ವಿಜಯಪುರ ಅಮಾನತ್ ಕೋ ಆಪರೇಟಿವ್ ಸೊಸೈಟಿ ದೋಖಾ, 30 ಕೋಟಿ ಠೇವಣಿ ಗುಳುಂ

ಗ್ರಾಹಕರ ಡಿಪಾಸಿಟ್ ಹಣ ನೀಡದೇ ಸತಾಯಿಸುತ್ತಿರೋ ಸಹಕಾರಿ ಬ್ಯಾಂಕ್.... ವಿಜಯಪುರ ನಗರದ ಆದಿಲ್ ಅಮಾನತ್ ಕೋ ಆಪ್ ಕ್ರೆಡಿಟ್​​ ಸೊಸೈಟಿಯಿಂದ ಸಮಸ್ಯೆ. ಲಕ್ಷಾಂತರ ಹಣ ಡಿಪಾಸಿಟ್ ಇಟ್ಟವರಿಗೆ ಹಣ ವಾಪಸ್ ನೀಡದ ಬ್ಯಾಂಕ್. ಕಳೆದ ಎರಡು ವರ್ಷಗಳಿಂದ ಮೆಚ್ಯೂರಿಟಿ ಆಗಿರೋ ಹಣ ಚಾಲ್ತಿ ಖಾತೆಯ ಹಣ ನೀಡದ ಸಹಕಾರಿ ಬ್ಯಾಂಕ್.

ವಿಜಯಪುರ ಅಮಾನತ್ ಕೋ ಆಪರೇಟಿವ್ ಸೊಸೈಟಿ ದೋಖಾ, 30 ಕೋಟಿ ಠೇವಣಿ ಗುಳುಂ
ವಿಜಯಪುರ ಅಮಾನತ್ ಕೋ ಆಪರೇಟಿವ್ ಸೊಸೈಟಿಯಿಂದ 30 ಕೋಟಿ ದೋಖಾ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​

Updated on: Feb 01, 2024 | 3:55 PM

ಹಣಕಾಸಿನ ವಿಚಾರದಲ್ಲಿ ಕೊಟ್ಟವ ಕೋಡಂಗಿ ಇಸ್ಕೊಂಡವಾ ಈರಭದ್ರ ಎಂಬ ಮಾತು ಪ್ರಚಲಿತದಲ್ಲಿದೆ. ಇದೇ ಮಾತು ವಿಜಯಪುರದಲ್ಲಿನ ಸಹಕಾರಿ ಬ್ಯಾಂಕ್ ವೊಂದಕ್ಕೆ ಅನ್ವಯವಾಗುತ್ತಿದೆ. ಸಹಕಾರಿ ಬ್ಯಾಂಕ್ ವೊಂದರಲ್ಲಿ ಹಣ ಇಟ್ಟವರು ಕೋಡಂಗಿ, ಬ್ಯಾಂಕ್ ನರವು ಈರಭದ್ರ ಎಂಬಂತಾಗಿದೆ. ನಗರದಲ್ಲಿನ ಸಹಕಾರಿ ಬ್ಯಾಂಕ್ ವೊಂದರೆ ಕಥೆಯಿದು. ಹೆಚ್ಚಿನ ಬಡ್ಡಿ ಹಣ ನೀಡುವ ಆಮಿಷವೊಡ್ಡಿ ಸಾಕಷ್ಟು ಹಣ ಡಿಪಾಸಿಟ್ ಮಾಡಿಕೊಂಡು ಇದೀಗಾ ಗ್ರಾಹಕರಿಗೆ ಹಣ ನೀಡದೇ ಸತಾಯಿಸುತ್ತಿದ್ದಾರೆ. ಕಷ್ಟದ ಕಾಲಕ್ಕೆ ಹಣ ಸಿಗುತ್ತದೆ ಎಂದು ಕಷ್ಟಪಟ್ಟು ಗಳಿಸಿದ ಹಣವನ್ನು ಇಟ್ಟವರು ಇದೀಗಾ ತಮ್ಮದೇ ಹಣ ವಾಪಸ್ ಪಡೆಯಲು ಕಷ್ಟಪಡುವಂತಾಗಿದೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ.

