ವಾಯು ಪಡೆ ಯೋಧರಿಂದ ಸೈಕಲ್ ಜಾಥಾ ಮೂಲಕ ಕನ್ನಡ ರಾಜ್ಯೋತ್ಸವ
ಸೇನೆಯಲ್ಲಿ ಸೇವೆ ಸಲ್ಲಿಸುವ ನಾವು ವಿವಿಧ ಪ್ರಾಂತ್ಯಗಳಲ್ಲಿ ಕೆಲಸ ಮಾಡುತ್ತೇವೆ. ಕರ್ನಾಟಕ ಬಿಟ್ಟು ಬೇರೆ ರಾಜ್ಯದಲ್ಲಿ ನಮ್ಮ ಭಾಷೆ ಕನ್ನಡ ಕೇಳಲು ಖುಷಿ, ಮೈ ರೋಮಾಂಚನವಾಗುತ್ತದೆ ಎನ್ನುತ್ತಾರೆ ಈ ಯೋಧರು.
ನವದೆಹಲಿ: ವೆಸ್ಟರ್ನ್ ಏರ್ ಕಮಾಂಡ್ನಿಂದ (ಸುಭ್ರತೋ ಪಾರ್ಕ್) ಕೆಂಪು ಕೋಟೆ ಮಾರ್ಗವಾಗಿ ದೆಹಲಿ ಗೇಟ್ವರೆಗೂ ಸೈಕಲ್ ಜಾಥಾ ಮೂಲಕ ವಾಯುಪಡೆ ಯೋಧರಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸುಮಾರು 20 ಕಿ.ಮೀ. ಸೈಕಲ್ ಜಾಥಾದ ಮೂಲಕ ಇಂಡಿಯಾ ಗೇಟ್ ತಲುಪಿ ಅಲ್ಲಿ ಕನ್ನಡ ಧ್ವಜ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ವೆಸ್ಟರ್ನ್ ಏರ್ ಕಮಾಂಡ್ನಿಂದ ಸೈಕಲ್ ಜಾಥಾ ನಡೆಸಲಾಯಿತು. ಸೇನೆಯಲ್ಲಿ ಸೇವೆ ಸಲ್ಲಿಸುವ ನಾವು ವಿವಿಧ ಪ್ರಾಂತ್ಯಗಳಲ್ಲಿ ಕೆಲಸ ಮಾಡುತ್ತೇವೆ. ಕರ್ನಾಟಕ ಬಿಟ್ಟು ಬೇರೆ ರಾಜ್ಯದಲ್ಲಿ ನಮ್ಮ ಭಾಷೆ ಕನ್ನಡ ಕೇಳಲು ಖುಷಿ, ಮೈ ರೋಮಾಂಚನವಾಗುತ್ತದೆ ಎನ್ನುತ್ತಾರೆ ಈ ಯೋಧರು.
ಹೀಗಾಗಿ, ನಾವೆಲ್ಲ ಕನ್ನಡಿಗರು ಸೇರಿ ಕನ್ನಡ ರಾಜ್ಯೋತ್ಸವ ಆಚರಿಸೋಣ ಎಂದು ನಿರ್ಧರಿಸಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಇಂಡಿಯ ಗೇಟ್ ಬಳಿ ಕನ್ನಡ ಧ್ವಜ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ?
ದೆಹಲಿಯಲ್ಲಿ ಮಿತಿಮೀರಿದ ಮಾಲಿನ್ಯ; 2 ದಿನಗಳ ಕಾಲ ಲಾಕ್ಡೌನ್ ಮಾಡಲು ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸಲಹೆ