ವಿಜಯಪುರ: ಅರಣ್ಯ ಸಂಪತ್ತು ಬೆಳೆಸುವ ಪ್ರಯತ್ನಕ್ಕೆ ತಡೆ, ಸಿಸಿಗಳನ್ನು ತಯಾರಿಸಲು ಕೆಬಿಜೆಎನ್ಎಲ್​ಗೆ ಅನುದಾನವೇ ಬಂದಿಲ್ಲ

ವಿಜಯಪುರ ಜಿಲ್ಲೆಯಲ್ಲಿ ಮರ-ಗಿಡಗಳನ್ನು ಬೆಳೆಸುವ ಪ್ರಯತ್ನಕ್ಕೆ ಬ್ರೇಕ್ ಬಿದ್ದಿದೆ. ಮುಂಗಾರು ಆರಂಭವಾದರೂ, ಸಸಿಗಳನ್ನು ನೆಡಲು ಸಸಿಗಳೇ ಇಲ್ಲ. ಅರಣ್ಯ ಇಲಾಖೆ, ಮತ್ತು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದಿಂದ ಲಕ್ಷಾಂತರ ಸಸಿಗಳನ್ನು ತಯಾರು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸಸಿಗಳು ತಯಾರಾಗಿಲ್ಲ. ಕಾರಣವೇನು ಈ ಸ್ಟೋರಿ ಓದಿ.

ವಿಜಯಪುರ: ಅರಣ್ಯ ಸಂಪತ್ತು ಬೆಳೆಸುವ ಪ್ರಯತ್ನಕ್ಕೆ ತಡೆ, ಸಿಸಿಗಳನ್ನು ತಯಾರಿಸಲು ಕೆಬಿಜೆಎನ್ಎಲ್​ಗೆ ಅನುದಾನವೇ ಬಂದಿಲ್ಲ
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
Follow us
| Updated By: ವಿವೇಕ ಬಿರಾದಾರ

Updated on: Jun 24, 2024 | 8:30 AM

ವಿಜಯಪುರ, ಜೂನ್​ 24: ಜಿಲ್ಲೆಯಲ್ಲಿ ಮಳೆ ಕಡಿಮೆ, ಬಿಸಿಲಿನ ತಾಪಮಾನ ಹೆಚ್ಚು. ಹೀಗಾಗಿ, ಅರಣ್ಯ ಪ್ರದೇಶ ಹೆಚ್ಚಳವಾದರೆ ಉತ್ತಮ ಮಳೆಯಾಗುತ್ತದೆ ಎಂದು ಜಿಲ್ಲೆಯಲ್ಲಿ 2016 ರಿಂದ ಮರ-ಗಿಡಗಳನ್ನು ಬೆಳೆಸಲು ಆರಂಭಿಸಲಾಯಿತು. ಸರ್ಕಾರ ಮತ್ತು ಸಂಘ ಸಂಸ್ಥೆಗಳ ದಾನಿಗಳ ನೆರವಿನಿಂದ ಸಚಿವ ಎಂಬಿ ಪಾಟೀಲ್ (MB Patil) ಕೋಟಿ ವೃಕ್ಷ ಅಭಿಯಾನ ಆರಂಭಿಸಿದ್ದರು. ಈ ನಿಟ್ಟಿನಲ್ಲಿ ಇಲ್ಲಿಯವರೆಗೆ ಒಂದೂವರೆ ಕೋಟಿ ಸಸಿಗಳನ್ನು ನಡೆಲಾಗಿದೆ. ಆದರೆ, ಈ ಬಾರಿ ಮತ್ತಷ್ಟು ಸಸಿಗಳನ್ನು ನೆಡಲು ಆಗುತ್ತಿಲ್ಲ. ಕಾರಣ ಸಸಿಗಳನ್ನು ಬೆಳೆಸಲು ಸರ್ಕಾರ (Karnataka Government) ಅನುದಾನವನ್ನೇ ನೀಡಿಲ್ಲ.

