ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ವಕ್ಫ್‌ ಬೋರ್ಡ್​ ಎಂದು ನೋಂದಣಿ! ಭುಗಿಲೆದ್ದ ಆಕ್ರೋಶ

ರೈತರ ಹೊಲಗಳ ಪಹಣಿಯಲ್ಲಿ ವಕ್ಫ್‌ ಬೋರ್ಡ್​ ಎಂದು ಹೆಸರು ಬರುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯಪುರ, ಧಾರವಾಡ, ಯಾದಗಿಯಲ್ಲಿ ಈ ರೀತಿಯಾಗಿದ್ದು, ರೈತರು ಆಕ್ರೋಶಗೊಂಡಿದ್ದಾರೆ. ಅದರಲ್ಲೂ ಜಯಪುರ ಜಿಲ್ಲೆಯಲ್ಲಿ ವಕ್ಫ್‌ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯ ಸಿಂದಗಿಯ ವಿರಕ್ತ ಮಠದ ಆಸ್ತಿ ವಕ್ಫ್ ಬೋರ್ಡ್‌ ಎಂದು ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ.

ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ವಕ್ಫ್‌ ಬೋರ್ಡ್​ ಎಂದು ನೋಂದಣಿ! ಭುಗಿಲೆದ್ದ ಆಕ್ರೋಶ
ಸಿಂದಗಿ ವಿರಕ್ತ ಮಠ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 29, 2024 | 4:56 PM

ವಿಜಯಪುರ, (ಅಕ್ಟೋಬರ್ 29) : ಜಿಲ್ಲೆಯ ಸಿಂದಗಿ (Sindagi) ಪಟ್ಟಣದ ವಿರಕ್ತ ಮಠದ (Virakta Mutt) ಆಸ್ತಿ ಇದೀಗ ವಕ್ಫ್ ಆಸ್ತಿಯಾಗಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಕಬರಸ್ಥಾನ ವಕ್ಫ್ ಬೋರ್ಡ್‌ (Waqf Board) ಎಂದು ನೋಂದಣಿಯಾಗಿದೆ. ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ ಇತ್ತು. ಆದ್ರೆ, 2018–2019 ರಲ್ಲಿ ವಕ್ಫ್ ಬೋರ್ಡ್‌ ಎಂದು ಸೇರ್ಪಡೆಯಾಗಿದೆ. ಇದರಿಂದ ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಕ್ಫ್ ಬೋರ್ಡ್‌ಗೆ 1.28 ಎಕರೆ ಆಸ್ತಿಯನ್ನು ಸೇರಿಸಿದ್ದಕ್ಕೆ ಮಠದ ಭಕ್ತರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 13ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ಮಠ ಖಬರಸ್ಥಾನ ವಕ್ಫ್ ಬೋರ್ಡ್‌ ಆಗಿದ್ದು ಹೇಗೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೆ ರೀತಿ ಸಿಂದಗಿ ತಾಲೂಕಿನಲ್ಲಿ ಅನೇಕ ಹಿಂದೂ ಮಠಗಳು ಆಸ್ತಿ ವಕ್ಫ್ ಬೋರ್ಡ್‌ ಸೇರಿದೆ ಎಂಬ ಶಂಕೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ವಕ್ಫ್‌ ಬೋರ್ಡ್‌ಗೆ ಸೇರ್ಪಡೆಯಾದ ವಿಚಾರ ತಿಳಿದು ಭಕ್ತರು ಈಗ ಮಠದ ಮುಂದೆ ಜಮಾಯಿಸಿದ್ದಾರೆ.

ಇದನ್ನೂ ಓದಿ: ಧಾರವಾಡ ರೈತರಿಗೂ ಶುರುವಾಯ್ತು ವಕ್ಫ್‌ ನಡುಕ: ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಉಲ್ಲೇಖ

ವಿಜಯಪುರ ಜಿಲ್ಲೆ ಹೊನವಾಡ ಗ್ರಾಮದ 12000 ಎಕರೆ ವಕ್ಫ್‌ಬೋರ್ಡ್‌ ಹೆಸರಿನಲ್ಲಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಒಬ್ಬರ ಬಳಿಕ ಒಬ್ಬರಿಗೆ ನೋಟಿಸ್‌ ಬರ್ತಿದ್ದಂತೆ ರೈತರು ಆಕ್ರೋಶಗೊಂಡಿದ್ದಾರೆ.

ವಕ್ಫ್‌ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದೆ.ಕಂದಾಯ ಸಚಿವ ಕೃಷ್ಣೇಭೈರೇಗೌಡ, ಜಮೀರ್‌, ಎಂಬಿ ಪಾಟೀಲ್‌ ಇಂದು ಸುದ್ದಿಗೋಷ್ಠಿ ನಡೆಸಿ,. 121 ನೋಟಿಸ್ ನೀಡಿರುವುದು ನಿಜ. ಇದನ್ನು ವಾಪಸ್ ಮಾಡುತ್ತೇವೆ ಅಂತಾ ಕಂದಾಯ ಸಚಿವರು ಹೇಳಿದ್ದಾರೆ.

ಪಹಣಿಯಲ್ಲಿ ವಕ್ಫ್‌ ಹೆಸರು ಬಂದಿರೋ ರೈತರನ್ನ ಕಂಗೆಡಿಸಿದ್ರೆ, ಬಿಜೆಪಿಗರನ್ನ ಬಡಿದೆಬ್ಬಿಸಿದೆ. ಇದರ ನಡುವೆ ಸರ್ಕಾರ ಕೂಡಾ ಅಲರ್ಟ್ ಆಗಿದ್ದು,ನೋಟಿಸ್‌ ವಾಪಸ್‌ ತೆಗೆದುಕೊಳ್ಳೋ ನಿರ್ಧಾರ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:55 pm, Tue, 29 October 24