ಬಾಗಲಕೋಟೆಯಿಂದ ಗದಗಕ್ಕೆ ಶವ ತಂದ ಕುಟುಂಬಸ್ಥರು, ಆದರೆ ಸೋಂಕಿತ ವೃದ್ಧನ ಶವ ಸಂಸ್ಕಾರಕ್ಕೆ ಗ್ರಾಮಸ್ಥರಿಂದ ವಿರೋಧ
ಮೃತ ವೃದ್ಧ ಗದಗ ಬಿಟ್ಟು ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವಿಷಯ ತಿಳಿದ ಬಳಿಕ ಕುಟುಂಬಸ್ಥರು ವೃದ್ಧನ ಅಂತ್ಯ ಸಂಸ್ಕಾರಕ್ಕೆ ಹುಟ್ಟೂರಿಗೆ ಶವ ತಂದಿದ್ದರು. ಈ ವೇಳೆ ಅಂತ್ಯಕ್ರಿಯೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜೆಸಿಬಿ ಸಹಾಯದಿಂದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ
ಗದಗ: ಜಿಲ್ಲೆಯುಲ್ಲಿ ಕೊರೊನಾ ಸೋಂಕಿತ ವೃದ್ಧನ ಶವ ಸಂಸ್ಕಾರಕ್ಕೆ ಗ್ರಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಅಮರಗೋಳದಲ್ಲಿ ನಡೆದಿದೆ. ಮೂಲತಃ ಅಮರಗೋಳ ಗ್ರಾಮದ 72 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದರು. ಗ್ರಮದಲ್ಲೇ ವೃದ್ಧನ ಶವ ಸಂಸ್ಕಾರ ಮಾಡಲು ಕುಟುಂಬಸ್ಥರು ಚಿಂತಿಸಿದ್ದರು. ಆದರೆ ಗ್ರಾಮದ ಜನ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಮಾತಿನ ಚಕಮಕಿ ನಡೆದಿದೆ.
ಮೃತ ವೃದ್ಧ ಗದಗ ಬಿಟ್ಟು ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವಿಷಯ ತಿಳಿದ ಬಳಿಕ ಕುಟುಂಬಸ್ಥರು ವೃದ್ಧನ ಅಂತ್ಯ ಸಂಸ್ಕಾರಕ್ಕೆ ಹುಟ್ಟೂರಿಗೆ ಶವ ತಂದಿದ್ದರು. ಈ ವೇಳೆ ಅಂತ್ಯಕ್ರಿಯೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜೆಸಿಬಿ ಸಹಾಯದಿಂದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆಯಾಗಿದ್ದರಿಂದ ಆ್ಯಂಬುಲೆನ್ಸ್ ಹೋಗಲೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಜೆಸಿಬಿಯಲ್ಲಿ ಶವ ಹಾಕಿಕೊಂಡು ಹೋಗಿ ಜೆಸಿಬಿ ಮೂಲಕ ತಮ್ಮ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಗ್ರಾಮದ ರುಧ್ರಭೂವಿಯಲ್ಲಿ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಇದನ್ನೂ ಓದಿ: ತಮಿಳುನಾಡಿದಲ್ಲಿ ಕೊರೊನಾ ದೇವರಿಗೆ ವಿಶೇಷ ಪೂಜೆ; ಆಶ್ಚರ್ಯವೆನಿಸಿದರೂ ನಂಬಲೇ ಬೇಕಾದ ಸತ್ಯ!