ಅತೀ ಕಡಿಮೆ ಪ್ರಮಾಣದ ಅರಣ್ಯ ಪ್ರದೇಶ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಸಂಪತ್ತನ್ನು ಸರ್ಕಾರ ಅನುದಾನ ನೀಡಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಬರವನ್ನು ಓಡಿಸಿ ಕಾಡು ಬೆಳೆಯಲಿ ಅಂತ 2016 ರಲ್ಲೇ ಅಂದಿನ ಸಚಿವ ಎಂಬಿ ಪಾಟೀಲ ಕೋಟಿ ವೃಕ್ಷ ಅಭಿಯಾನ ಕೈಗೊಂಡಿದ್ದರು. ಪಕ್ಷಾತೀತವಾಗಿ ಎಲ್ಲರನ್ನು ಜೊತೆಗೂಡಿಸಿಕೊಂಡು ಸರ್ಕಾರ, ಸಂಘ ಸಂಸ್ಥೆಗಳು ದಾನಿಗಳ ಸಹಕಾರದಿಂದ ಕೋಟಿ ಸಸಿಗಳನ್ನು ನೆಡಲು ಯೋಜನೆ ಹಾಕಿಕೊಳ್ಳಲಾಗಿತ್ತು.

ಈ ನಿಟ್ಟಿನಲ್ಲಿ 2016 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 1.50 ಕೋಟಿ ಸಿಸಿಗಳನ್ನು ನೆಟ್ಟು ಬೆಳಸಲಾಗಿದೆ. ಈ ಯೋಜನೆಗೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (KBJNL) 2016 ರಿಂದ 2021ರ ವರೆಗೆ ತಲಾ 10 ಲಕ್ಷ ಸಸಿಗಳನ್ನು ನೀಡುತ್ತಿತ್ತು. ಬಳಿಕ ವರ್ಷಕ್ಕೆ ತಲಾ 6 ಲಕ್ಷ ಸಸಿಗಳನ್ನು ಬೆಳೆಸಿ ಅರಣ್ಯೀಕರಣಕ್ಕೆ ನೀಡಲಾಗುತ್ತಿತ್ತು. ಆದರೆ ಈ ವರ್ಷ ಅರಣ್ಯ ಇಲಾಖೆ ಹಾಗೂ ಕೆಬಿಜೆಎನ್ಎಲ್ ಸಸಿಗಳನ್ನು ತಯಾರು ಮಾಡಿಲ್ಲ.

ಇದಕ್ಕೆ ಕಾರಣ, ಅರಣ್ಯ ಇಲಾಖೆಗೆ ಹಾಗೂ ಜಲ ಸಂಪನ್ಮೂಲ ಇಲಾಖೆಯಿಂದ ಕೆಬಿಜೆಎನ್ಎಲ್​ಗೆ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ ಮುಂಗಾರು ಮಳೆ ಆರಂಭಕ್ಕೂ ಮುನ್ನ ತಯಾರಾಗಬೇಕಿದ್ದ ಸಸಿಗಳನ್ನು ಇನ್ನೂವರೆಗೂ ತಯಾರಾಗಿಲ್ಲ. ಹಣ ಇಲ್ಲದ ಕಾರಣ ಕೆಬಿಜೆಎನ್ಎಲ್ ಮತ್ತು ಅರಣ್ಯ ಇಲಾಖೆಗೆ ತಲಾ 6 ಲಕ್ಷ ಸಸಿಗಳನ್ನು ತಯಾರಿಸಲು ಸಾಧ್ಯವಾಗಿಲ್ಲ. ಈ ವಿಚಾರವಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

2016 ರಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಅರಣ್ಯ ಬೆಳೆಸಲು ಎಲ್ಲಾ ಸಂಘ ಸಂಸ್ಥೆಗಳು ಮುಂದೆ ಬಂದು ಲಕ್ಷಾಂತರ ಸಸಿಗಳನ್ನು ತಯಾರಿ ಮಾಡಿ ನೀಡಿದ್ದವು. ಎಲ್ಲ ಪಕ್ಷದ ಮುಖಂಡರು ಸಹ ಕೋಟಿ ವೃಕ್ಷ ಅಭಿಯಾನದಲ್ಲಿ ಭಾಗಿಯಾಗಿ ಸಸಿಗಳನ್ನು ನೆಟ್ಟು ಅರಣ್ಯ ಪ್ರದೇಶ ಹೆಚ್ಚಳ ಮಾಡುವುದರಲ್ಲಿ ಕೈಜೋಡಿಸಿದ್ದರು.

