AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ ಪ್ರಚಾರದಿಂದ ಬಳಲಿರುವ ಮಾಜಿ ಪ್ರಧಾನಿ; ಫಿಸಿಯೋಥೆರಪಿ ಹಾಗೂ ಮಸಾಜ್ ಟ್ರೀಟ್ಮೆಂಟ್ ಮೊರೆ ಹೋದ ಹೆಚ್.ಡಿ.ದೇವೇಗೌಡ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಿಂದಗಿ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸತತ ಪ್ರಚಾರದಿಂದ ಬಳಲುತ್ತಿರುವ ಅವರು ಟ್ರೀಟ್ಮೆಂಟ್ ಮೊರೆ ಹೋಗಿದ್ದಾರೆ.

ಸತತ ಪ್ರಚಾರದಿಂದ ಬಳಲಿರುವ ಮಾಜಿ ಪ್ರಧಾನಿ; ಫಿಸಿಯೋಥೆರಪಿ ಹಾಗೂ ಮಸಾಜ್ ಟ್ರೀಟ್ಮೆಂಟ್ ಮೊರೆ ಹೋದ ಹೆಚ್.ಡಿ.ದೇವೇಗೌಡ
ಟ್ರೀಟ್ಮೆಂಟ್ ಪಡೆಯುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
TV9 Web
| Updated By: shivaprasad.hs|

Updated on:Oct 28, 2021 | 10:54 AM

Share

ವಿಜಯಪುರ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಸಿಂದಗಿ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಪ್ರಚಾರದಲ್ಲಿ ಸತತವಾಗಿ ತೊಡಗಿಕೊಂಡಿದ್ದಾರೆ. ನಿರಂತರ ಪ್ರಚಾರದಿಂದ ಬಳಲಿರುವ ಅವರು, ಇದೀಗ ಫಿಸಿಯೋಥೆರಪಿ ಹಾಗೂ ಮಸಾಜ್ ಟ್ರೀಟ್ಮೆಂಟ್ ಮೊರೆ ಹೋಗಿದ್ದಾರೆ. ಮಂಡಿನೋವು, ಸೊಂಟ ನೋವು ಸಮಸ್ಯೆಗೆ ಮಾಜಿ ಪ್ರಧಾನಿ ಚಿಕಿತ್ಸೆ ಪಡೆದಿದ್ದಾರೆ. ವಿಜಯಪುರ ನಗರದ ವೈದ್ಯ ಡಾ. ಬಾಬು ಅವರು ಚಿಕಿತ್ಸೆ ನೀಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 27) ಪ್ರಚಾರದ ವೇಳೆ ಬೈಕ್ ಮೇಲೆ ಹತ್ತಿ ದೇವೇಗೌಡರು ಪ್ರಚಾರ ನಡೆಸಿದ್ದರು. ದೇವೇಗೌಡರು ಕಳೆದ‌ 10 ದಿನಗಳಿಂದ ಪಿಜಿಯೋಥೆರಪಿ ಹಾಗೂ ಮಸಾಜ್ ಮೊರೆ ಹೋಗಿದ್ದು, ದಿನಕ್ಕೆ ಎರಡು ಬಾರಿ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಡಾ.ಬಾಬು ಚಿಕಿತ್ಸೆ ನೀಡುತ್ತಿದ್ದಾರೆ.

2023 ಚುನಾವಣೆಯಲ್ಲಿ ಇರ್ತೀನೋ ಗೊತ್ತಿಲ್ಲ; ಜೀವನದ ಅಂತ್ಯದಲ್ಲಿ ಜೆಡಿಎಸ್​ಗೆ ಬೆಂಬಲ ನೀಡಿ: ಹೆಚ್​ಡಿ ದೇವೇಗೌಡ ನಾನು ಮುಂದಿನ ಚುನಾವಣೆಗೆ ಭಾಷಣ ಮಾಡ್ತೀನೋ ಗೊತ್ತಿಲ್ಲ. 2023ರ ಚುನಾವಣೆಯಲ್ಲಿ ನಾನು ಇರ್ತಿನೋ ಇಲ್ವೊ ಗೊತ್ತಿಲ್ಲ. ನನ್ನ ಜೀವನದ ಅಂತ್ಯದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲವನ್ನ ನೀಡಿ ಎಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಭಾಷಣ ಮಾಡುತ್ತಾ ನಿನ್ನೆ (ಅಕ್ಟೋಬರ್ 27) ನುಡಿದಿದ್ದರು. ಟೀಕೆ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್​ನವರ ಮಾತಿಗೆ ಯಾವುದೇ ಮನ್ನಣೆ ಕೊಡಬೇಕಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು.

ಕಾಂಗ್ರೆಸ್, ಬಿಜೆಪಿಯವರು ಹಣ ಹಂಚಲು ಬರುತ್ತಾರೆ: ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ಅಕ್ಟೋಬರ್ 30 ರಂದು ವಿಜಯಪುರ ಜಿಲ್ಲೆ ಸಿಂದಗಿ ಉಪಚುನಾವಣೆ ನಡೆಯಲಿದೆ. ನಾಳೆಯಿಂದ ಹಣ ಹಂಚಲು ಶುರು ಮಾಡುತ್ತಾರೆ. ಕಾಂಗ್ರೆಸ್, ಬಿಜೆಪಿಯವರು ಹಣ ಹಂಚಲು ಆರಂಭಿಸ್ತಾರೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳೋಕೆ ಏನೂ ಇಲ್ಲ. ಹೀಗಾಗಿ ಹಣ ಹಂಚಿ ಮತ ಕೇಳಲು ನಿಮ್ಮ ಬಳಿ ಬರ್ತಾರೆ ಎಂದು ಸಿಂದಗಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ನಿನ್ನೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಇಬ್ಬರು ಆರೋಪಿಗಳು ಅರೆಸ್ಟ್!

ಇನ್ಸ್‌ಪೆಕ್ಟರ್ ಮುರುಗೇಶ ಚೆನ್ನಣ್ಣವರ್ ಮತ್ತೊಂದು ಸಾಹಸ, ಡ್ರಗ್ಸ್ ವಿರುದ್ಧ ಅಭಿಯಾನಕ್ಕೆ ಸೈಕಲ್ ಏರಿ ಕಾಶ್ಮೀರ ಟು ಕನ್ಯಾಕುಮಾರಿ ಪ್ರಯಾಣ

Published On - 9:50 am, Thu, 28 October 21