ಇತ್ತೀಚಿನ ದಿನಗಳಲ್ಲಿ ಹಣಕಾಸಿನ ಮೋಸ ವಂಚನೆಗಳು ಬಹಳವಾಗುತ್ತಿವೆ. ಇನ್ನು ವಿವಿಧ ಸಹಕಾರಿ ಬ್ಯಾಂಕ್ ಗಳು, ಸಂಘ ಸಂಸ್ಥೆಗಳ ಹೆಸರಿನಲ್ಲೂ ಹಣಕಾಸಿನ ವಿಚಾರದಲ್ಲಿ ಮಹಾ ಮೋಸವಾಗುತ್ತಿದೆ. ಆಧಿಕ ಬಡ್ಡಿ ಹಣ ನೀಡೋದಾಗಿ ಹಣ ತೊಡಗಿಸಿಕೊಂಡು ವಾಪಸ್ ಹಣ ನೀಡದೇ ಮೋಸ ಮಾಡುತ್ತಾರೆ. ಇದರ ಸಾಲಿಗೆ ವಿಜಯಪುರ ನಗರದ ಆದಿಲ್ ಅಮಾನತ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸೇರಿದೆ.

ಇಲ್ಲಿ ಸಾವಿರಾರು ಗ್ರಾಹಕರು ತಾವು ಕಷ್ಟಪಟ್ಟು ದುಡಿದ ಹಣವನ್ನು ಡಿಪಾಸಿಟ್ ಇಟ್ಟಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಆಸೆಯಿಂದ ಹಣವನ್ನು ಡಿಪಾಸಿಟ್ ಇಟ್ಟಿದ್ದಾರೆ. ಇದೀಗಾ ಆದಿಲ್ ಅಮಾನತ್ ಸಹಕಾರಿ ಬ್ಯಾಂಕ್ ನ ಚೇರ್ಮನ್ ಹಾರುನ್ ರಶೀದ್ ಮಾಶ್ಯಾಳಕರ ಹಾಗೂ ಆಡಳಿತ ಮಂಡಳಿ ಗ್ರಾಹಕರಿಗೆ ಹಣ ವಾಪಸ್ ನೀಡುತ್ತಿಲ್ಲವಂತೆ.

ಕಳೆದ ಎರಡು ವರ್ಷಗಳಿಂದ ಡಿಪಾಸಿಟ್ ಹಣವಿಟ್ಟವರು, ಚಾಲ್ತಿ ಖಾತೆಯಲ್ಲಿ ಹಣವಿಟ್ಟವರು ಹಣಕ್ಕಾಗಿ ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ ಸಹಕಾರಿ ಬ್ಯಾಂಕ್ ನ ಚೇರ್ಮನ್ ಹಾರುನ್ ರಶೀದ್ ಮಾಶ್ಯಾಳಕರ ಹಾಗೂ ಆಡಳಿತ ಮಂಡಳಿಯೇ ಕಾರಣವೆಂದು ಗ್ರಾಹಕರು ಆರೋಪ ಮಾಡಿದ್ದಾರೆ. ಚೇರ್ಮನ್ ಹಾರುನ್ ರಶೀದ್ ಮಾಶ್ಯಾಳಕರ ಹಾಗೂ ಇತರೆ ನಿರ್ದೇಶಕರು ಬ್ಯಾಂಕ್ ಕಚೇರಿಯಲ್ಲಿ ಸಿಗಲ್ಲ. ಮನೆಗೆ ಹೋದರೂ ಮನೆಯಲ್ಲಿಯೂ ಇಲ್ಲಾ ಎನ್ನುತ್ತಾರೆ. ಬ್ಯಾಂಕ್ ನಲ್ಲಿ ಮ್ಯಾನೇಜರ್ ಹಾಗೂ ಇತರೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಉತ್ತರ ನೀಡುತ್ತಾರೆ. ನಾವು ಲಕ್ಷ ಲಕ್ಷ ಹಣವಿಟ್ಟಿದ್ದನ್ನು ಕೊಡುತ್ತಿಲ್ಲಾ ಎಂದು ಆರೋಪ ಮಾಡಿದ್ಧಾರೆ ಗ್ರಾಹಕರು.

ನಗರದ ಗಾಂಧಿ ಚೌಕ್ ಬಳಿ ಆದಿಲ್ ಅಮಾನತ್ ಸಹಕಾರಿ ಬ್ಯಾಂಕ್ ಕಚೇರಿಯಿದೆ. ಆದರೆ ಅಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ಮ್ಯಾನೇಜರ್ ಸಹ ಇರಲ್ಲಾ. ಕೆಲ ಸಿಬ್ಬಂದಿ ಇದ್ದು ನಾವು ಇಲ್ಲಿ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದೇವೆ. ನಮಗೆ ಯಾವುದೇ ಇತರೆ ಮಾಹಿತಿ ಇಲ್ಲ. ಬ್ಯಾಂಕಿನ ಚೇರ್ಮನ್ ಅವರನ್ನು ಭೇಟಿಯಾಗಿ ಮಾತನಾಡಿ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಆದಿಲ್ ಶಾಹಿಗಳ ಕಾಲದ ಹತ್ತಾರು ಬಾವಿಗಳು ಹೂಳು ತುಂಬಿ ಹಾಳಾಗಿ ಹೋಗಿವೆ, ಪುನ:ಶ್ಚೇತನಕ್ಕೆ ಸಚಿವ ಎಂ ಬಿ ಪಾಟೀಲ್ ಸೂಚನೆ

