ಬಂಜಾರ ಸಮುದಾಯದಲ್ಲಿ ಆಷಾಢ ಮಾಸದಲ್ಲಿ ನಡೆಯುತ್ತೆ ‘ಸಿತಲಾ ಹಬ್ಬ’; ಏನಿದರ ವಿಶೇಷತೆ?

ವಿಜಯಪುರ ಜಿಲ್ಲೆಯಲ್ಲಿ ಆಚರಿಸಲ್ಪಡುವ ಬಹುತೇಕ ಜಾತ್ರೆಗಳು ವಿಶಿಷ್ಟ ಮತ್ತು ವಿಭಿನ್ನ. ಐತಿಹಾಸಿಕ ಹಿನ್ನಲೆ, ಧಾರ್ಮಿಕ ನಂಬಿಕೆಗಳು, ಪರಂಪರೆ ಇದರ ಜೊತೆಗೆ ಕೆಲ ಜಾತ್ರೆಗಳಿಗೆ ಇರುತ್ತವೆ ಎನ್ನುವುದು ವಿಶೇಷ. ವಿಜಯಪುರ ಜಿಲ್ಲೆಯಲ್ಲಿನ ಬಂಜಾರಾ ಸಮುದಾಯದಲ್ಲಿ ನಡೆಯೋ ಒಂದು ಹಬ್ಬ ವಿಶೇಷ ಆಚಣೆಗೆ ಉದಾಹರಣೆಯಾಗಿದೆ. ಬಂಜಾರಾ ತಾಂಡಾಗಳಲ್ಲಿ ಜಾತ್ರೆಯೊಂದನ್ನು ಜುಲೈ ತಿಂಗಳಲ್ಲಿ ಆಚರಿಸಲಾಗುತ್ತದೆ. ಅದುವೇ ಸಿತಲಾ ಹಬ್ಬ ಅಥವಾ ಕೋಳಿ ಜಾತ್ರೆ. ಏನಿದು ಅಂತೀರಾ| ಈ ಸ್ಟೋರಿ ಓದಿ.

ಬಂಜಾರ ಸಮುದಾಯದಲ್ಲಿ ಆಷಾಢ ಮಾಸದಲ್ಲಿ ನಡೆಯುತ್ತೆ ‘ಸಿತಲಾ ಹಬ್ಬ’; ಏನಿದರ ವಿಶೇಷತೆ?
ಬಂಜಾರ ಸಮುದಾಯದಲ್ಲಿ ಆಷಾಢ ಮಾಸದಲ್ಲಿ ನಡೆಯುತ್ತೆ ‘ಸಿತಲಾ ಹಬ್ಬ’
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 14, 2024 | 2:45 PM

ವಿಜಯಪುರ, ಜು.12: ಕೆಲ ವಿಶೇಷ ಹಾಗೂ ವಿಭಿನ್ನ ಆಚರಣೆಗಳು ಅದರಲ್ಲೂ ಜಾತ್ರೆಗಳಿಗೆ ವಿಜಯಪುರ(Vijayapura) ಜಿಲ್ಲೆ ಸಾಕ್ಷಿಯಾಗಿದೆ. ಅದರಂತೆ ಇಲ್ಲಿನ ಜಾತ್ರೆಗಳಿಗೆ ಐತಿಹಾಸಿಕ ಹಿನ್ನಲೆ, ಧಾರ್ಮಿಕ ನಂಬಿಕೆಗಳು, ಪರಂಪರೆ ಇದರ ಜೊತೆಗೆ ಕೆಲ ಜಾತ್ರೆಗಳಿಗೆ ವೈಜ್ಞಾನಿಕ ಹಿನ್ನಲೆ ಸಹ ಮೇಳೈಸಿರುತ್ತದೆ ಎನ್ನುವುದು ವಿಶೇಷ. ಅದರಲ್ಲೂ ವಿಜಯಪುರ ಜಿಲ್ಲೆಯ ತುಂಬೆಲ್ಲಾ ಸಾಕಷ್ಟು ಪ್ರಮಾಣದಲ್ಲಿ ಬಂಜಾರ ಸಮುದಾಯ(banjara community) ತಲೆ ತಲಾಂತರದಿಂದ ನೆಲೆಗೊಂಡಿದೆ. ಈ ಕಾರಣಕ್ಕಾಗಿ ಜಿಲ್ಲೆಯಲ್ಲಿ ಬಹುಸಂಖ್ಯಾತ ಈ ಸಮುದಾಯ ವಾಸಿಸುವ ತಾಂಡಾಗಳು ಕಾಣ ಸಿಗುತ್ತವೆ. ಇಂತಹ ಕೆಲ ತಾಂಡಾಗಳಲ್ಲಿ ಆಷಾಢ ಮಾಸದಲ್ಲಿ ವಿಶೇಷ ರೀತಿಯ ಹಬ್ಬವನ್ನ ಆಚರಿಸಲಾಗುತ್ತದೆ. ಅದುವೇ ಕೋಳಿ ಜಾತ್ರೆ ಅಥವಾ ಸಿತಲಾ ಹಬ್ಬ.

