AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಮತದಾರರಿಗೆ ಹಲವು ವೋಟರ್ ಐಡಿ! ಎಸ್​ಐಆರ್ ಪ್ರಕ್ರಿಯೆಯಲ್ಲಿ ಲೋಪ ಒಪ್ಪಿಕೊಂಡ ಚುನಾವಣಾ ಆಯೋಗ

ಕರ್ನಾಟಕದ SIR ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಒಂದೇ ವ್ಯಕ್ತಿಗೆ ಹಲವು ವೋಟರ್ ಐಡಿಗಳು ಸೃಷ್ಟಿಯಾಗಿದ್ದು, ಕೆಲವರ ಹೆಸರು ಎರಡು ವಿಧಾನಸಭಾ ಕ್ಷೇತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅರ್ಜಿ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿ ಒಪ್ಪಿಕೊಂಡಿದ್ದು, ಪರಿಶೀಲನೆ ಮತ್ತು ತಿದ್ದುಪಡಿ ಕ್ರಮಕ್ಕೆ ಮುಂದಾಗಿದೆ.

ಒಂದೇ ಮತದಾರರಿಗೆ ಹಲವು ವೋಟರ್ ಐಡಿ! ಎಸ್​ಐಆರ್ ಪ್ರಕ್ರಿಯೆಯಲ್ಲಿ ಲೋಪ ಒಪ್ಪಿಕೊಂಡ ಚುನಾವಣಾ ಆಯೋಗ
ಸಾಂದರ್ಭಿಕ ಚಿತ್ರ
ಭಾವನಾ ಹೆಗಡೆ
|

Updated on: Nov 08, 2026 | 9:41 AM

Share

ಬೆಂಗಳೂರು, ನವೆಂಬರ್ 08: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ವೋಟರ್ ಐಡಿಗಳು ಸೃಷ್ಟಿಯಾಗಿರುವುದು ಹಾಗೂ ಒಂದೇ ಮತದಾರರ ಹೆಸರು ಎರಡು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೂಡ ಪ್ರಕ್ರಿಯೆಯಲ್ಲಿ ಲೋಪಗಳಾಗಿರುವುದನ್ನು ಒಪ್ಪಿಕೊಂಡಿದೆ. ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ಚುನಾವಣಾ ವ್ಯವಸ್ಥೆಯ ನಿಖರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಒಂದೇ ವ್ಯಕ್ತಿಗೆ ಹಲವು ವೋಟರ್ ಐಡಿ ಸೃಷ್ಟಿ!

ಮುಖ್ಯ ಚುನಾವಣಾಧಿಕಾರಿ ಕಚೇರಿ ಶನಿವಾರ ನೀಡಿರುವ ಸ್ಪಷ್ಟನೆಯ ಪ್ರಕಾರ, ಮತದಾರರ ಅರ್ಜಿಗಳನ್ನು ನಿರ್ವಹಿಸುವಾಗ ಎರಡು ರೀತಿಯ ಲೋಪಗಳು ಸಂಭವಿಸಿವೆ. ಮೊದಲನೆಯದಾಗಿ, ಕೆಲವು ಅರ್ಜಿದಾರರು ನಾಗರಿಕ ಸೇವಾ ಪೋರ್ಟಲ್ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಫಾರ್ಮ್ 6 ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಪ್ರಕ್ರಿಯೆಗೊಳಿಸಿದ ಪರಿಣಾಮ, ಒಂದೇ ಮತದಾರರಿಗೆ ಅನೇಕ ಎಲೆಕ್ಟ್ರರ್ ಫೋಟೋ ಐಡೆಂಟಿಟಿ ಕಾರ್ಡ್ (EPIC) ಸಂಖ್ಯೆಗಳನ್ನು ನೀಡಲಾಗಿದೆ.

ಇದರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಗಳು ಸೃಷ್ಟಿಯಾಗಿರುವುದು ಬೆಳಕಿಗೆ ಬಂದಿದೆ. ಮತದಾರರ ಪಟ್ಟಿಯಲ್ಲಿನ ನಕಲಿ ನೋಂದಣಿಗಳನ್ನು ತೆಗೆದುಹಾಕುವುದು SIR ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದ್ದರೂ, ಇಂತಹ ಲೋಪಗಳು ಹೇಗೆ ಸಂಭವಿಸಿದವು ಎಂಬ ಪ್ರಶ್ನೆ ಎದುರಾಗಿದೆ.

ಎರಡು ಕ್ಷೇತ್ರಗಳಲ್ಲಿ ಒಂದೇ ಮತದಾರರ ಹೆಸರು!

ಎರಡನೇ ಲೋಪವು ಮತದಾರರು ತಮ್ಮ ವಾಸಸ್ಥಳವನ್ನು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಬದಲಾಯಿಸಿದ ಪ್ರಕರಣಗಳಿಗೆ ಸಂಬಂಧಿಸಿದೆ. ವಿಳಾಸ ಬದಲಾವಣೆಗೆ ಸಲ್ಲಿಸಿದ್ದ ಫಾರ್ಮ್ 8 ಅರ್ಜಿಗಳನ್ನು ಅನುಮೋದಿಸಿ ಹೊಸ ಕ್ಷೇತ್ರದ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಾಗಿತ್ತು. ಆದರೆ ಹಳೆಯ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಸಲ್ಲಿಸಿದ್ದ ಫಾರ್ಮ್ 7 ಅರ್ಜಿಗಳು ಬಾಕಿ ಉಳಿದಿದ್ದವು. ಹೀಗಾಗಿ ಒಂದೇ ಮತದಾರರ ಹೆಸರು ಎರಡು ಕ್ಷೇತ್ರಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದೆ. ಈ ಪ್ರಕರಣಗಳನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ತಿದ್ದುಪಡಿ ಕ್ರಮ ಕೈಗೊಳ್ಳಲು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ.

ಆದರೆ ಎಷ್ಟು ಮತದಾರರು ಈ ಲೋಪದಿಂದ ಪ್ರಭಾವಿತರಾಗಿದ್ದಾರೆ, ಎಷ್ಟು ನಕಲಿ ಹೆಸರುಗಳನ್ನು ತೆಗೆದುಹಾಕಬೇಕಿದೆ ಮತ್ತು ತಿದ್ದುಪಡಿ ಯಾವಾಗ ಪೂರ್ಣಗೊಳ್ಳಲಿದೆ ಎಂಬುದನ್ನು ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿಲ್ಲ. ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ಮುನ್ನ ಜಾರಿಯಲ್ಲಿರುವ ಕಾನೂನುಬದ್ಧ ನಿರ್ಬಂಧದಿಂದ ತಿದ್ದುಪಡಿ ವಿಳಂಬವಾಗಿದೆ ಎಂದು ಕಚೇರಿ ತಿಳಿಸಿದೆ. ಈ ಬೆಳವಣಿಗೆ ಮತದಾರರ ಪಟ್ಟಿ ಪರಿಷ್ಕರಣೆಯ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯ ಕುರಿತು ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