ವಿಜಯಪುರ: ಕಾಡುಹಂದಿ ಸಾಗಾಟ ಜಾಲ ಪತ್ತೆ; ಅರಣ್ಯ ಇಲಾಖೆ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್​​

ವಿಜಯಪುರ ಮಾರ್ಗವಾಗಿ ಇತರೆ ಜಿಲ್ಲೆ ಮತ್ತು ರಾಜ್ಯಗಳಿಗೆ ಅಕ್ರಮವಾಗಿ ಕಾಡು ಹಂದಿ ಸಾಗಾಟ ದಂಧೆ ಪತ್ತೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 20 ಕಾಡು ಹಂದಿಗಳನ್ನು ರಕ್ಷಿಸಿದ್ದು, ಮೂವರನ್ನು ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಡಿ ಭಾಗದ ಈ ಜಾಲವನ್ನು ಭೇದಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ.

ವಿಜಯಪುರ: ಕಾಡುಹಂದಿ ಸಾಗಾಟ ಜಾಲ ಪತ್ತೆ; ಅರಣ್ಯ ಇಲಾಖೆ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್​​
ಕಾಡುಹಂದಿ ಸಾಗಾಟ
Image Credit source: tv9 kannada
Edited By:

Updated on: Oct 10, 2026 | 10:42 PM

ವಿಜಯಪುರ, ಅಕ್ಟೋಬರ್​​ 10: ಮಹಾರಾಷ್ಟ್ರ ಭಾಗದಿಂದ ವಿಜಯಪುರ ಮಾರ್ಗವಾಗಿ ಅನ್ಯ ಜಿಲ್ಲೆ ಹಾಗೂ ರಾಜ್ಯಗಳಿಗೆ ಕಾಡು ಹಂದಿ ಸಾಗಾಟವಾಗುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ. ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಮಾಡಿ ಜಾಲವೊಂದನ್ನು ಪತ್ತೆ ಮಾಡಿದ್ದಾರೆ. ಮಹಾರಾಷ್ಟ್ರ, ಕರ್ನಾಟಕದ ಗಡಿ ಭಾಗದಲ್ಲಿ ಕಾಡು ಹಂದಿಗಳನ್ನು ಸೆರೆ ಹಿಡಿದು ಸಾಗಾಟ ಮಾಡುವ ತಂಡ ಅರಣ್ಯ ಇಲಾಖೆಯ ಅಧಿಕಾರಿಗಳ ಕುಣಿಕೆಗೆ ಬಿದ್ದಿದೆ.

ಕಾಡು ಹಂದಿಗಳ ಸಾಗಾಟ ದಂಧೆ ಪತ್ತೆ

ಮಹಾರಾಷ್ಟ್ರದ ಗಡಿ ಭಾಗ ಹಂಚಿಕೊಂಡಿರುವ ಜಿಲ್ಲೆ ವಿಜಯಪುರ. ಗಡಿ ಭಾಗವಾಗಿರುವ ಕಾರಣ ಅಕ್ರಮ ಚಟುವಟಿಕೆಗಳಿಗೂ ಸಾಕ್ಷಿಯಾಗಿದೆ. ಕಂಟ್ರಿ ಪಿಸ್ತೂಲ್, ನಿಷೇಧಿತ ಮಾದಕ ದ್ರವ್ಯಗಳ ಸಾಗಾಟ ಮಾರಾಟ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳು ಈ ಭಾಗದಲ್ಲಿ ಕಂಡುಬಂದಿವೆ. ಇದೀಗ ಕಾಡು ಹಂದಿಗಳ ಸಾಗಾಟ ಮಾಡುವ ದಂಧೆಯೂ ಪತ್ತೆ ಆಗಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗ ಭೀಮಾನದಿ ತಟದಲ್ಲಿ ಕಾನೂನು ಬಾಹಿರವಾಗಿ ಕಾಡು ಹಂದಿಗಳನ್ನು ಬಲೆ ಹಾಕಿ ಹಿಡಿದು ವಿಜಯಪುರ ಮಾರ್ಗವಾಗಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹಾಗೂ ನೆರೆಯ ಗೋವಾ ರಾಜ್ಯಕ್ಕೆ ಸಾಗಾಟ ಮಾಡಲಾಗುತ್ತಿದೆ. ಈ ಮಾಹಿತಿ ತಿಳಿದ ವಿಜಯಪುರ ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಹಾಗೂ ತಂಡ ನಿನ್ನೆ ರಾತ್ರಿ ತಿಡಗುಂದಿ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ದಾಳಿ ಮಾಡಿದ್ದಾರೆ.

