AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಯಾವ ರಾಜ್ಯದ ಶಾಸಕರು ಹೆಚ್ಚು ಆಸ್ತಿವಂತರು? ಇಲ್ಲಿದೆ ಉತ್ತರ

ನಮ್ಮ ದೇಶದಲ್ಲಿ ಶ್ರೀಮಂತರು ಯಾರು ಎಂಬ ಪ್ರಶ್ನೆಗೆ ಬಹುತೇಕ ಜನರು ರಾಜಕಾರಣಿಗಳು ಎಂದು ಉತ್ತರ ನೀಡುತ್ತಾರೆ. ಕೆಲವೊಂದು ಸಾರಿ ಇದು ಸತ್ಯ ಅನಿಸುವುದು ಉಂಟು. ಇದೀಗ ದೇಶದ ಯಾವ ರಾಜ್ಯದ ರಾಜಕಾರಣಿಗಳು ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ಉತ್ತರ.

ದೇಶದಲ್ಲಿ ಯಾವ ರಾಜ್ಯದ ಶಾಸಕರು ಹೆಚ್ಚು ಆಸ್ತಿವಂತರು? ಇಲ್ಲಿದೆ ಉತ್ತರ
ಕರ್ನಾಟಕ ವಿಧಾನಸಭೆ
ವಿವೇಕ ಬಿರಾದಾರ
|

Updated on: Aug 02, 2023 | 8:00 AM

Share

ಬೆಂಗಳೂರು: ನಮ್ಮ ದೇಶದಲ್ಲಿ ಶ್ರೀಮಂತರು ಯಾರು ಎಂಬ ಪ್ರಶ್ನೆಗೆ ಬಹುತೇಕ ಜನರು ರಾಜಕಾರಣಿಗಳು (Politicians) ಎಂದು ಉತ್ತರ ನೀಡುತ್ತಾರೆ. ಕೆಲವೊಂದು ಸಾರಿ ಇದು ಸತ್ಯ ಅನಿಸುವುದು ಉಂಟು. ಇದೀಗ ದೇಶದ ಯಾವ ರಾಜ್ಯದ ರಾಜಕಾರಣಿಗಳು ಎಷ್ಟು ಆಸ್ತಿ (Property) ಹೊಂದಿದ್ದಾರೆ? ಇಲ್ಲಿದೆ ಉತ್ತರ. ದೇಶದಲ್ಲೇ ಕರ್ನಾಟಕದ (Karnataka) ರಾಜಕಾರಣಿಗಳು ಹೆಚ್ಚು ಆಸ್ತಿ ಹೊಂದಿದ್ದಾರೆ. ಹೌದು ಕರ್ನಾಟಕದ 223 ಶಾಸಕರ ಒಟ್ಟು ಆಸ್ತಿ 14,359 ಕೋಟಿ ರೂಪಾಯಿಗಳಷ್ಟಿದೆ. ಆಶ್ಚರ್ಯವೆನಿಸಿದರು ಸತ್ಯ. ಭಾರತದ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜಕೀಯ ವ್ಯಕ್ತಿಗಳಿಗಿಂತ ರಾಜ್ಯ ರಾಜಕಾರಣಿಗಳ ಆಸ್ತಿ ಅಧಿಕವಾಗಿದೆ.

ಇತ್ತೀಚಿಗೆ ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​​​ (ADR) ಮತ್ತು ನ್ಯಾಷನಲ್​ ಎಲೆಕ್ಷನ್​ ವಾಚ್​ (NEW) ದೇಶದ ರಾಜ್ಯ ವಿಧಾನಸಭೆ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಹಾಲಿ ಶಾಸಕರ ಸ್ವಯಂ ಘೋಷಿತ ದಾಖಲೆಗಳನ್ನು (ಅಫಿಡವಿಟ್​) ಆಧಾರಿಸಿ ಈ ಮಾಹಿತಿ ಬಹಿರಂಗಪಡಿಸಿದೆ.

ಶಾಸಕರು ಚುನಾವಣೆ ಸಂದರ್ಭದಲ್ಲಿ ಸ್ವಯಂ ಘೋಷಿತ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ ವಿವರವನ್ನು ದಾಖಲಿಸಿರುತ್ತಾರೆ. ದೇಶದ 28 ವಿಧಾನಸಭೆ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 4,033 ಶಾಸಕರ ಪೈಕಿ 4001 ಶಾಸಕರ ಆಸ್ತಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ 4001 ಹಾಲಿ ಶಾಸಕರು 84 ರಾಜಕೀಯ ಪಕ್ಷಗಳಿಗೆ ಸೇರಿದವರಾಗಿದ್ದಾರೆ.

