AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಕ್ಷೇತ್ರಗಳಲ್ಲಿ ಮತದಾನ ಆರಂಭ, ಕುಟುಂಬಸ್ಥರ ಜತೆ ಆಗಮಿಸಿ ಕೃಷ್ಣಮೂರ್ತಿ ವೋಟಿಂಗ್

ಬೆಂಗಳೂರು: ಆರ್​.ಆರ್​.ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಆರ್​.ಆರ್​.ನಗರದ 678 ಮತಗಟ್ಟೆಗಳಲ್ಲಿ ಮತದಾನ ಶುರುವಾಗಿದ್ದು, ಶಿರಾದ 330 ಮತಗಟ್ಟೆಗಳಲ್ಲೂ ಮತದಾನ ನಡೆಯುತ್ತಿದೆ. ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸ್ತಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಹಾಗೂ ಸಂಜೆ 5ರಿಂದ ಸಂಜೆ 6 ಗಂಟೆವರೆಗೆ ಸೋಂಕಿತರಿಗೆ ಮತ ಹಾಕಲು ಅವಕಾಶ ನೀಡಲಾಗುತ್ತೆ. ಎರಡೂ ಕ್ಷೇತ್ರಗಳಲ್ಲಿ ಮತದಾನ ಈಗ ಆರಂಭವಾಗಿದ್ದರೂ ಆಗಲೇ ಆರ್​.ಆರ್​.ನಗರ ಕ್ಷೇತ್ರದ ಒಂದು ಬೂತ್​ನಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಹೆಚ್​ಎಂಆರ್​ […]

2 ಕ್ಷೇತ್ರಗಳಲ್ಲಿ ಮತದಾನ ಆರಂಭ, ಕುಟುಂಬಸ್ಥರ ಜತೆ ಆಗಮಿಸಿ ಕೃಷ್ಣಮೂರ್ತಿ ವೋಟಿಂಗ್
ಆಯೇಷಾ ಬಾನು
|

Updated on: Nov 03, 2020 | 7:17 AM

Share

ಬೆಂಗಳೂರು: ಆರ್​.ಆರ್​.ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಆರ್​.ಆರ್​.ನಗರದ 678 ಮತಗಟ್ಟೆಗಳಲ್ಲಿ ಮತದಾನ ಶುರುವಾಗಿದ್ದು, ಶಿರಾದ 330 ಮತಗಟ್ಟೆಗಳಲ್ಲೂ ಮತದಾನ ನಡೆಯುತ್ತಿದೆ. ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸ್ತಿದ್ದಾರೆ.

ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಹಾಗೂ ಸಂಜೆ 5ರಿಂದ ಸಂಜೆ 6 ಗಂಟೆವರೆಗೆ ಸೋಂಕಿತರಿಗೆ ಮತ ಹಾಕಲು ಅವಕಾಶ ನೀಡಲಾಗುತ್ತೆ. ಎರಡೂ ಕ್ಷೇತ್ರಗಳಲ್ಲಿ ಮತದಾನ ಈಗ ಆರಂಭವಾಗಿದ್ದರೂ ಆಗಲೇ ಆರ್​.ಆರ್​.ನಗರ ಕ್ಷೇತ್ರದ ಒಂದು ಬೂತ್​ನಲ್ಲಿ ಅವ್ಯವಸ್ಥೆ ಕಂಡು ಬಂದಿದೆ.

ಹೆಚ್​ಎಂಆರ್​ ಕಾನ್ವೆಂಟ್​ನ ಬೂತ್​ನಲ್ಲಿ ಕರೆಂಟ್​ ಕಟ್​ ಆಗಿದೆ. ವಿದ್ಯುತ್ ಇಲ್ಲದೇ ಮೇಣದ ಬತ್ತಿ ಬಳಸಿ ಮತದಾನಕ್ಕೆ ಸಿಬ್ಬಂದಿ ಸಿದ್ಧತೆ ನಡೆಸುತ್ತಿದ್ದಾರೆ. ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ ಮತ ಹಾಕೋ ಬೂತ್ ಇದು. ಸದ್ಯ ಬೆಂಗಳೂರಿನ ಜ್ಞಾನಭಾರತಿ ವಾರ್ಡ್‌ನಲ್ಲಿರುವ ಹೆಚ್ಎಂಆರ್ ಕಾನ್ವೆಂಟ್ ಮತಗಟ್ಟೆಯಲ್ಲಿ ಕುಟುಂಬಸ್ಥರ ಜತೆ ಆಗಮಿಸಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮತದಾನ ಮಾಡಿದ್ದಾರೆ.