ಮೂವರ ಬಂಧನ

ಕೆಎ 25 ಎಸಿ 1773 ನಂಬರ್​ ಗೂಡ್ಸ್ ವಾಹನದಲ್ಲಿ ಕಾಲುಗಳನ್ನು ಹಾಗೂ ಮುಖ ಕಟ್ಟಿ ಹಾಕಿದ್ದ ಸ್ಥಿತಿಯಲ್ಲಿದ್ದ 20 ಕಾಡು ಹಂದಿಗಳನ್ನು ಸಾಗಾಟ ಮಾಡುವುದು ಕಂಡುಬಂದಿತ್ತು. ಗೂಡ್ಸ್ ವಾಹನವನ್ನು ತಡೆದು ವಿಚಾರಣೆ ಮಾಡಲಾಗಿದ್ದು, ಮಹಾರಾಷ್ಟ್ರದಿಂದ ಕಾಡು ಹಂದಿಗಳನ್ನು ಸಾಗಾಟ ಮಾಡುತ್ತಿರುವುದು ತಿಳಿದುಬಂದಿದೆ. ‘ವಾಹನದಲ್ಲಿದ್ದವರು ನಮಗೆ ಕಾಡು ಹಂದಿಗಳೆಂದು ಹೇಳದೇ ಮಾರಾಟ ಮಾಡಿದ್ದಾರೆ. ನಮ್ಮದು ತಪ್ಪಿಲ್ಲ’ ಎಂದಿದ್ದಾರೆ. ಧಾರವಾಡ ಮೂಲದವರಾದ ಅಭಿಷೇಕ ಕೊರವರ, ನಾಗರಾಜ ಜಗದ ಹಾಗೂ ಶಂಕ್ರೆಪ್ಪ ದುಂಡಿಕೋರ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಕಾಲು, ಬಾಯಿ ಕಟ್ಟಿದ ಕಾರಣ ಚಿಂತಾಜನಕ ಸ್ಥಿತಿಗೆ ತಲುಪಿದ್ದ, ಕಾಡು ಹಂದಿಗಳನ್ನು ನ್ಯಾಯಾಧೀಶರ ಅನುಮತಿ ಪಡೆದು ಸುರಕ್ಷಿತ ಜಾಗದಲ್ಲಿ ಬಿಡಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಗಲಾಟೆ: ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಪುಂಡರಿಂದ ಹಲ್ಲೆ

ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್ 2 ಪ್ರಕಾರ ಕಾಡು ಹಂದಿಗಳನ್ನು ಸಾಗಾಟ ಮಾಡುವುದು ಕಾನೂನು ಬಾಹಿರ. ಕಾನೂನುನಿ ಪ್ರಕಾರ ಕಾಡು ಹಂದಿಗಳ ಅಕ್ರಮ ಸಾಗಾಣೆ ಬೇಟೆಯಾಡಿದಂತೆ. ಕಾರಣ ಕಾಡು ಹಂದಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರ ಮೇಲೆ ವನ್ಯ ಜೀವಿ ಕಾಯ್ದೆ ಪ್ರಕಾರ ವನ್ಯ ಜೀವಿ ಅಪರಾಧ ಪ್ರಕರಣ ದಾಖಲು ಮಾಡಲಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

ಮಹಾರಾಷ್ಟ್ರದಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಹಾಗೂ ಗೋವಾಗೆ ಕಾಡು ಹಂದಿಗಳನ್ನು ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿರುವ ಜಾಲ ಅರಣ್ಯ ಇಲಾಖೆಯ ಅಧಿಕಾರಿಗಳ ಸಿಬ್ಬಂದಿಗಳ ದಾಳಿಯಿಂದ ಬಯಲಾಗಿದೆ. ಜಿಲ್ಲೆಯಲ್ಲಿ ಕಾಡಿನ ಪ್ರಮಾಣ ವಿರಳವಾಗದ್ದರೂ ಭೀಮಾನದಿ ತಟದಲ್ಲಿ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕಂಡುಬರುವ ಕಾಡು ಹಂದಿಗಳನ್ನು ಸೆರೆ ಹಿಡಿದು ಸಾಗಾಟ ಮಾಡಿದ ಜಾಲವನ್ನು ಬಯಲಿಗೆ ಎಳೆದಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ 3 ಬಾರಿ ಲಘು ಭೂಕಂಪ: ಬೆಚ್ಚಿಬಿದ್ದ ವಿಜಯಪುರ ಜನ; ವೈಜ್ಞಾನಿಕ ಅಧ್ಯಯನಕ್ಕೆ ಆಗ್ರಹ

ಸದ್ಯ ಗಡಿ ಭಾಗದ ಮಹಾರಾಷ್ಟ್ರದಲ್ಲಿ ಯಾರು ಕಾಡು ಹಂದಿ ಸೆರೆಹಿಡಿದು ಮಾರಾಟ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಸಾಗಾಟವಾಗುತ್ತದೆ ಎಂಬುದನ್ನು ತನಿಖೆ ನಡೆಸಿ ಪತ್ತೆ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Vijayapura ತಿಡಗುಂದಿ ಬಳಿಯNH 52ರಲ್ಲಿ 20 ಕಾಡು ಹಂದಿ ರಕ್ಷಣೆ, ಖತರ್ನಾಕ್ ಗ್ಯಾಂಗ್ ಅಂದರ್ | #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Loading...
Unable to load recommendations.
Follow Us