ಸತ್ತರೇ ಇಲ್ಲೇ ಸಾಯುತ್ತೇವೆ, ನಾವು ಲಸಿಕೆ ಹಾಕಿಸಿಕೊಳ್ಳಲ್ಲ; ಯಾದಗಿರಿಯಲ್ಲಿ ಮಹಿಳೆಯರ ಆವಾಜ್
ಕೊವಿಡ್ ಲಸಿಕೆ ಪಡೆಯುವಂತೆ ಜನಜಾಗೃತಿ ಮೂಡಿಸುತ್ತಿದ್ದರು. ಈ ವೇಳೆ ರಂಪಾಟ ಮಾಡಿದ ಮಹಿಳೆಯರು, ರೇಷನ್ ಕಾರ್ಡ್, ಕರೆಂಟ್ ಕಟ್ ಮಾಡಿದರೂ ಪರವಾಗಿಲ್ಲ. ನಾವು ಸರ್ಕಾರವನ್ನು ನಂಬಿಕೊಂಡು ಜೀವನ ನಡೆಸುತ್ತಿಲ್ಲ. ನಾವು ದುಡಿದು ಬದುಕುತ್ತಿದ್ದೇವೆ ಎಂದು ಆವಾಜ್ ಹಾಕಿದ್ದಾರೆ.
ಯಾದಗಿರಿ: ಕೊರೊನಾ ಲಸಿಕೆ ಪಡೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಬುದ್ಧಿವಾದ ಹೇಳಿದ್ದಕ್ಕೆ ಗ್ರಾಮಸ್ಥರು ಅವಾಜ್ ಹಾಕಿದ್ದಾರೆ. ಸತ್ತರೇ ಇಲ್ಲೇ ಸಾಯುತ್ತೇವೆ. ಆದರೆ ನಾವು ಲಸಿಕೆ ಹಾಕಿಸಿಕೊಳ್ಳಲ್ಲ ಎಂದು ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯ ಮಹಿಳೆಯರು ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ. ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಎದುರಲ್ಲೇ ಈ ರಂಪಾಟ ನಡೆದಿದೆ.
ಕೊವಿಡ್ ಲಸಿಕೆ ಪಡೆಯುವಂತೆ ಜನಜಾಗೃತಿ ಮೂಡಿಸುತ್ತಿದ್ದರು. ಈ ವೇಳೆ ರಂಪಾಟ ಮಾಡಿದ ಮಹಿಳೆಯರು, ರೇಷನ್ ಕಾರ್ಡ್, ಕರೆಂಟ್ ಕಟ್ ಮಾಡಿದರೂ ಪರವಾಗಿಲ್ಲ. ನಾವು ಸರ್ಕಾರವನ್ನು ನಂಬಿಕೊಂಡು ಜೀವನ ನಡೆಸುತ್ತಿಲ್ಲ. ನಾವು ದುಡಿದು ಬದುಕುತ್ತಿದ್ದೇವೆ ಎಂದು ಆವಾಜ್ ಹಾಕಿದ್ದಾರೆ. ಅಧಿಕಾರಿಗಳು ಮಹಿಳೆಯರ ರಂಪಾಟಕ್ಕೆ ಕಕ್ಕಾಬಿಕ್ಕಿಯಾಗಿದ್ದರು. ಲಸಿಕೆ ಪಡೆಯಿರಿ ಅನ್ನುತ್ತಿದ್ದಂತೆ ಮಹಿಳೆಯೊಬ್ಬರು ಆಶಾ ಕಾರ್ಯಕರ್ತೆಗೆ ಗದರಿ ಮನೆಗೆ ಬೀಗ ಹಾಕಿ ತಪ್ಪಿಸಿಕೊಂಡು ಓಡಿಹೋಗಿದ್ದಾರೆ.
ಬಹುತೇಕ ಮನೆಗಳಿಗೆ ಬೀಗ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ ಅಂತ ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯಲ್ಲಿ ಬಹುತೇಕ ಜನರು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಮನೆ ಬಾಗಿಲು ಹಾಕಿಕೊಂಡು ಒಳಗಡೆ ಕುಳಿತಿದ್ದಾರೆ. ಗ್ರಾಮಸ್ಥರ ಈ ನಿರ್ಲಕ್ಷ್ಯ ವರ್ತನೆಯಿಂದ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದೆ.
ಇದನ್ನೂ ಓದಿ
ಕೊರೊನಾ ಸಮಯದಲ್ಲೂ ಲಾಭ ಗಳಿಸಿದ ಬೀದರ್ ರೈತ; ಪಪ್ಪಾಯಿ ಬೆಳೆಗೆ ರಾಜ್ಯದೆಲ್ಲೆಡೆ ಬೇಡಿಕೆ
ಮೆಟ್ರೋ ಹತ್ತಿದ್ದ ಮಂಗ; ಅಸಲಿ ವಿಷಯ ತಿಳಿಸಿದ ಅಧಿಕಾರಿಗಳು
(villagers of Yadgir district have refused to get Corona vaccine)