ಏನಿದು ವಿಶೇಷ ಹಬ್ಬ?

ಮಕ್ಕಳಿಗೆ ಯಾವುದೇ ರೋಗ-ರುಜಿನಗಳು ಹರಡದಂತೆ ಹಾಗೂ ಸಾಂಕ್ರಾಮಿಕ ರೋಗಗಳು ಗ್ರಾಮಕ್ಕೆ ಬಾರದಂತೆ ದೇವಿಗೆ ಪೂಜೆ ಸಲ್ಲಿಸುತ್ತಾರೆ. ವಿಜಯಪುರ ಮತ್ತು ತಿಕೋಟಾ ಭಾಗದಲ್ಲಿ ಬರುವ ನಾಲ್ಕು ತಾಂಡಾಗಳಲ್ಲಿ ಅಂದರೆ ತೊರವಿ ಎಲ್‌ಟಿ ಒಂದು ಎರಡು ಮೂರು ಮತ್ತು ನಾಲ್ಕು ತಾಂಡಾಗಳಲ್ಲಿ ಈ ಕೋಳಿ ಜಾತ್ರೆಯನ್ನ ಆಚರಿಸಲಾಗುತ್ತದೆ. ಸಾಂಕ್ರಾಮಿಕ ರೋಗಗಳನ್ನ ಹೊಡೆದೋಡಿಸುವ ಹಿನ್ನಲೆಯ ಜೊತೆಗೆ ಹತ್ತಾರು ವಿಶೇಷತೆಗಳನ್ನ ಹೊಂದಿರುವ ಈ ಸಿತಲಾ ಹಬ್ಬ ಅಥವಾ ಕೋಳಿ ಜಾತ್ರೆ ಆಚರಣೆಯ ಕಾರಣಕ್ಕಾಗಿ ಈ ತಾಂಡಾಗಳನ್ನ ಕುಕುಡು ತಾಂಡಾ ಎಂದೂ ಸಹ ಕರೆಯಲಾಗುತ್ತದೆ. ಬಂಜಾರಾ ಸಮುದಾಯದಲ್ಲಿ ಕುಕುಡು ಎಂದರೆ ಕೋಳಿ ಎಂದರ್ಥ. ಈ ಸಂದರ್ಭದಲ್ಲಿ ಈ ತಾಂಡಾಗಳಲ್ಲೇ ವ್ಯಾಪಾರಿಗಳು ಹೋಲ್‌ ಸೇಲ್‌ದರದಲ್ಲಿ ಕೋಳಿಗಳನ್ನ ತಂದು ಮಾರುತ್ತಾರೆ.

ಇದನ್ನೂ ಓದಿ:ಪ್ರೇತಗಳಿಗೆ ವಿವಾಹನಾ? ಇಂತಹದೊಂದು ವಿಶಿಷ್ಟ ಆಚರಣೆ ಕರ್ನಾಟಕದಲ್ಲಿ ಎಲ್ಲಿ ನಡೆಯುತ್ತೆ? ಇದು ನಿಜನಾ?

ಏಳು ಮಕ್ಕಳ ತಾಯಿ ದೇವಿಗೆ ಕೋಳಿ ಬಲಿ

ಬಂಜಾರ ಸಮುದಾಯವರು ಸಾಂಕ್ರಾಮಿಕ ರೋಗಗಳು ಸೇರಿದಂತೆ ಕೊರೊನಾದಂತಹ ರೋಗ ಹೋಗಲಾಡಿಸುವುದಕ್ಕೆ ಸಿತಲಾ ಹಬ್ಬ ಎಂದು ವಿಶೇಷವಾಗಿ ಆಚರಣೆ ಮಾಡುವ ಮೂಲಕ ಗಮನ ಸೆಳೆಯುತ್ತಾರೆ. ವಿಜಯಪುರ ಜಿಲ್ಲೆಯಲ್ಲಿರುವ ಬಂಜಾರ ಸಮುದಾಯದ ಬಹುತೇಕ ಎಲ್ಲಾ ತಾಂಡಗಳಲ್ಲಿ ಇಂತಹ ಹಬ್ಬವನ್ನು ಆಚರಣೆ ಮಾಡಿ, ಏಳು ಮಕ್ಕಳ ತಾಯಿ ದೇವಿಗೆ, ಹುಂಜಾ ಅಥವಾ ಕೋಳಿಗಳನ್ನು ಬಲಿ ನೀಡಿ, ಶಾಂತಿ ನೆಲೆಸುವಂತೆ ಪ್ರಾರ್ಥನೆ ಸಲ್ಲಿಸುವ ಪದ್ದತಿಯನ್ನು ಆಚರಿಸಿಕೊಂಡು ಬರುತ್ತಾರೆ.

