ಆಫ್ರಿಕಾದಿಂದ ಹೊಸಪೇಟೆಗೆ ಇಬ್ಬರು ಆಗಮನ: ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ
ಬರ್ತ್ಡೇ ಪಾರ್ಟಿ ಮಾಡಿದ್ದ ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಕೊರೊನಾ ಸೋಂಕು ತಗುಲಿದೆ. 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪಾರ್ಟಿಗೆ ಬಂದಿದ್ದ ಎಲ್ಲರಿಗೂ ಟೆಸ್ಟ್ ಮಾಡಿದ ಸಿಬ್ಬಂದಿ, ಅಪಾರ್ಟ್ಮೆಂಟ್ ಸೀಲ್ಡೌನ್ ಮಾಡಿದೆ.
ವಿಜಯನಗರ: ಆಫ್ರಿಕಾದಿಂದ ಹೊಸಪೇಟೆಗೆ ಇಬ್ಬರು ಬಂದಿರುವ ಹಿನ್ನೆಲೆ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದೆ. ಕೊರೊನಾ ರೂಪಾಂತರಿ ಒಮಿಕ್ರಾನ್ (Omicron) ಇರುವ ದೇಶದಿಂದ ಬಂದಿರುವ ಹಿನ್ನೆಲೆ ಅಲರ್ಟ್ ಘೋಷಣೆ ಮಾಡಲಾಗಿದೆ. ಇಬ್ಬರು ಆಫ್ರಿಕಾದಿಂದ ಮುಂಬೈಗೆ ಬಂದು ಅಲ್ಲಿಂದ ಹೊಸಪೇಟೆಗೆ ಬಂದಿದ್ದಾರೆ. ರಸ್ತೆ ಮಾರ್ಗವಾಗಿ ಹೊಸಪೇಟೆಗೆ ಆಗಮಿಸಿದ್ದಾರೆ. ಇಬ್ಬರಿಗೂ ಮೊದಲ ಟೆಸ್ಟ್ನಲ್ಲಿ ಕೊವಿಡ್ ನೆಗೆಟಿವ್ ಬಂದಿದೆ. ಆದರೂ ಅವರ ಕುಟುಂಬವನ್ನು ಕ್ವಾರಂಟೈನ್ ಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಅಂತ ಟಿವಿ9ಗೆ ಡಿಹೆಚ್ಒ ಡಾ.ಜನಾರ್ದನ್ ಮಾಹಿತಿ ನೀಡಿದ್ದಾರೆ.
ಇಬ್ಬರು ಕಾಂಟ್ರಾಕ್ಟ್ ಬೆಸ್ ಮೇಲೆ ಆಫ್ರಿಕಾಕ್ಕೆ ಕೆಲಸಕ್ಕೆ ಹೋಗಿದ್ದರು. ಇವರು ಹೊಸಪೇಟೆ ಮೂಲದವರು. ಸದ್ಯ ಆಫ್ರೀಕಾದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಇರುವ ಹಿನ್ನೆಲೆ ಮುಂಜಾಗ್ರತ ಕ್ರಮಗಳನ್ನ ಕೈಗೊಳ್ಳಲಾಗಿದೆ. ಸದ್ಯ ಯಾವುದೇ ಸಮಸ್ಯೆ ಇಲ್ಲವಾದರೂ, ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ನವೆಂಬರ್ 25 ರಂದು ಮುಂಬೈಗೆ ಬಂದು, ಅಲ್ಲಿಂದ 26 ಕ್ಕೆ ಹೊಸಪೇಟೆಗೆ ಬಂದಿದ್ದಾರೆ. ಆರೋಗ್ಯ ಅಧಿಕಾರಿಗಳು ರ್ಯಾಟ್ ಟೆಸ್ಟ್ ಮಾಡಿದ್ದಾರೆ. ಇವತ್ತು ಆರ್ಟಿಪಿಸಿಆರ್ ಪರೀಕ್ಷೆ ವರದಿ ಬರಬೇಕಿದೆ. ಖಾಸಗಿ ವಾಹನದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇಗಾಗಲೇ ಅವರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ ಅಂತ ಡಿಹೆಚ್ಒ ಡಾ.ಜನಾರ್ದನ್ ತಿಳಿಸಿದ್ದಾರೆ.
10 ಜನರಿಗೆ ಕೊರೊನಾ ಬರ್ತ್ಡೇ ಪಾರ್ಟಿ ಮಾಡಿದ್ದ ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಕೊರೊನಾ ಸೋಂಕು ತಗುಲಿದೆ. 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪಾರ್ಟಿಗೆ ಬಂದಿದ್ದ ಎಲ್ಲರಿಗೂ ಟೆಸ್ಟ್ ಮಾಡಿದ ಸಿಬ್ಬಂದಿ, ಅಪಾರ್ಟ್ಮೆಂಟ್ ಸೀಲ್ಡೌನ್ ಮಾಡಿದೆ. ಪಾರ್ಟಿಗೆ ಬಂದಿದ್ದ ಸಂಬಂಧಿಕರ ಮನೆಗಳೂ ಸೀಲ್ಡೌನ್ ಆಗಿವೆ. ಒಟ್ಟು ಫ್ಲ್ಯಾಟ್, ಎರಡು ಮನೆಗಳನ್ನ ಸೀಲ್ಡೌನ್ ಮಾಡಲಾಗಿದೆ.
ಇದನ್ನೂ ಓದಿ
Singer Vani Jairam Birthday : ಹಾಡು ಹಳೆಯದಾದರೇನು, ಜೀವನವೆಲ್ಲಾ ಸುಂದರ ಬೆಸುಗೆ, ಭಾವವೆಂಬ ಹೂವು ಅರಳಿ…
ಪುನೀತ್ ಅಂದರೆ ಪಂಚಪ್ರಾಣ -ಅದಕ್ಕಾಗಿ ಧಾರವಾಡದ ಈ ಮಹಿಳೆ ಅಪ್ಪು ಸಮಾಧಿವರೆಗೆ ಓಡಿಕೊಂಡು ಬರುತ್ತಿದ್ದಾರೆ!
Published On - 12:11 pm, Tue, 30 November 21