ವಿಜಯಪುರದಲ್ಲಿ ಭೀಕರ ಅಪಘಾತ: ರಸ್ತೆ ಬದಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ, ನಾಲ್ವರು ದುರ್ಮರಣ

ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ಹರಿದ ಅಪರಿಚಿತ ವಾಹನ ಹರಿದಿದೆ. ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ವಿಜಯಪುರದ ಹೊರವಲಯದಲ್ಲಿರುವ ಟೋಲ್​ ಗೇಟ್ ಬಳಿ ನಡೆದಿದ್ದು, ಯುವಕರಿಗೆ ಗುದ್ದಿದ ವಾಹನ ಪರಾರಿಯಾಗಿದೆ.

ವಿಜಯಪುರದಲ್ಲಿ ಭೀಕರ ಅಪಘಾತ: ರಸ್ತೆ ಬದಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ, ನಾಲ್ವರು ದುರ್ಮರಣ
Edited By:

Updated on: Oct 18, 2023 | 6:55 AM

ವಿಜಯಪುರ, (ಅಕ್ಟೋಬರ್ 18): ಅಪರಿಚಿತ ವಾಹನವೊಂದು ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ವಿಜಯಪುರದ (Vijayapura) ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಟೋಲ್​ಗೇಟ್ ಬಳಿ ನಡೆದಿದೆ. ಟ್ರಕ್ ಬೈಲ್ ಬಳಿಯ ಸರ್ವೀಸ್ ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ವಾಹನ ಹರಿದಿದೆ. ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ವಿಜಯಪುರದ ವಜ್ರಹನುಮಾನ್ ನಗರದ ಶಿವಾನಂದ ಚೌಧರಿ(25), ಸುನೀಲ್​(26), ಈರಣ್ಣ(26), ಪ್ರವೀಣ್ ಪಾಟೀಲ್(30) ಮೃತ ದುರ್ವೈವಿಗಳು.

ಅಪರಿಚಿತ ವಾಹನ ಎರಡು ಬೈಕ್ ಮೇಲೂ ಹರಿದು ಪರಾರಿಯಾಗಿದೆ. ಎರಡೂ ಬೈಕ್‌ಗಳು ಜಖಂ ಆಗಿವೆ. KA28 EZ 7126 ಹಾಗೂ KA28 W 9952 ನಂಬರಿನ ಪಲ್ಸರ್ ಹಾಗೂ ಸಿಬಿಝಡ್ ಬೈಕ್‌ಗಳಾಗಿವೆ. ಸ್ಥಳೀಯರ ಮಾಹಿತಿ ಪ್ರಕಾರ MH12 QW 8521 ನಂಬರಿನ ಲಾರಿ ಗುದ್ದಿ ಪರಾರಿಯಾಗಿದೆ. ವಾಹನ ಬಂದು ಗುದ್ದಿದ ರಭಸಕ್ಕೆ ಬೈಕ್​ ಹಾಗೂ ನಾಲ್ವರು ಯುವಕರ ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿವೆ.

ಇನ್ನು ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us