ಪ್ರತಿ ವರ್ಷ ಆಷಾಢ ಮಾಸದಲ್ಲಿ ಬಂಜಾರ ಸಮುದಾಯದವರು, ಇಂತಹ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಕೋಳಿ ಹಬ್ಬ ಎಂದೂ ಸಹ ಕರೆಯಲಾಗುತ್ತದೆ. ಏಳು ಕಲ್ಲು ಇಟ್ಟು, ಏಳು ಮಕ್ಕಳ ತಾಯಿ ಎಂಬ ದೇವಿಯನ್ನು ರೂಪಿಸಿಕೊಂಡು, ಸಿಹಿ ಪದಾರ್ಥಗಳು ಇಟ್ಟು ಪೂಜೆ ಸಲ್ಲಿಸುತ್ತಾರೆ, ನಂತರ ಬಂಜಾರ ಸಮುದಾಯವ ಮುಖಂಡರು ಉರು ಹಿರಿಯರು, ದೇವಿಗೆ ಹಾಡಿನ ಮೂಲಕ ಪ್ರಾರ್ಥನೆ ಸಲ್ಲಿಸಿ, ತಮ್ಮದೇ ಭಾಷೆಯಲ್ಲಿ ಬೇಡಿಕೊಳ್ಳುತ್ತಾರೆ. ತಮ್ಮ ಬೀಗರನ್ನ ಸ್ನೇಹಿತರನ್ನ ಆಹ್ವಾನಿಸಿ ಸಿತಲಾ ಪೂಜೆಯ ನಂತರ ಸಿಹಿ ಪದಾರ್ಥಗಳನ್ನ ಸೇರಿದಂತೆ ಕೋಳಿ ಊಟ ಉಣ ಬಡಿಸಿ ಸಂತೃಪ್ತಿಗೊಳಿಸುವ ವಾಡಿಕೆಯಿದೆ.

ಹುಂಜ- ಕೋಳಿಗಳ ಕಾಳಗ

ಇದಕ್ಕೂ ಮುನ್ನ ತಾಂಡಾಗಳಲ್ಲಿ ಹುಂಜಗಳ ಹಾಗೂ ಕೋಳಿಗಳ ಕಾಳಗವನ್ನು ಮಾಡಿಸುತ್ತಾರೆ. ಹುಂಜಗಳ ಕೋಳಿಗಳ ಕಾಳಗ ಮಾಡಿಸೋ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ಕಾಳಗದಲ್ಲಿ ಯಾವುದೇ ಜೂಜು ನಡೆಸುವುದಿಲ್ಲಾ, ಇದು ಕೇವಲ ಮನರಂಜನೆಗಾಗಿ ಮಾತ್ರ ಮಾಡುತ್ತಾರೆ. ಕಾಳಗದ ಬಳಿಕ ಬಲಿ ನೀಡುತ್ತಾರೆ.  ನೂರಾರು ವರ್ಷಗಳ ಇತಿಹಾಸ ಇರುವ ಈ ಪದ್ದತಿಯು ಹಿಂದಿನ ಕಾಲದಲ್ಲಿ ರೋಗ ರುಜಿನಗಳು ಹರಡಿ ಊರು ಬಿಟ್ಟು ಹೋಗವ ಸ್ಥಿತಿ ಇರುತ್ತಿತ್ತು, ಊರಿನಿಂದ ಊರಿಗೆ ವಲಸೆ ಬಂದ ಈ ಸಮುದಾಯದವರು, ನೆಲೆ ಊರಿದ ಜನರು ಪ್ರತಿ ವರ್ಷ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ಕೋಳಿ ಜಾತ್ರೆಯನ್ನ ಬೀಗರು ಮತ್ತು ಆಪ್ತರೊಂದಿಗೆ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ.‘

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್
ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಸಿಎಂರನ್ನು ಕೇಳಬೇಕು: ಹರಿಪ್ರಸಾದ್
ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಸಿಎಂರನ್ನು ಕೇಳಬೇಕು: ಹರಿಪ್ರಸಾದ್
ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್ ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್
ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್ ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್
ಪಿಎಂ ಮೋದಿ ಹಂಚಿಕೊಂಡ ಬ್ರೆಜಿಲ್​ನ ಜಿ-20 ಶೃಂಗಸಭೆಯ ಮೊದಲ ದಿನದ ಝಲಕ್
ಪಿಎಂ ಮೋದಿ ಹಂಚಿಕೊಂಡ ಬ್ರೆಜಿಲ್​ನ ಜಿ-20 ಶೃಂಗಸಭೆಯ ಮೊದಲ ದಿನದ ಝಲಕ್
ಕೇವಲ ಒಂದು ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ಸಿಕ್ಕಿದೆ: ಪರಮೇಶ್ವರ್
ಕೇವಲ ಒಂದು ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ಸಿಕ್ಕಿದೆ: ಪರಮೇಶ್ವರ್
ಉಡುಪಿ ಜಿಲ್ಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ
ಉಡುಪಿ ಜಿಲ್ಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