ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ: ಔಷಧಕ್ಕೆಂದು ಸದ್ದಿಲ್ಲದೆ ಮಾಯವಾಗ್ತಿದೆ ಪಕ್ಷಿ ಸಂಕುಲ

ವಿದ್ಯಾಕಾಶಿ ಎಂದೇ ಖ್ಯಾತಿಪಡೆದಿರುವ ಧಾರವಾಡ ಸಸ್ಯಕಾಶಿಯೂ ಹೌದು. ಇಲ್ಲಿನ ಸಸ್ಯರಾಶಿ, ಪ್ರಾಣಿ, ಪಕ್ಷಿ ಸಂಕುಲಗಳು ಪರಿಸರವನ್ನು ಸಮೃದ್ಧಗೊಳಿಸಿವೆ.ಆದರೆ, ಈ ಹಸಿರು ಪರಿಸರದ ಪಕ್ಷಿ ಸಂಕುಲಕ್ಕೆ ಕಂಟಕಪ್ರಾಯವಾದ ಕಾರ್ಯಗಳು ಇತ್ತೀಚೆಗೆ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಪಕ್ಷಿಗಳ ಪರಿಸ್ಥಿತಿ ಕರುಣಾಜನಕವಾಗಿದೆ.

ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ: ಔಷಧಕ್ಕೆಂದು ಸದ್ದಿಲ್ಲದೆ ಮಾಯವಾಗ್ತಿದೆ ಪಕ್ಷಿ ಸಂಕುಲ
ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ
Follow us
TV9 Web
| Updated By: ganapathi bhat

Updated on:Apr 07, 2022 | 5:37 PM

ಧಾರವಾಡ: ವಿದ್ಯಾಕಾಶಿ ಎಂದೇ ಖ್ಯಾತಿಪಡೆದಿರುವ ಧಾರವಾಡ ಸಸ್ಯಕಾಶಿಯೂ ಹೌದು. ಇಲ್ಲಿನ ಸಸ್ಯರಾಶಿ, ಪ್ರಾಣಿ, ಪಕ್ಷಿ ಸಂಕುಲಗಳು ಪರಿಸರವನ್ನು ಸಮೃದ್ಧಗೊಳಿಸಿವೆ. ಮರ-ಗಿಡಗಳು ತುಂಬಿದ ಹಸಿರು ಪರಿಸರದಲ್ಲಿ ಬಗೆಬಗೆಯ ಪ್ರಾಣಿ-ಪಕ್ಷಿಗಳು ಆಶ್ರಯ ಪಡೆದಿವೆ. ಆದರೆ, ಈ ಹಸಿರು ಪರಿಸರದ ಪಕ್ಷಿ ಸಂಕುಲಕ್ಕೆ ಕಂಟಕಪ್ರಾಯವಾದ ಕಾರ್ಯಗಳು ಇತ್ತೀಚೆಗೆ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಪಕ್ಷಿಗಳ ಪರಿಸ್ಥಿತಿ ಕರುಣಾಜನಕವಾಗಿದೆ.

ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಹಕ್ಕಿಗಳ ನೆತ್ತರು ಅತ್ಯುತ್ತಮ ಮದ್ದು ಎಂಬ ತಪ್ಪು ಕಲ್ಪನೆ ಇದೀಗ ನಗರದಲ್ಲಿ ಚಾಲ್ತಿಯಲ್ಲಿದೆ. ಈ ಕಾರಣದಿಂದ, ನೂರಾರು ಪಕ್ಷಿಗಳ ಮಾರಣಹೋಮ ನಡೆಯುತ್ತಿದೆ. ನಗರದ ವಿವಿಧ ಬಡಾವಣೆಯ ಸಾರ್ವಜನಿಕ ಉದ್ಯಾನಗಳಲ್ಲಿ ಹಲವು ಯುವಕರು ಹೊಂಚು ಹಾಕಿ, ಗುಲೇಲ್ ಅಥವಾ ಕ್ಯಾಟಿ ಬಳಸಿ ಹಕ್ಕಿಗಳನ್ನು ಹಾಡಹಗಲೇ ಹೊಡೆದು ಕೊಲ್ಲುತ್ತಿದ್ದಾರೆ ಅಥವಾ ಅರೆಜೀವಾವಸ್ಥೆಯಲ್ಲಿ ಹೊತ್ತೊಯ್ಯುತ್ತಿದ್ದಾರೆ.

ಅದರಲ್ಲೂ ಕೆಲ ಸಮುದಾಯಕ್ಕೆ ಸೇರಿದ ಯುವಕರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಯುವಕರು ನಾಲ್ಕಾರು ತಂಡಗಳನ್ನು ಕಟ್ಟಿಕೊಂಡು, ಹಾಡಹಗಲಲ್ಲೇ ಕಾರ್ಯಾಚರಣೆಗೆ ಇಳಿಯುತ್ತಿದ್ದಾರೆ. ಮರ-ಗಿಡಗಳಲ್ಲಿ ಆಶ್ರಯ ಪಡೆದಿರುವ ಬೆಳವ, ಪಾರಿವಾಳ, ಗೊರವಂಕ, ಕೋಗಿಲೆ, ಬುಲ್‌ಬುಲ್ ಹಕ್ಕಿಗಳು ಸೇರಿದಂತೆ ಕೆರೆಗಳ ಆವಾರಣದಲ್ಲಿರುವ ನೀಲಿನಾಮಗೋಳಿ, ಬಿಳಿ ನಾಮಗೋಳಿ, ಗುಳಮುಳಕ ಇತ್ಯಾದಿ ಹಕ್ಕಿಗಳನ್ನು ಗುಲೇಲ್ ಅಥವಾ ಕ್ಯಾಟಿ ಬಳಸಿ ಹೊಡೆದುರುಳಿಸುತ್ತಿದ್ದಾರೆ.

ಗುಲೇಲ್ ಹೊಡೆತಕ್ಕೆ ಕೆಲ ಪಕ್ಷಿಗಳು ಅಲ್ಲಿಯೇ ಜೀವತೆತ್ತರೆ ಮತ್ತೆ ಕೆಲವು ಪಕ್ಷಿಗಳನ್ನು ಅರೆಜೀವಗೊಳಿಸಿ ಚೀಲದಲ್ಲಿ ತುಂಬಿಕೊಂಡು ಒಯ್ಯುತ್ತಿದ್ದಾರೆ. ಇಂತಹ ಪಕ್ಷಿಗಳ ಪೈಕಿ ಕೆಲವನ್ನು ಔಷಧಕ್ಕೆಂದು ಬಳಕೆ ಮಾಡಿಕೊಂಡರೆ‌, ಮತ್ತೆ ಕೆಲ ಪಕ್ಷಿಗಳನ್ನು ತಿನ್ನಲು ಬಳಸಿಕೊಳ್ಳುತ್ತಿದ್ದಾರೆ.

ಈ ವಿಚಾರ ಬೆಳಕಿಗೆ ಬಂದದ್ದು ಹೇಗೆ? ನವೆಂಬರ್ 28 ರಂದು ಸರೋವರ ನಗರ ಬಡಾವಣೆಯ ಕೆ.ಎಚ್.ಬಿ. ಕಾಲೋನಿಯ ಸಾರ್ವಜನಿಕ ಉದ್ಯಾನದಲ್ಲಿ ಹೀಗೆ ಹಕ್ಕಿಗಳನ್ನು ಬೇಟೆಯಾಡಲು ಬಂದಿದ್ದ ಕೆಲವು ಯುವಕರು ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಪಾರ್ಶ್ವವಾಯು ಪೀಡಿತರ ಉಪಚಾರಕ್ಕೆ ಹಕ್ಕಿಗಳ ರಕ್ತ ಬೇಕಿತ್ತು. ಗಾಂವಟಿ ವೈದ್ಯರು ಹೇಳಿದ್ದಕ್ಕೆ ಹಕ್ಕಿಗಳನ್ನು ಒಯ್ಯುತ್ತಿದ್ದೇವೆ ಅಂತಾ ಯುವಕರು ಕಾರಣ ನೀಡಿದ್ದಾರೆ.

ಅವರ ಕೈಯಲ್ಲಿದ್ದ ಚೀಲವನ್ನು ಕಸಿದು ನೋಡಿದಾಗ 20ಕ್ಕೂ ಹೆಚ್ಚು ಹಕ್ಕಿಗಳನ್ನು ಹೊಡೆದುರುಳಿಸಿ, ತುಂಬಿಸಿದ್ದು ಗಮನಕ್ಕೆ ಬಂದಿದೆ. 15 ಕ್ಕೂ ಹೆಚ್ಚು ಹಕ್ಕಿಗಳು ಆಗಲೇ ಕೊನೆಯುಸಿರು ಎಳೆದಿದ್ದರೆ. ಜೊತೆಗೆ, ನಾಲ್ಕು ಹಕ್ಕಿಗಳ ಗೋಣು, ರೆಕ್ಕೆ ಮತ್ತು ಕಾಲು ಮುರಿದಿದ್ದು ಕಂಡುಬಂದಿದೆ.

