Babaladi Bhavishya: ಉತ್ತಮ ಅರ್ಹ ವ್ಯಕ್ತಿಯ ಮರ್ದನ ಆಕೈತಿ; ಬಬಲಾದಿ ಸದಾಶಿವ ಮುತ್ಯಾನ ಕಾಲಜ್ಞಾನ ಭವಿಷ್ಯ
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿ ಹೊಳೆಬಬಲಾದಿಯ ಚಂದ್ರಗಿರಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಶ್ರೀಮಠದ ಮಠಾಧೀಶರಾದ ಸಿದ್ರಾಮಯ್ಯ ಅವರು ಕಾಲಜ್ಞಾನದ ಭವಿಷ್ಯ ನುಡಿದಿದ್ದಾರೆ. ಸದಾಶಿವ ಮುತ್ಯಾನ ಮಠದಲ್ಲಿ ಈ ವರೆಗೆ ನುಡಿರುವ ಕಾಲಜ್ಞಾನದ ಭವಿಷ್ಯ ಸುಳ್ಳಾಗಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ. ಹೀಗಾಗಿ ಸಿದ್ರಾಮಯ್ಯ ಶ್ರೀಗಳು ನುಡಿದ ಈ ಬಾರಿಯ ಕಾಲಜ್ಞಾನವನ್ನೂ ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.
ವಿಜಯಪುರ, ಮಾ.12: 2024 ರಲ್ಲಿ ಉತ್ತಮ ಅರ್ಹ ವ್ಯಕ್ತಿಯ ಮರ್ದನ ಆಕೈತಿ, ಉತ್ತಮ ವ್ಯಕ್ತಿಯ ಗೆಲುವೂ ಆಕೈತಿ. ಗಡಿ ಕಾಯುವ ಯೋಧರಿಗೆ ನೋವು ಉಂಟಾಕೈತಿ, ಧರ್ಮ ಧರ್ಮಗಳ ಮಧ್ಯೆ ಕಿತ್ತಾಟ ಐತಿ.. ಇದು ವಿಜಯಪುರ (Vijayapura) ಜಿಲ್ಲೆಯ ಬಬಲೇಶ್ವರ ತಾಲೂಕಿ ಹೊಳೆಬಬಲಾದಿಯ (Babaladi) ಚಂದ್ರಗಿರಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಶ್ರೀಮಠದ ಮಠಾಧೀಶರಾದ ಸಿದ್ರಾಮಯ್ಯ ಅವರು ನುಡಿದ ಕಾಲಜ್ಞಾನದ ಭವಿಷ್ಯ.
ರಾಜಕೀಯ ಗೊಂದಲ ಉಂಟಾಗಲಿದೆ. ಅವರವರಲ್ಲೇ ಕಾಲು ಎಳೆಯುವ ಜನರು ಹೆಚ್ಚಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ರಾಜಕೀಯ ಸಂಘರ್ಷ ಹೆಚ್ಚಲಿದೆ ಎಂದಿರುವ ಕಾಲಜ್ಞಾನದ ಭವಿಷ್ಯ, ಸಾಧಾರಣ ಮಳಿ ಐತಿ, ಬೆಳಿಗೆ ಕೀಟಬಾಧೆ ಹೆಚ್ಚೈತಿ, ಮಕ್ಕಳಿಗೆ ರೋಗಬಾಧೆ ಹೆಚ್ಚು, ಕಣ್ಣಿನ ಕಾಯಿಲೆ ಕಾಡುತ್ತದೆ. ಬರವೂ ಇದೆ, ಕೇಡೂ ಇದೆ. ಭಯೋತ್ಪಾದನೆ, ನೈಸಗಿರ್ಕ ವಿಕೋಪವೂ ಇರಲಿದೆ. ಜೇಷ್ಠ ಮಾಸದಲ್ಲಿ ಲಿಂಗ ಸಮಾನತೆ ಇರಲಿದೆ ಎಂದೂ ಭವಿಷ್ಯ ನಡಿದಿದ್ದಾರೆ.
ಇದನ್ನೂ ಓದಿ: ಈ ಬಾರಿ ದೇಶಕ್ಕೆ ಮಹಿಳಾ ಪ್ರಧಾನಿ; ಸ್ಫೋಟಕ ಭವಿಷ್ಯ ನುಡಿದ ನೊಣವಿನಕೆರೆ ಯಶ್ವಂತ ಗುರೂಜಿ
ಸದಾಶಿವ ಮುತ್ಯಾನ ಮಠದಲ್ಲಿ ಈ ವರೆಗೆ ನುಡಿರುವ ಕಾಲಜ್ಞಾನದ ಭವಿಷ್ಯ ಸುಳ್ಳಾಗಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ. ಹೀಗಾಗಿ ಸಿದ್ರಾಮಯ್ಯ ಶ್ರೀಗಳು ನುಡಿದಿರುವ ಈ ಬಾರಿಯ ಕಾಲಜ್ಞಾನವನ್ನೂ ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.
ಕ್ರೋಧಿನಾಮ ಸಂವತ್ಸರದಲ್ಲಿ ಕೋಪ ಹೆಚ್ಚಾಗುತ್ತದೆ, ಸಿಟ್ಟಿನವರು ಹೆಚ್ಚಾಗುತ್ತಾರೆ. ವ್ಯಾಪಾರಸ್ಥರಿಗೆ ಮಧ್ಯಮ ಫಲವಿದೆ. ಮಳೆ ಬೆಳೆ ಫಲ ಸಸಿಗಳು ಖಂಡ ಮಂಡಳವಾಗುತ್ತದೆ. ಧವಸ ಧಾನ್ಯಗಳು ರಸಗಳು ಮಾರಾಟವಾಗುತ್ತವೆ ಎಂದು ಭವಿಷ್ಯ ನುಡಿಯಲಾಗಿದೆ.
ಉತ್ತರ ಭಾಗಕ್ಕೆ ಬರಗಾಲ ಹಾಗೂ ಕೇಡಾಗುತ್ತದೆ. ದೊಡ್ಡ ದೊಡ್ಡ ಮಹಾನರ ಯೋಗ ಅಳಿಯಲಿವೆ. ಕುಲ ಜಾತಿಗಳಲ್ಲಿ ಕಹ ಜಾಸ್ತಿ ಇರಲಿದೆ. ಶಿಶುಗಳಿಗೆ ಆರೋಗ್ಯ ಬಾಧೆ ಹೆಚ್ಚಾಗುತ್ತದೆ. ಆಡಂಬರದ ಜೀವನ ನಡೆಸುವವರು ಸಾಲದ ಬಾಧೆ ಎದುರಿಸಬೇಕಾಗುತ್ತದೆ. ಸಕ್ಕರೆ, ಬೆಣ್ಣೆ, ಕುಸುಬೆ, ಸೇಂಗಾ ಬೆಲೆ ಹೆಚ್ಚುತ್ತವೆ ಎಂದು ಕಾಲಜ್ಞಾನ ಭವಿಷ್ಯದಲ್ಲಿ ನುಡಿಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