AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ಟು ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಅವಧಿ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಡಿಸೆಂಬರ್ 2025 ರವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ನೈರುತ್ಯ ರೆಲ್ವೆ ಮಾಹಿತಿ ನೀಡಿದೆ. ಜುಲೈ 1 ರಿಂದ 07378 ಮಂಗಳೂರು-ವಿಜಯಪುರ ರೈಲಿನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿ ಮತ್ತು ವಿಸ್ತರಿತ ಅವಧಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಜಯಪುರ ಟು ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಅವಧಿ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಸಂಗ್ರಹ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on:Jun 18, 2025 | 7:58 AM

Share

ಬೆಂಗಳೂರು, ಜೂನ್​ 18: ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ (07377/07378) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ (Vijayapura to Mangaluru Central Express) ಸಂಚಾರ ಅವಧಿಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ (Railway Board) ಅನುಮೋದನೆ ನೀಡಿದೆ. ಜುಲೈ 1ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಈ ರೈಲುಗಳು ಈಗಿರುವ ಮಾರ್ಗ, ನಿಲುಗಡೆಗಳು ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಯಲಿದೆ.

ಈ ಹಿಂದೆ ಜೂನ್ 30ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಲ್ಪಟ್ಟಿದೆ. ಅದೇ ರೀತಿ, ಜುಲೈ 1 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಇದೀಗ ಜುಲೈ 2 ರಿಂದ 2026 ಜನವರಿ 1 ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ
Image
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
Image
ಬೆಳಗಾವಿಯಲ್ಲಿ ಹೆಚ್ಚಾದ ಮಳೆ ಅಬ್ಬರ: 6 ಸಂಪರ್ಕ ಸೇತುವೆಗಳು ಮುಳುಗಡೆ
Image
ಕರ್ನಾಟಕದ ಕರಾವಳಿ ಹೊರತುಪಡಿಸಿ ಉಳಿದೆಡೆ ಸಾಧಾರಣ ಮಳೆ
Image
ಮಳೆ ಅಬ್ಬರ ಜೋರು; ಮಂಗಳೂರು, ಚಿಕ್ಕಮಗಳೂರಿನ ಹಲವೆಡೆ ಅನಾಹುತ

ನೈರುತ್ಯ ರೆಲ್ವೆ ಟ್ವಿಟ್​

ಮಂಗಳೂರು ಸೆಂಟ್ರಲ್ ಟು ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಪರಿಷ್ಕೃತ ವೇಳಾಪಟ್ಟಿ

ಪರಿಷ್ಕೃತ ವೇಳಾಪಟ್ಟಿಯಂತೆ, 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್​ ರೈಲು ಮಂಗಳೂರು ಸೆಂಟ್ರಲ್‌ನಿಂದ 02:35 ಗಂಟೆಗೆ ಹೊರಡುವ ಬದಲು ಸಂಜೆ 04:45 ಗಂಟೆಗೆ ಹೊರಡಲಿದೆ. ನಂತರ ರೈಲು ಬಂಟವಾಳಕ್ಕೆ ಸಂಜೆ 5:30/5:32 ಗಂಟೆಗೆ, ಕಬಕಪುತ್ತೂರಿಗೆ 6 ಗಂಟೆ ಅಥವಾ 6: 2 ನಿಮಿಷಕ್ಕೆ ಸುಬ್ರಹ್ಮಣ್ಯ ರೋಡ್​ 6:50 ಅಥವಾ 7 ಗಂಟೆ, ಸಕಲೇಶಪುರಕ್ಕೆ 9:20 ಅಥವಾ 9:30 ಗಂಟೆಗೆ, ಹಾಸಕ್ಕೆ 10:20 ಅಥವಾ 10:30ಕ್ಕೆ ಅರಸೀಕೆರೆಗೆ 11:20 ಅಥವಾ 11:25 ಗಂಟೆಗೆ, ಕಡೂರಿಗೆ 11:59 ಅಥವಾ ರಾತ್ರಿ 12 ಗಂಟೆಗೆ, ಬೀರೂರಿಗೆ 12:08 ಅಥವಾ 12:09 ಗಂಟೆಗೆ, ಚಿಕ್ಕಜಾಜೂರಿಗೆ 01:10 ಅಥವಾ 01:12 ಗಂಟೆಗೆ, ದಾವಣಗೆಗೆ 01:48 ಅಥವಾ 01:50, ಹರಿಹರಕ್ಕೆ 02:03 ಅಥವಾ 02:05, ರಾಣೆಬೆನ್ನೂರಿಗೆ 2:25 ಅಥವಾ 2:27ಕ್ಕೆ ಬ್ಯಾಡಗಿಗೆ 02:44 ಅಥವಾ 02:46 ಗಂಟೆಗೆ ಮತ್ತು ಎಸ್‌ಎಂಎಂ ಹಾವೇರಿಗೆ 03 ಅಥವಾ 03:02 ಗಂಟೆಗೆ ಆಗಮಿಸಿ ಮತ್ತೆ ಹೊರಡುತ್ತದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಹೆಚ್ಚಾದ ಮಳೆ ಅಬ್ಬರ: 6 ಸಂಪರ್ಕ ಸೇತುವೆಗಳು ಮುಳುಗಡೆ

ಇದಾದ ನಂತರ, ರೈಲು ಯಲವಿಗಿಗೆ 03:32 ಅಥವಾ 03:33 ಗಂಟೆಗೆ, ಎಸ್‌ಎಸ್ಎಸ್ ಹುಬ್ಬಳ್ಳಿಗೆ 04:40 ಅಥವಾ 04:50 ಗಂಟೆಗೆ, ಅಣ್ಣಿಗೇರಿಗೆ 05:20 ಅಥವಾ 05:21 ಗಂಟೆಗೆ, ಗದಗಕ್ಕೆ 06:15 ಅಥವಾ 06:20 ಗಂಟೆಗೆ, ಮಲ್ಲಾಪುರಕ್ಕೆ 06:49 ಅಥವಾ 06:50 ಗಂಟೆಗೆ, ಹೋಳೆ ಆಲೂರಿಗೆ 07:07 ಅಥವಾ 07:08, ಬಾದಾಮಿಗೆ 07:29 ಅಥವಾ 07:30, ಗುಳೇದ್​ಗುಡ್ಡ ರೋಡ್​ಗೆ 07:43 ಅಥವಾ 07:44 ಗಂಟೆಗೆ, ಬಾಗಲಕೋಟೆಗೆ 07:56 ಅಥವಾ 07:58 ಗಂಟೆಗೆ, ಆಲಮಟ್ಟಿಗೆ 08:37 ಅಥವಾ 08:38 ಗಂಟೆಗೆ, ಮತ್ತು ಬಸವನ ಬಾಗೇವಾಡಿ ರೋಡ್​ಗೆ 08:59 ಅಥವಾ 09:00 ಗಂಟೆಗೆ ಆಗಮಿಸಿ ಹೊರಡಲಿದೆ. ಈ ರೈಲು ಮೊದಲು 09:35 ಗಂಟೆಗೆ ತಲುಪುತ್ತಿದ್ದು, ಇದೀಗ ಪರಿಷ್ಕೃತ ವೇಳಾಪಟ್ಟಿಯಂತೆ 11:15 ಗಂಟೆಗೆ ತಲುಪಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:56 am, Wed, 18 June 25