ವಿಜಯಪುರ: ತೆಪ್ಪ ಮಗುಚಿ ಬಿದ್ದು ಇಬ್ಬರು ಯುವಕರು ಸಾವು, ನಾಲ್ವರು ಪ್ರಾಣಾಪಾಯದಿಂದ ಪಾರು
ವಿಜಯಪುರ ತಾಲೂಕಿನ ಕುಮಟಗಿ ಕೆರೆಯಲ್ಲಿ ತೆಪ್ಪ ಮಗುಚಿ ಬಿದ್ದು ಇಬ್ಬರು ಯುವಕರು ನೀರುಪಾಲಾಗಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಅಲೋವೆರಾ ಜ್ಯೂಸ್ ಎಂದು ತಿಳಿದು ಕೀಟನಾಶಕ ಕುಡಿದು ಬಾಲಕಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿಜಯಪುರ, ಏಪ್ರಿಲ್ 03: ಕೆರೆಯಲ್ಲಿ ತೆಪ್ಪ ಮಗುಚಿ ಬಿದ್ದು ನೀರಲ್ಲಿ ಮುಳುಗಿ ಆರು ಯುವಕರ (boys) ಪೈಕಿ ಇಬ್ಬರು ಸಾವನ್ನಪ್ಪಿರುವಂತಹ (death) ಘಟನೆ ವಿಜಯಪುರ ತಾಲೂಕಿ ಕುಮಟಗಿ ಕೆರೆಯಲ್ಲಿ ನಿನ್ನೆ ಸಾಯಂಕಾಲ ನಡೆದಿದೆ. ಸೋಯಲ್ ಹತ್ತರಕಿಹಾಳ(25) ಮತ್ತು ನಿಸಾರ್ ಜಮಾದಾರ್(19) ಮೃತರು. ಅಸ್ವಸ್ಥಗೊಂಡಿದ್ದ ನಿಸಾರ್ ಜಮಾದಾರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಗಿ ಕೆರೆಯಲ್ಲಿ ಆರು ಯುವಕರು ತೆಪ್ಪ ತೆಗದುಕೊಂಡು ಹೋಗಿದ್ದರು. ಮೋಹಸಿನ್ ಮುಲ್ಲಾ, ತೌಫೀಕ್, ಮೋಹಸೀನ್ ಹಾಗೂ ರಿಯಾಜ್ ಅಪಾಯದಿಂದ ಪಾರಾದ ಯುವಕರು. ಸದ್ಯ ಮೊಹಮ್ಮದ್ ಕೈಪ್ ಹಾಗೂ ಸೋಯಲ್ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ತರಿಗೆ ಪೊಲೀಸರು ಹಸ್ತಾಂತರ ಮಾಡಲಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಸ್ಥಳದಲ್ಲಿ ಮೃತ ಯುವಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಲೋವೆರಾ ಜ್ಯೂಸ್ ಎಂದು ತಿಳಿದು ಕೀಟನಾಶಕ ಕುಡಿದು ಬಾಲಕಿ ಸಾವು
ಅಲೋವೆರಾ ಜ್ಯೂಸ್ ಎಂದು ತಿಳಿದು ಕೀಟನಾಶಕವನ್ನು ಕುಡಿದು 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಮಾರ್ಚ್ 14 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಿಧಿಕೃಷ್ಣ ಮೃತ ಬಾಲಕಿ.
ಇದನ್ನೂ ಓದಿ: ಬೆಂಗಳೂರು: ಬಿಹಾರದ ಯುವತಿಯ ಅಪಹರಿಸಿ ಅತ್ಯಾಚಾರ, ಇಬ್ಬರ ಬಂಧನ
ಬ್ಯಾಟರಾಯನಪುರ ಬಳಿಯ ದೀಪಾಂಜಲಿ ನಗರದಲ್ಲಿ ವಾಸಿಸುತ್ತಿದ್ದ ಬಾಲಕಿ ನಿಧಿಕೃಷ್ಣ, ಆಕಸ್ಮಿಕವಾಗಿ ಖಾಲಿಯಾದ ಅಲೋವೆರಾ ಡಬ್ಬದಲ್ಲಿದ್ದ ಕೀಟನಾಶಕ ಸೇವಿಸಿದ್ದಾಳೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಬಾಲಕಿಯ ಪೋಷಕರು ಖಾಲಿಯಾಗಿದ್ದ ಅಲೋವೆರಾ ಜ್ಯೂಸ್ ಬಾಟಲಿಯಲ್ಲಿ ಹರ್ಬಿಸೈಡ್ ಔಷಧ ತುಂಬಿಸಿಟ್ಟಿದ್ದರು. ಆದರೆ ಮಾರ್ಚ್ 4 ರಂದು ಜ್ಯೂಸ್ ಎಂದು ತಿಳಿದು ಬಾಲಕಿ ಕುಡಿದಿದ್ದಾಳೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಕಾರಣ ಏಪ್ರಿಲ್ 1 ರಂದು ಬಾಲಕಿ ಸಾವನ್ನಪ್ಪಿದ್ದಾಳೆ. ತನಿಖಾಧಿಕಾರಿಗಳು ಅಸ್ವಾಭಾವಿಕ ಸಾವಿನ ವರದಿ (ಯುಡಿಆರ್) ದಾಖಲಿಸಿದ್ದಾರೆ.
ಪೋಷಕರು ಮನೆಯಲ್ಲಿ ಕೀಟನಾಶಕಗಳು ಅಥವಾ ಕಳೆನಾಶಕಗಳನ್ನು ಸಂಗ್ರಹಿಸುವಾಗ ಜಾಗರೂಕರಾಗಿರುವಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ನಡೆದಾಗ ಬಾಲಕಿಯ ತಂದೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ತಾಯಿ ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಪಾರ್ಟಿಗೆಂದು ಕರೆದು ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಹತ್ಯೆ
ಪಾರ್ಟಿಗೆಂದು ಕರೆದು ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಹತ್ಯೆ ಮಾಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಬಳಿ ನಡೆದಿದೆ. ಬಲಒಗಿ ಗ್ರಾಮದ ಶಿವನಗೌಡ ಪಾಟೀಲ್(43) ಬರ್ಬರ ಹತ್ಯೆಯಾಗಿದೆ.
ಇದನ್ನೂ ಓದಿ: ಘನಘೋರ ಕೃತ್ಯಕ್ಕೆ ಸಾಕ್ಷಿಯಾದ ಕಲಬುರಗಿ: ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ
ಎಂ.ಕೆ.ಹುಬ್ಬಳ್ಳಿಗೆ ಹೋಗಿ ಬರುವುದಾಗಿ ಹೇಳಿಹೋಗಿದ್ದ ಶಿವನಗೌಡ, ರಾತ್ರಿಯಾದ್ರೂ ಮನೆಗೆ ಬರದಿದ್ದಾಗ ಕುಟುಂಬಸ್ಥರು ಹುಡುಕಾಡಿದ್ದಾರೆ. ನಿರ್ಜನ ಪ್ರದೇಶದಲ್ಲಿ ಶವ ಕಂಡು ಪೊಲೀಸರಿಗೆ ರೈತ ತಿಳಿಸಿದ್ದಾರೆ. ಪರಿಚಯಸ್ಥರೇ ಕರೆದು ಕುಡಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕೊಂದು ಬೈಕ್ ಅಲ್ಲೇ ಬಿಟ್ಟು ಪರಾರಿ ಆಗಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.