ಹೆಚ್ಚು ಆಸ್ತಿ ಹೊಂದಿದ ಶಾಸಕರ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ಇನ್ನು ಕರ್ನಾಟಕದ 223 ಶಾಸಕರ ಒಟ್ಟು ಆಸ್ತಿ ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳ ವಾರ್ಷಿಕ ಬಜೆಟ್​​ಗಿಂತ ಹೆಚ್ಚಾಗಿದೆ. ದೇಶದ 4001 ಶಾಸಕರ ಆಸ್ತಿ 54,545 ಕೋಟಿ ರೂಪಾಯಿ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಭಾರತದ ಅತಿ ಶ್ರೀಮಂತ ಶಾಸಕ; ಅತಿಹೆಚ್ಚು ಬಿಲಿಯನೇರ್ ಶಾಸಕರು ಕರ್ನಾಟಕದವರೇ

ರಾಜಸ್ಥಾನ, ಪಂಜಾಬ್, ಅರುಣಾಚಲ ಪ್ರದೇಶ, ಬಿಹಾರ, ದೆಹಲಿ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಹಾಲಿ ಶಾಸಕರ ಒಟ್ಟು ಆಸ್ತಿಗಿಂತ ಹೆಚ್ಚು. ಪಶ್ಚಿಮ ಬಂಗಾಳ, ಗೋವಾ, ಮೇಘಾಲಯ, ಒಡಿಶಾ, ಅಸ್ಸಾಂ, ನಾಗಾಲ್ಯಾಂಡ್, ಉತ್ತರಾಖಂಡ, ಕೇರಳ, ಪುದುಚೇರಿ, ಜಾರ್ಖಂಡ್, ಸಿಕ್ಕಿಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ಈ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಾಲಿ ಶಾಸಕರ ಒಟ್ಟು ಆಸ್ತಿ 13,976 ಕೋಟಿ ರೂ. ಆಗಿದೆ.

ಕಡಿಮೆ ಆಸ್ತಿ ಹೊಂದಿರುವ ರಾಜ್ಯ ತ್ರಿಪುರಾ ಆಗಿದ್ದು, ಅಲ್ಲಿ ಎಲ್ಲಾ 59 ಶಾಸಕರ ಒಟ್ಟು ಆಸ್ತಿ 90 ಕೋಟಿ ರೂ. ಮಿಜೋರಾಂನ 40 ಶಾಸಕರ ಆಸ್ತಿ 160 ಕೋಟಿ ರೂ. ಮತ್ತು ಮಣಿಪುರದಲ್ಲಿ 60 ಶಾಸಕರ ಒಟ್ಟು ಆಸ್ತಿ 225 ಕೋಟಿ ರೂ. ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಲಿ ಶಾಸಕರ ಸರಾಸರಿ ಮೌಲ್ಯ 13.63 ಕೋಟಿ ರೂ. ಆಗಿದೆ.

1,356 ಬಿಜೆಪಿ ಶಾಸಕರಲ್ಲಿ ಪ್ರತಿ ಶಾಸಕರ ಬಳಿ ಸರಾಸರಿ 16,234 ಕೋಟಿ, ಕಾಂಗ್ರೆಸ್​ನ 719 ಶಾಸಕರ ಬಳಿ 21.97 ಕೋಟಿ, 227 ಎಐಟಿಸಿ (ಅಖಿಲ ಭಾರತ ತೃಣಮೂಲ ಕಾಂಗ್ರೆಸ್) ಶಾಸಕರ ಬಳಿ 3.51 ಕೋಟಿ, 161 ಎಎಪಿ ಶಾಸಕರು 10.20 ಕೋಟಿ, ಮತ್ತು 146 YSRCP ಶಾಸಕರು 23.14 ಕೋಟಿ ರೂ. 131 ಡಿಎಂಕೆ ಶಾಸಕರು 1,663 ಕೋಟಿ ರೂ., ಮತ್ತು 161 ಆಪ್​​ ಶಾಸಕರು 1,642 ಕೋಟಿ ರೂ ಆಸ್ತಿ ಹೊಂದಿದ್ದಾರೆ.

4,001 ಹಾಲಿ ಶಾಸಕರ ಒಟ್ಟು ಆಸ್ತಿಯು ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕಿಂನ 2023-24 ರ ವಾರ್ಷಿಕ ಬಜೆಟ್‌ಗಿಂತ ಹೆಚ್ಚಾಗಿದೆ. ನಾಗಾಲ್ಯಾಂಡ್‌ನ 2023-24ರ ಬಜೆಟ್ 23,086 ಕೋಟಿ ರೂ. ಮಿಜೋರಾಂನ ಬಜೆಟ್​ 14,210 ಕೋಟಿ ರೂ. ಮತ್ತು ಸಿಕ್ಕಿಂನ ಬಜೆಟ್​ 11,807 ರೂ. ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