ಈ ಕಾರಣದಿಂದ ಜಿಲ್ಲೆಯಲ್ಲಿ ಶೇ1.17 ರಷ್ಟು ಪ್ರದೇಶದಲ್ಲಿದ್ದ ಅರಣ್ಯ ಪ್ರಮಾಣ ಶೇ 2 ರಷ್ಟಜಕ್ಕೇರಿದೆ. ಶೇ 2 ರಷ್ಟು ಅರಣ್ಯ ಪ್ರದೇಶವಾಗಿದ್ದು ಸಣ್ಣ ಸಾಧನೆಯೇನಲ್ಲ. ಈ ನಿಟ್ಟಿನಲ್ಲಿ ತಪ್ಪದೇ ವರ್ಷ ವರ್ಷವೂ ಸಸಿಗಳನ್ನು ನೆಟ್ಟು ಬೆಳೆಸಿ ಪೋಷಿಸಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಎಲ್ಲರೂ ಶ್ರಮ ಹಾಕಿದ್ದರು.

ಆದರೆ ಈಗ ಸರ್ಕಾರ ಅನುದಾನವನ್ನೇ ನೀಡಿಲ್ಲದ ಕಾರಣ ಸಸಿಗಳ ತಯಾರಿಕೆ ಆಗಿಲ್ಲ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಹಣ ಹೊಂದಿಸುವಲ್ಲಿ ನಿರತವಾಗಿದೆ. ಇತರೆ ಅಭಿವೃದ್ದಿ ಕೆಲಸ ಕಾಮಗಾರಿ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ. ಗ್ಯಾರಂಟಿಗಾಗಿ ಮಾತ್ರ ಹಣ ನೀಡಲಾಗುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ವಿರುದ್ಧ ಹರಿಹಾಯ್ದರು.

ಆಲಮಟ್ಟಿಯಲ್ಲಿ ಕಳೆದ ವರ್ಷ ಕೆಬಿಜೆಎನ್ಎಲ್ ಮೂಲಕ ಬೆಳಸಿದ್ದ 6 ಲಕ್ಷ ಸಸಿಗಳಲ್ಲಿ ಕೇವಲ 1.80 ಸಸಿಗಳು ಮಾತ್ರ ಮಾರಾಟವಾಗಿದ್ದವು. ಕಾರಣ ಕಳೆದ ವರ್ಷದಿಂದ ಸಸಿಗಳ ಮಾರಾಟದ ಬೆಳೆಯನ್ನು ಹೆಚ್ಚಳ ಮಾಡಲಾಗಿತ್ತು. ಕಳೆದ ಬಾರಿ ಉಳಿದಿರುವ ಸಸಿಗಳನ್ನು ಮಾತ್ರ ಈ ವರ್ಷ ನೀಡಲಾಗುತ್ತಿದೆ. ಆದರೆ ಪ್ರತಿ ವರ್ಷದಂತೆ 6 ಲಕ್ಷ ಸಸಿಗಳನ್ನು ಬೆಳೆಸಿಲ್ಲ. ಕಾರಣ ಅನುದಾನದ ಕೊರತೆ.

ಈಗಾಲಾದರೂ ಸರ್ಕಾರ ಅನುದಾನ ನೀಡಿದರೆ ಸಸಿಗಳನ್ನು ಬೆಳೆಸುವ ಕಾರ್ಯ ಆರಂಭವಾಗುತ್ತದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ, ಅರಣ್ಯ ಸಚಿವ ಈಶ್ವರ ಖಂಡ್ರೆ ಗಮನ ಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!