ಮಕ್ಕಳನ್ನ ಕಾಲುವೆಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಮಹಿಳೆ ವಿರುದ್ಧ ಕೇಸ್ ಬುಕ್

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಆಲಮಟ್ಟಿ ಎಡ ದಂಡೆ ಕಾಲುವೆಗೆ ನಾಲ್ವರು ಮಕ್ಕಳೊಂದಿಗೆ ಮಹಿಳೆ ನೀರಿಗೆ ಹಾರಿದ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಮಕ್ಕಳನ್ನು ಕಾಲುವೆಗೆ ಎಸೆದು ಬಳಿಕ ತಾನು ಜಿಗಿದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ತಾಯಿ ವಿರುದ್ಧ ಇದೀಗ ಕೇಸ್ ಬುಕ್ ಆಗಿದೆ. ನಾಲ್ವರು ಮಕ್ಕಳು ಜಲಸಮಾಧಿಯಾಗಿದ್ದರಿಂದ ತಾಯಿ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದೆ.

ಮಕ್ಕಳನ್ನ ಕಾಲುವೆಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಮಹಿಳೆ ವಿರುದ್ಧ ಕೇಸ್ ಬುಕ್
Vijayapura Woman
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ರಮೇಶ್ ಬಿ. ಜವಳಗೇರಾ

Updated on:Jan 15, 2025 | 4:50 PM

ವಿಜಯಪುರ, (ಜನವರಿ 15): ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಂದಿದೆ. ನಾಲ್ವರು ಮಕ್ಕಳನ್ನು ಕಾಲುವೆ ಎಸೆದು ಸಾಯಿಸಿದ ತಾಯಿ ಭಾಗ್ಯಶ್ರೀ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಹೌದು…ಜನವರಿ 13ರಂದು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಕಾಲುವೆಗೆ ತನ್ನ ನಾಲ್ವರು ಮಕ್ಕಳನ್ನು ಎಸೆದು ಭಾಗ್ಯಶ್ರೀ ಸಹ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದ್ರೆ, ಮೀನುಗಾರರು ಭಾಗ್ಯಶ್ರೀಯನ್ನು ಕಾಪಾಡಿ ಜೀವ ಉಳಿಸಿದ್ದಾರೆ. ಆದ್ರೆ, ಮಕ್ಕಳು ಮಾತ್ರ ಸಾವನ್ನಪ್ಪಿದ್ದು, ಇದೀಗ ಭಾಗ್ಯಶ್ರೀ ವಿರುದ್ಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯಕ್ಷದರ್ಶಿ ಫಾರೆಸ್ಟ್ ಗಾರ್ಡ್ ನಾಗೇಶ ನೀಡಿದ ದೂರಿನ ಅನ್ವಯ ಭಾಗ್ಯಶ್ರೀ ವಿರುದ್ಧ ನಿಡಗುಂದಿ ಪೊಲೀಸ್ ಠಾಣೆಯನ್ನು ಸೆಕ್ಷನ್ 302ರ ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಇನ್ನು ತನ್ನ ನಾಲ್ವರು ಮಕ್ಕಳಾದ ತನು(5), ರಕ್ಷಾ(3), ಅವಳಿ ಮಕ್ಕಳಾದ ಹಸೇನ್, ಹುಸೇನ್ ಎನ್ನುವರನ್ನು ಕಾಲುವೆಗೆ ಎಸೆದು ಬಳಿಕ ತಾನು ಸಹ ಜಿಗಿದ್ದ ಭಾಗ್ಯಶ್ರೀಯನ್ನು ಮೀನುಗಾರರು ರಕ್ಷಣೆ ಮಾಡಿದ್ದು, ಸದ್ಯ ಭಾಗ್ಯಶ್ರೀ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: 4 ಮಕ್ಕಳನ್ನ ಕಾಲುವೆಗೆ ಎಸೆದು ತಾನೂ ಹಾರಿದ ಮಹಿಳೆ: ಕಾರಣ ಕೇಳಿದ್ರೆ ಕರುಳು ಚುರ್ ಅನ್ನುತ್ತೆ!

ಭಾಗ್ಯಶ್ರೀ ಅವರು ಜನವರಿ 13 ರಂದು ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಆಲಮಟ್ಟಿ ಎಡದಂಡೆ ಕಾಲುವೆಗೆ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದಿದ್ದರು. ಬಳಿಕ ತಾನೂ ಸಹ ಹಾರಿದ್ದರು. ಗಂಡ ಬೈಕ್​ಗೆ ಪೆಟ್ರೋಲ್ ತರಲು ಹೋದಾಗ ಭಾಗ್ಯಶ್ರೀ ಎರಡೂ ಹೆಣ್ಣು, ಎರಡೂ ಗಂಡು ಮಕ್ಕಳ ಸಮೇತ ಕೆನಾಲ್ ಹಾರಿದ್ದಳು. ಆದರೆ, ಮೀನುಗಾರರು ಭಾಗ್ಯಶ್ರೀಯನ್ನು ಕಾಪಾಡಿದ್ದರು. ಆದ್ರೆ, ನಾಲ್ವರು ಮಕ್ಕಳು ಮಾತ್ರ ಜಲಸಮಾಧಿಯಾಗಿದ್ದರು.

ಇನ್ನು ಈ ಘಟನೆಗೆ ಆಕೆಯ ಪತಿ ನಿಂಗರಾಜ ಹಾಗೂ ಮನೆಯವರು ಕಾರಣ ಎಂದು ಆ ಮಹಿಳೆಯ ತವರಿನ ಜನರು ಆರೋಪಿಸಿದ್ದಾರೆ. ತಮ್ಮ ಒಬ್ಬಳೇ ಮಗಳಾದ ಭಾಗ್ಯಶ್ರೀಯನ್ನು ತೆಲಗಿ ಗ್ರಾಮದ ನಿಂಗರಾಜನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ನಿಂಗರಾಜನಿಗೆ ಸಾಲ ಇದ್ದು, ಅದನ್ನು ತೀರಿಸಲು ಜಮೀನು ಮಾರಾಟ ಮಾಡುವುದಾಗಿ ಆತನ ಮನೆಯವರು ಹೇಳಿದ್ದರು. ಈ ವಿಚಾರವಾಗಿ ಜಗಳವಾಗಿತ್ತು. ಈ ವೇಳೆ ತನ್ನ ಮಗಳ ಮೇಲೆ ಅಳಿಯ ನಿಂಗರಾಜ ಹಾಗೂ ಆತನ ತಂದೆ ಮತ್ತು ತಾಯಿ ಹಲ್ಲೆ ಮಾಡಿದ್ದರು ಎಂದು ಆಪಾದಿಸಿದ್ದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Wed, 15 January 25