ಕಂಡ ಕಂಡವರಿಗೆ ಇಲ್ಲಿ ಸಾಲ ನೀಡಲಾಗಿದ್ದು ಸಾಲ ಮಾಡಿದವರು ಸಹ ಹಣವನ್ನು ಮರು ಪಾವತಿ ಮಾಡಿಲ್ಲಾ. ಸದ್ಯ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ, ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕೆ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ಹಣ ಸಹಾಯಕ್ಕೆ ಬರುತ್ತದೆ ಎಂದು ಡಿಪಾಸಿಟ್ ಇಟ್ಟವರು ಇದೀಗಾ ತಮ್ಮದೇ ಹಣಕ್ಕಾಗಿ ಪರದಾಡುವಂತಾಗಿದೆ.

ಒಂದು ಮೂಲದ ಮಾಹಿತಿ ಪ್ರಕಾರ 25 ರಿಂದ 30 ಕೋಟಿ ಹಣವನ್ನು ಗ್ರಾಹಕರು ಇಲ್ಲಿ ಡಿಪಾಸಿಟ್ ಇಟ್ಟಿದ್ದು ಯಾರಿಗೂ ಹಣ ಸಿಗದಂತಾಗಿದೆ. ಇನ್ನು ಯಾವುದೇ ಸಂಬಂಧಿಕರು ಕುಟುಂಬದವರಿಗೆ ಇಲ್ಲದ ಓರ್ವ ವ್ಯಕ್ತಿ ತಾನು ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡಲು ಹಣದ ಅವಶ್ಯಕತೆ ಇರುತ್ತದೆ ಎಂದು ಅದಕ್ಕಾಗಿ ಇಲ್ಲಿ ಇಟ್ಟಿದ್ದ ಡಿಪಾಸಿಟ್ ಹಣ ಸಿಗದೇ ಇಳಿವಯಸ್ಸಿನಲ್ಲಿ ಓಡಾಡುತ್ತಿದ್ಧಾರೆ. ಮಕ್ಕಳ ಶಿಕ್ಷಣಕ್ಕೆ ಅನಕೂಲವಾಗುತ್ತದೆ ಎಂದು ಇಟ್ಟಿದ್ದ ಹಣ ಕೈಗೆ ಬಾರದಂತಾಗಿದೆ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ.

Also Read: ವಿದ್ಯಾಕಾಶಿ ಧಾರವಾಡ- ವಾಣಿಜ್ಯ ನಗರಿ ಹುಬ್ಬಳ್ಳಿ ಅವಳಿ ನಗರದಲ್ಲಿ ಮಹಿಳೆಯರದ್ದೇ ದರ್ಬಾರ್!

ಆದಿಲ್ ಅಮಾನತ್ ಸಹಕಾರಿ ಬ್ಯಾಂಕ್ ಇಷ್ಟೆಲ್ಲಾ ಅವಾಂತರ ಮಾಡಿದರೂ ಜಿಲ್ಲಾ ಸಹಕಾರಿ ಇಲಾಖೆ ಆಧಿಕಾರಿಗಳು ಮಾತ್ರ ಗಮನ ಹರಿಸದೇ ಇರೋದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಸಹಕಾರಿ ಇಲಾಖೆ ಆಧಿಕಾರಿಗಳು ಯಾವುದೇ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಸಮಸ್ಯೆಯನ್ನು ಉಂಟು ಮಾಡಿದರೆ ಹಣ ವಾಪಸ್ ಕೊಡದೇ ಸತಾಯಿಸುತ್ತಿದ್ದರೆ ಗ್ರಾಹಕರಿಗೆ ನ್ಯಾಯ ಕೊಡಿಸಬೇಕಿದೆ. ಸಹಕಾರಿ ಇಲಾಖೆ ಆಧಿಕಾರಿಗಳಿಗೆ ಜಿಲ್ಲಾಡಳಿತಕ್ಕೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲಾ ಎಂದು ಗ್ರಾಹಕರು ಮಾಹಿತಿ ನೀಡಿದ್ಧಾರೆ. ಇನ್ನಾದರೂ ಸಹಕಾರಿ ಇಲಾಖೆ ಆಧಿಕಾರಿಗಳು ಜಿಲ್ಲಾಡಳಿತ ಇತ್ತ ಗಮನ ಹರಿಸಿ ಸಾವಿರಾರು ಗ್ರಾಹಕರಿಗೆ ನ್ಯಾಯ ಸಿಗುವಂತೆ ಕ್ರಮ ತೆಗೆದುಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