ನಾಳೆಯಿಂದ ವಿಟಿಯು ಪರೀಕ್ಷೆ: ಸಮಸ್ಯೆ ಬಗ್ಗೆ ವಿಟಿಯುಗೆ ಟ್ಯಾಗ್ ಮಾಡಿದ್ದ ವಿದ್ಯಾರ್ಥಿಗಳು ಸಸ್ಪೆಂಡ್
ನಾಳೆಯಿಂದ ಮೇ 5ರ ವರೆಗೆ ಪ್ರಥಮ ವರ್ಷದ ವಿಟಿಯು ಪರೀಕ್ಷೆ ನಡೆಯಲಿದೆ. ಮಹಾಮಾರಿ ಕೊರೊನಾ ನಡುವೆ ನಡೆಸುವ ಪರೀಕ್ಷೆಯಿಂದ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುತ್ತದೆಯಾ ಎಂಬ ಆತಂಕ ಮನೆ ಮಾಡಿದೆ.
ಬೆಂಗಳೂರು: ವಿದ್ಯಾರ್ಥಿಗಳ ವಿರೋಧದ ನಡುವೆಯೂ ನಾಳೆಯಿಂದ (ಏಪ್ರಿಲ್ 19) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಇಂಜಿನಿಯರಿಂಗ್ ಮೊದಲ ವರ್ಷದ ವಿದ್ಯಾರ್ಥಿಗಳ ಪರೀಕ್ಷೆ ನಡೆಸುತ್ತಿದೆ. ನಾಳೆಯಿಂದ ನಡೆಯುವ ಮೊದಲ ಸೆಮಿಸ್ಟರ್ ಪರೀಕ್ಷೆ ಹಿನ್ನೆಲೆ ಸಮಸ್ಯೆ ಬಗ್ಗೆ ವಿಟಿಯುಗೆ ಟ್ಯಾಗ್ ಮಾಡಿದ್ದವರನ್ನು ವಿಟಿಯು ಸಸ್ಪೆಂಡ್ ಶಿಕ್ಷೆ ನೀಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಪರೀಕ್ಷೆ ಮಾಡಿ ಎಂದು ಟ್ವಿಟರ್ನಲ್ಲಿ ವಿಟಿಯುಗೆ ಟ್ಯಾಗ್ ಮಾಡಿ ಮನವಿ ಕೋರಿದ್ದ ವಿದ್ಯಾರ್ಥಿಗಳು ಸಸ್ಪೆಂಡ್ ಆಗಿದ್ದಾರೆ.
ನಾಳೆಯಿಂದ ಮೇ 5ರ ವರೆಗೆ ಪ್ರಥಮ ವರ್ಷದ ವಿಟಿಯು ಪರೀಕ್ಷೆ ನಡೆಯಲಿದೆ. ಮಹಾಮಾರಿ ಕೊರೊನಾ ನಡುವೆ ನಡೆಸುವ ಪರೀಕ್ಷೆಯಿಂದ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುತ್ತದೆಯಾ ಎಂಬ ಆತಂಕ ಮನೆ ಮಾಡಿದೆ. ಕೊರೊನಾ ಇದ್ದರೂ ಪರೀಕ್ಷೆ ಬರೆಯಬೇಕಾಗಿದ್ದು, ಸದ್ಯದ ಸ್ಥಿತಿಯಲ್ಲಿ ಪರೀಕ್ಷೆ ಬೇಡ ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ರಾಜ್ಯಾದ್ಯಂತ ಸುಮಾರು 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತದೆ. ಬೆಂಗಳೂರಿನಲ್ಲೇ 15 ಸಾವಿರಕ್ಕೂ ಹೆಚ್ಚು ವಿಟಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಗುಜರಾತ್, ಮಹಾರಾಷ್ಟ್ರ, ಕೇರಳದಿಂದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬರಬೇಕಿದೆ. ಸದ್ಯದ ಪರಿಸ್ಥಿತಿಗೆ ಪರೀಕ್ಷೆ ಬೇಡ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದರೂ ಪರೀಕ್ಷೆ ನಡೆಸಲು ವಿಟಿಯು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದೂಡಿಕೆ ಮಾಡಲ್ಲ. ಆಫ್ಲೈನಲ್ಲೇ ಪರೀಕ್ಷೆ ಬರೆಯಬೇಕು ಎಂದು ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಹೇಳುತ್ತಿದ್ದಾರೆ.
ಇದನ್ನೂ ಓದಿ
ರೈಲುಗಳ ಮೂಲಕ ವೈದ್ಯಕೀಯ ಆಕ್ಸಿಜನ್ ಸಾಗಣೆಗೆ ಅವಕಾಶ ಕೊಡಿ; ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರದ ಮನವಿ
(VTU has suspended students who insisted on conducting the test after Corona came under control in twitter)