AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್​​ನಲ್ಲಿ ಜೈಲು ಪಾಲಾಗಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್

ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ 'ಮ್ಯೂಸಿಕ್ ಮೈಲಾರಿ' ವಿರುದ್ಧ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮ್ಯೂಸಿಕ್ ಮೈಲಾರಿಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಬಾಗಲಕೋಟೆ ಕೋರ್ಟ್​ ಕೆಲ ಷರತ್ತುಗಳನ್ನು ವಿಧಿಸಿ ಮೈಲಾರಿಗೆ ಜಾಮೀನು ನೀಡಿದೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್​​ನಲ್ಲಿ ಜೈಲು ಪಾಲಾಗಿದ್ದ ಮ್ಯೂಸಿಕ್  ಮೈಲಾರಿಗೆ ಬಿಗ್ ರಿಲೀಫ್
Music Mailari
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Feb 24, 2026 | 6:44 PM

Share

ಬಾಗಲಕೋಟೆ, (ಫೆಬ್ರವರಿ 24): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ಆರೋಪದ ಮೇಲೆ ಪೊಕ್ಸೋ ಪ್ರಕರಣದಲ್ಲಿ (pocso case) ಜೈಲು ಸೇರಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿಗೆ (Singer music mailari ) ಜಾಮೀನು ಸಿಕ್ಕಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪಿ ಮ್ಯೂಸಿಕ್ ಮೈಲಾರಿಗೆ ಬಾಗಲಕೋಟೆ ಕೋರ್ಟ್​ ನ್ಯಾಯಾಧೀಶರಾದ ಪ್ರೀತಿ ಸಗರ ಜೋಷಿ ಅವರು ಕೆಲ ಷರತ್ತುಗಳನ್ನು ವಿಧಿಸಿ ಇಂದು (ಫೆಬ್ರವರಿ 24) ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಒಂದು ಲಕ್ಷ ಶ್ಯುರಿಟಿ ಬಾಂಡ್,ಪ್ರಾಷಿಕ್ಯೂಷನ್‌ ಮೇಲೆ ಪ್ರಭಾವ ಬೀರಬಾರದು, ಇದೇ ತರಹದ ಅಪರಾಧ ಮತ್ತೆ‌ ಮಾಡಬಾರದು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಇದರೊಂದಿಗೆ ಕಳೆದ ಡಿಸೆಂಬರ್​​ನಿಂದ ಜೈಲು ಪಾಲಾಗಿದ್ದ ಮೈಲಾರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೈಲಾರಿಯನ್ನು ಮಹಾಲಿಂಗಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ತಲೆಮರಿಸಿಕೊಂಡಿದ್ದ ಮೈಲಾರಿ 2025ರ ಡಿಸೆಂಬರ್ 17ರಂದು ಮಹಾರಾಷ್ಟ್ರಕ್ಕೆ ತೆರಳುತ್ತಿರುವಾಗ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಯೂಟ್ಯೂಬ್ ಸ್ಟಾರ್ ಮೈಲಾರಿ ವಿರುದ್ಧ ಪೋಕ್ಸೋ ಕೇಸ್

ಪ್ರಕರಣದ ಹಿನ್ನೆಲೆ

ಬೆಳಗಾವಿ (Belagavi)ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಬಂದಿದ್ದಳು. ಕಾರ್ಯಕ್ರಮದ ವೇಳೆ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸ್ವತಃ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಅಲ್ಲದೆ, ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಸದ್ಯ ಮ್ಯೂಸಿಕ್ ಮೈಲಾರಿ ಸೇರಿದಂತೆ ಏಳು ಜನರು ಅಪರಾಧ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಪ್ರಕರಣವನ್ನು ಡಿಸೆಂಬರ್ 15ರಂದು ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಬಳಿಕ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಯಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Tue, 24 February 26

Follow Us
120 ಅಡಿ ಎತ್ತರದ ಹಾಲುಗಂಬ ಏರಿ ಸಾಹಸ ಮೆರೆದ 62ರ ವ್ಯಕ್ತಿ! ವಿಡಿಯೋ ನೋಡಿ
120 ಅಡಿ ಎತ್ತರದ ಹಾಲುಗಂಬ ಏರಿ ಸಾಹಸ ಮೆರೆದ 62ರ ವ್ಯಕ್ತಿ! ವಿಡಿಯೋ ನೋಡಿ
ಅಮೆರಿಕದ ಪನಾಮ ಸೇತುವೆ ಮೇಲೆ ಮೂರು ಇಂಧನ ಟ್ಯಾಂಕರ್​ಗಳ ಸ್ಫೋಟ
ಅಮೆರಿಕದ ಪನಾಮ ಸೇತುವೆ ಮೇಲೆ ಮೂರು ಇಂಧನ ಟ್ಯಾಂಕರ್​ಗಳ ಸ್ಫೋಟ
ಇದು ಪಾಕ್ ಲೀಗ್​​ ವಿಡಿಯೋನಾ? ವೈರಲ್ ಆದ ವಿಡಿಯೋ ಹಿಂದಿನ ಅಸಲಿಯತ್ತೇನು?
ಇದು ಪಾಕ್ ಲೀಗ್​​ ವಿಡಿಯೋನಾ? ವೈರಲ್ ಆದ ವಿಡಿಯೋ ಹಿಂದಿನ ಅಸಲಿಯತ್ತೇನು?
ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಐಟಿ ಬಾಬಾ
ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಐಟಿ ಬಾಬಾ
ನೀವು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲೇ ಕಸ ಗುಡಿಸುತ್ತಿದ್ದೀರಾ?
ನೀವು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲೇ ಕಸ ಗುಡಿಸುತ್ತಿದ್ದೀರಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ!
ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಮೋದಿ ವಾಗ್ದಾಳಿ
ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಮೋದಿ ವಾಗ್ದಾಳಿ
ನೋಡನೋಡುತ್ತಲೇ ಬೈಕ್ ಮೇಲೆ ಪಲ್ಟಿಯಾಯ್ತು ಹುಲ್ಲು ತುಂಬಿದ ಟ್ರಾಕ್ಟರ್
ನೋಡನೋಡುತ್ತಲೇ ಬೈಕ್ ಮೇಲೆ ಪಲ್ಟಿಯಾಯ್ತು ಹುಲ್ಲು ತುಂಬಿದ ಟ್ರಾಕ್ಟರ್
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು