ಪೋಷಕರು ಕಾಲಿಗೆ ಬಿದ್ದು ಗೋಗರೆದರೂ ಕರಗದ ಮಗಳು! ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ

ವಿಜಯಪುರದಲ್ಲಿ ಯುವತಿಯೊಬ್ಬಳು ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ಪರಾರಿಯಾದ ಘಟನೆ ನಡೆದಿದ್ದು, ಆಕೆಗಾಗಿ ಪೋಷಕರು ಪೊಲೀಸ್ ಠಾಣೆಯ ಮುಂದೆಯೆ ಕುಳಿತು ಗೋಳಿಟ್ಟಿದ್ದಾರೆ. ತಂದೆ ತಾಯಿ ಮಗಳ ಮುಂದೆ ಗೋಳಾಡಿ ಕರೆದರೂ ಕರಗದ ಯುವತಿ, ತನ್ನ ಪತಿಯೊಂದಿಗೆ ಹೋಗಲು ನಿರ್ಧರಿಸಿದ್ದಾಳೆ. ಮಗಳ ಈ ನಿರ್ಧಾರದಿಂದ ನೊಂದ ಪೋಷಕರು ಪೊಲೀಸ್ ಠಾಣೆಯ ಮುಂದೆ ಕಣ್ಣೀರಿಟ್ಟಿದ್ದಾರೆ.

ಪೋಷಕರು ಕಾಲಿಗೆ ಬಿದ್ದು ಗೋಗರೆದರೂ ಕರಗದ ಮಗಳು! ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ
'ನಾನು ಅವನ ಜೊತೆಗೇ ಹೋಗ್ತೀನಿ, ನಿಮ್ಮ ಜೊತೆ ಬರಲ್ಲ' ಪೋಷಕರ ಕಣ್ಣೀರಿಗೂ ಕರಗದ ಮಗಳು!
Edited By:

Updated on: Feb 10, 2026 | 10:33 AM

ವಿಜಯಪುರ, ಫೆಬ್ರವರಿ 10: ಪ್ರೀತಿಸಿದ ಯುವಕನೊಂದಿಗೆ ಪರಾರಿಯಾದ ಮಗಳಿಗಾಗಿ ಆಕೆಯ ಪೋಷಕರು ಪೊಲೀಸ್ ಠಾಣೆ ಮುಂದೆ ಕಣ್ಣಿರು ಹಾಕಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ. ಹೆತ್ತವರನ್ನು ಬಿಟ್ಟು ಪರಾರಿಯಾದ ಯುವತಿ, ಅನ್ಯಧರ್ಮೀಯನನ್ನು ಮದುವೆ ಆಗಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಪೊಲೀಸ್ ಠಾಣೆಯ ಎದುರಿಗೆ ಕೂತು ಗೋಳಿಟ್ಟಿದ್ದಾರೆ.

ಮೊಹಮದ್ ಸಲಿಂ ಸುತಾರ್ ಎಂಬ ಯುವಕನನ್ನು ಪ್ರೀತಿಸಿದ್ದ ಹುಡುಗಿ, ತಂದೆ ತಾಯಿಯನ್ನು ಎದುರುಹಾಕಿಕೊಂಡು ಆತನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆ ಮಗಳು ಕಾಣೆಯಾಗಿದ್ದಾಳೆಂದು ಫೆಬ್ರವರಿ 2ರಂದು ಯುವತಿಯ ಪೋಷಕರು ವಿಜಯನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಇದೀಗ ಅದೇ ಠಾಣೆಗೆ ಸ್ವಯಂಪ್ರೇರಿತವಾಗಿ ಪ್ರಿಯಕರನೊಂದಿಗೆ ಬಂದ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ.

ಪೊಲೀಸ್ ವಾಹನದ ಮುಂದೆ ಅಡ್ಡ ಬಿದ್ದು ಗೋಳಾಡಿದ ತಂದೆ-ತಾಯಿ

ಈ ವೇಳೆ ಠಾಣೆಗೆ ಬಂದ ತಂದೆ-ತಾಯಿ, ಮನೆಗೆ ವಾಪಸ್ ಬರುವಂತೆ ಮಗಳಲ್ಲಿ ಅಂಗಲಾಚಿದ್ದಾರೆ. ಆದರೆ ಯುವತಿ ಮಾತ್ರ ಹೆತ್ತವರ ಕಣ್ಣೀರಿಗೂ ಕರಗದೆ, ನಾನು ನನ್ನ ಗಂಡನ ಜೊತೆಗೆ ಹೋಗುತ್ತೇನೆ, ನಿಮ್ಮ ಜೊತೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಯುವತಿಯೂ ಪ್ರಾಪ್ತ ವಯಸ್ಸಿನವಳಾದ್ದರಿಂದ ಪೊಲೀಸರು ಆಕೆಯನ್ನು ಪತಿಯ ಜೊತೆಗೇ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ ಸಾವಿರ ರೂಪಾಯಿಗೆ ಹೆಂಡತಿಯನ್ನು ಸ್ನೇಹಿತರಿಗೆ ಮಾರಿದ ವ್ಯಕ್ತಿ, ಆಮೇಲೆ ನಡೀಬಾರದ್ದು ನಡೆದೇ ಹೋಯ್ತು

ಪೋಷಕರು ಎಷ್ಟೇ ಕರೆದರೂ ಒಪ್ಪದ ಮಗಳು ಗಂಡನೊಂದಿಗೇ ಹೋದಾಗ, ಆಕೆಯಿದ್ದ ಪೊಲೀಸ್ ವಾಹನಕ್ಕೂ ಅಡ್ಡಬಿದ್ದು ಮಗಳನ್ನು ಓಲೈಸಲು ಪೋಷಕರು ಪ್​ರಯತ್ನಿಸಿದ್ದಾರೆ. ಆದರೂ ಹೆತ್ತ ಕರುಳಿಗೆ ಸಮಾಧಾನವಾಗದೇ ಪೊಲೀಸ್ ಠಾಣೆಯ ಮುಂದೇ ಕುಳಿತು ತಂದೆ ತಾಯಿಯಿಬ್ಬರೂ ಗೋಗರೆದಿದ್ದಾರೆ. ಮಗಳು ಮಾತ್ರ ತಂದೆ ತಾಯಿಯ ಮುಖವನ್ನೂ ನೋಡದೆ ಅನ್ಯಕೋಮಿನ ಪ್ರಿಯಕರನೊಂದಿಗೆ ಹೊರಟು ಹೋಗಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us