ಜೀವಶಾಸ್ತ್ರ ಗಣಿತ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳಲ್ಲಿ ಕೈ ಬಿಟ್ಟಿರುವ ಪಠ್ಯಗಳ ಹಾಗೂ ವಿಷಯಗಳ ಕುರಿತು ಪ್ರಶ್ನೆಗಳನ್ನ ಕೇಳಿದ್ದೆ ತಪ್ಪು. ಆ ಪಟ್ಟೆ ಮತ್ತು ವಿಷಯಗಳನ್ನ ಕಲಿಯದೆ ವಿದ್ಯಾರ್ಥಿಗಳು ಅವುಗಳ ಕುರಿತು ಪ್ರಶ್ನೆಗಳಿಗೆ ಹೇಗೆ ಉತ್ತರಿಸಲು ಸಾಧ್ಯ. ಹಾಗಾಗಿ ಆ ಪ್ರಶ್ನೆಗಳು ನಮ್ಮ ಮಕ್ಕಳ ಪಾಲಿಗೆ ಕಬ್ಬಿಣದ ಕಡೆಲೆಯಾಗಿವೆ. ಇಂಥ ಕಠಿಣ ಪ್ರಶ್ನೆಗಳಿಂದ ಇನ್ನುಳಿದ ಇತರ ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಗೊಂದಲಕ್ಕೆ ಈಡಾಗುವ ಸಾಧ್ಯತೆ ಇದೆ. ಹಾಗಾಗಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೈ ಬಿಟ್ಟಿರುವ ಪಟ್ಟೆಗಳ ಹಾಗೂ ವಿಷಯಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಕೃಪಾಕ ನೀಡಬೇಕೆಂದು ಮನವಿ ಮಾಡಿದ್ದಾರೆ.
ಪ್ರಶ್ನೆ ಪತ್ರಿಕೆಯಲ್ಲಿ ಔಟ್ ಆಫ್ ಸಿಲಿಬಸ್ ನೋಡಿದ ವಿದ್ಯಾರ್ಥಿಗಳಲ್ಲಿ ಜಂಘಾಬಲವೇ ಉಡುಗಿ ಹೋಗಿದೆ. ಒಂದಲ್ಲ ಎರಡಲ್ಲ ಹತ್ತಾರು ಇಂತಹ ಪ್ರಶ್ನೆಗಳನ್ನು ಗಮನಿಸಿದ ಪರೀಕ್ಷಾರ್ಥಿಗಳಿಗೆ ಉಳಿದ ಪ್ರಶ್ನೆಗಗಳಿಗೂ ಗಮನ ಹರಿಸದಂತಾಗಿದೆ. ಉತ್ತರ ತಿಳಿದಿದ್ದ ಪ್ರಶ್ನೆಗಳಿಗೂ ಅಟೆಂಡ್ ಮಾಡಲು ಅವರುಗಳಿಗೆ ಸಾಧ್ಯವಾಗಿಲ್ಲ. ಕತ್ತಲೆ ಆವರಿಸಿದಂತಾಗಿ ನಡುಕ ಹುಟ್ಟಿದೆ ವಿದ್ಯಾರ್ಥಿಗಳಲ್ಲಿ. ಇದೇನು ಮಕ್ಕಳು ಉದ್ಯೋಗಕ್ಕಾಗಿ ಐಎಎಸ್ ಪರೀಕ್ಷೆ ಬರೆಯುತಿದ್ದಾರಾ ಅಥವಾ ಶಿಕ್ಷಣ ಮುಂದುವರಿಸಲು ಜಸ್ಟ್ ಪ್ರವೇಶ ಪರೀಕ್ಷೆ ಬರೆಯುವಂತಿದೆಯೋ ತಿಳಿಯದಾಗಿದೆ ಎಂದು ಪೋಷಕರು ಮತ್ತು ಶಿಕ್ಷಣ ತಜ್ಞರು ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:31 pm, Fri, 19 April 24