Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನಿನಲ್ಲಿ ದಾರಿ ಬಿಡಲು ಒತ್ತಾಯ ಪೂರ್ವಕ ಸಹಿ; ತಹಶೀಲ್ದಾರ್ ಕಚೇರಿ ಎದುರು ವಿಷದ ಬಾಟಲ್ ಹಿಡಿದು ಮಹಿಳೆ ಪ್ರತಿಭಟನೆ

ಪಕ್ಕದ ಜಮೀನಿನವರಿಗೆ ದಾರಿ ಇದ್ದರೂ ನಮ್ಮದೇ ಜಮೀನಿನಲ್ಲಿ ಹಾಯ್ದು ಹೋಗಲು, ಒತ್ತಾಯ ಪೂರ್ವಕವಾಗಿ ನನ್ನ ಬಳಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಮಹಿಳೆಯೋರ್ವಳು  ಸಿಂದಗಿ ತಹಶೀಲ್ದಾರ್(Sindagi Tahsildar) ಕಚೇರಿ ಎದುರು ವಿಷದ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದರು.

ಜಮೀನಿನಲ್ಲಿ ದಾರಿ ಬಿಡಲು ಒತ್ತಾಯ ಪೂರ್ವಕ ಸಹಿ; ತಹಶೀಲ್ದಾರ್ ಕಚೇರಿ ಎದುರು ವಿಷದ ಬಾಟಲ್ ಹಿಡಿದು ಮಹಿಳೆ ಪ್ರತಿಭಟನೆ
ಸಿಂದಗಿ ತಹಶೀಲ್ದಾರ್ ಕಚೇರಿ ಎದುರು ವಿಷದ ಬಾಟಲ್ ಹಿಡಿದು ಮಹಿಳೆ ಪ್ರತಿಭಟನೆ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 20, 2024 | 6:03 PM

ವಿಜಯಪುರ, ಜು.20: ತಮ್ಮ ಜಮೀನಿನಲ್ಲಿ ಬೇರೆ ರೈತರಿಗೆ ದಾರಿ ನೀಡಬೇಕೆಂದು ಒತ್ತಾಯಿಸಿ ಸಹಿ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿ, ಮಹಿಳೆಯೋರ್ವಳು  ಸಿಂದಗಿ ತಹಶೀಲ್ದಾರ್(Sindagi Tahsildar) ಕಚೇರಿ ಎದುರು ವಿಷದ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಚಾಂದಕವಟೆ ಗ್ರಾಮದ ಶಾಮಲಾಬಾಯಿ ಸುಳ್ಳೊಳ್ಳಿ ಎಂಬುವವರು ‘ಪಕ್ಕದ ಜಮೀನಿನವರಿಗೆ ದಾರಿ ಇದ್ದರೂ ನಮ್ಮದೇ ಜಮೀನಿನಲ್ಲಿ ಹಾಯ್ದು ಹೋಗಲು ಗ್ರಾಮ ಲೆಕ್ಕಿಗ ಪಿ ಕೆ ಹುಡೇದ್ ಎಂಬಾತ ‘ನನ್ನ ಬಳಿ ಸಹಿ ಮಾಡಿಸಿಕೊಂಡು ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಜೊತೆಗೆ ಈ ವಿಚಾರದಲ್ಲಿ ನನ್ನ ಹಾಗೂ ಮಗನಿಂದ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡಿದ್ದಾರೆಂದು ಆಕ್ರೋಶ ಹೊರಹಾಕಿ, ತಹಶೀಲ್ದಾರ್ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಪಟ್ಟು ಹಿಡಿದಿದ್ದರು. ಕೂಡಲೇ ವಿಷದ ಬಾಟಲ್ ಕಸಿದುಕೊಂಡ ಸ್ಥಳಿಯರು, ತಹಶೀಲ್ದಾರ್ ಪ್ರದೀಪ್ ಹಿರೇಮಠ ಮುಂದೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:ವಿಜಯಪುರ: ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ

ನೆಲದ ಮೇಲೆ ಮಹಿಳೆ ಕೂರಿಸಿ ವಿಚಾರಿಸಿದ ತಹಶೀಲ್ದಾರ್ ವಿರುದ್ದ ಸಾರ್ವಜನಿಕರ ಆಕ್ರೋಶ

ದಲಿತ ಸಮಾಜದ ಮಹಿಳೆಯೆಂದು ಆಕೆಯನ್ನು ಹಾಗೂ ಆಕೆಯ ಮಗನನ್ನು, ತಹಶೀಲ್ದಾರ್ ಬಸವರಾಜ ಹಿರೇಮಠ ಅವರು​ ಕಚೇರಿಯಲ್ಲಿ ನೆಲದ ಮೇಲೆ ಮಹಿಳೆ ಕೂರಿಸಿ ವಿಚಾರಿಸಿದ್ದಾರೆ. ಈ ಹಿನ್ನಲೆ ತಹಶೀಲ್ದಾರ್ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ದಲಿತ ಸಮಾಜದ ಮಹಿಳೆಯೆಂದು ಈ ರೀತಿ ನಡೆಸಿಕೊಂಡಿದ್ದು ತಪ್ಪು, ವಿಚಾರಣೆ ನೆಪದಲ್ಲಿ ನೆಲದ ಮೇಲೆ ಕೂಡಿಸಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಇನ್ನು ಮಹಿಳೆ ಶಾಮಲಾಬಾಯಿ ಜಮೀನಿನಲ್ಲಿ ಬೇರೆಯವರಿಗೆ ದಾರಿ ನೀಡಿದ್ದಾಗಿ ಒತ್ತಾಯ ಪೂರ್ವಕವಾಗಿ ಸಹಿ ಪಡೆದದವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟುಬ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Sat, 20 July 24

ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