ಚಿಕಿತ್ಸೆ ನೀಡಿದ ಸ್ಥಳೀಯರು ಕೂಡಲೇ, ಸ್ಥಳೀಯರು ಅವುಗಳನ್ನು ವಶಕ್ಕೆ ಪಡೆದು, ಚಿಕಿತ್ಸೆ ಕೊಡಿಸಿದ್ದಾರೆ. ನಾಲ್ಕು ದಿನಗಳ ಉಪಚಾರದ ಬಳಿಕ, ಒಂದು ಹೆಣ್ಣು ಕೋಗಿಲೆ ಚೇತರಿಸಿಕೊಂಡಿದ್ದು, ಒಂದು ಗಂಡು ಕೋಗಿಲೆ ಇನ್ನೂ ಪೂರ್ಣಗುಣಮುಖವಾಗಿಲ್ಲ.

ಗಾಯಗೊಂಡ ಹಕ್ಕಿಗೆ ಸ್ಥಳೀಯರು ಚಿಕಿತ್ಸೆ ನೀಡಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ದೂರು ಇದನ್ನು ಗಂಭೀರವಾಗಿ ಪರಿಗಣಿಸಿರುವ ನಗರದ ನೇಚರ್ ರಿಸರ್ಚ್ ಸೆಂಟರ್ ಸಂಘಟನೆ ಸದಸ್ಯರು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅರಣ್ಯ ರಕ್ಷಕರನ್ನು ಬೀಟ್‌ಗೆ ನಿಯೋಜಿಸುವಂತೆ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ನಗರದ ಸಿಬಿಟಿ, ಅಕ್ಕಿಪೇಟೆಯಲ್ಲಿ ಮಾರಾಟವಾಗುವ ಹತ್ತಾರು ನಮೂನೆ ಗುಲೇಲ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ಪ್ರಾಣಿಗಳಿಗೆ ಉರುಳು ಪಕ್ಷಿಗಳ ಮಾರಣಹೋಮ ಒಂದೆಡೆಯಾದರೆ, ಮತ್ತೊಂದು ಕಡೆ ಸೈಕಲ್, ಸ್ಕೂಟರ್​ಗಳ ಬ್ರೆಕ್ ಮತ್ತು ಕ್ಲಚ್ ಕೇಬಲ್ ಬಳಸಿ ಕರ್ನಾಟಕ ವಿಶ್ವವಿದ್ಯಾಲಯದ ಹಿಂಬದಿಯ ಶಾಲ್ಮಲಾ ಕೊಳ್ಳ, ಹನುಮಂತ ನಗರ, ಟೈವಾಕ್ ಕ್ವಾಟರ್ಸ್ ಹಿಂಬದಿ, ಮಂಡ್ಯಾಳ, ಮುಗದ, ಕಲಕೇರಿ, ಹುಣಶಿಕುಮಾರಿಯ ವಾಚ್ ಟವರ್ ಗುಡ್ಡದಲ್ಲಿ ಉರುಳುಗಳನ್ನು ಹಾಕಿಡಲಾಗುತ್ತಿದೆ. ಕಾಡು ಮೊಲ, ಮಿಕ, ಬುರ್ಲಿ, ಕಾಡುಕೋಳಿಗಳನ್ನು ಹಿಡಿಯಲು ಈ ರೀತಿ ಮಾಡಲಾಗುತ್ತಿದೆ.

ಇದೆಲ್ಲ ಅರಣ್ಯ ಇಲಾಖೆ ಸಿಬ್ಬಂದಿಗೆ ಗೊತ್ತಿಲ್ಲ ಅಂತಲ್ಲ. ಆದರೆ, ಅವರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ, ಅಷ್ಟೇ, ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಏನಂತಾರೆ? ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ಇಂಥ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ತಂಡವನ್ನು ರಚಿಸಲಾಗುವುದು. ಶೀಘ್ರದಲ್ಲೇ ಹಕ್ಕಿಗಳನ್ನು ಬೇಟೆಯಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಭೂಮಿಯ ಮೇಲೆ ಜೀವಿಸಲು ಮನುಷ್ಯನಿಗೆ ಎಷ್ಟು ಹಕ್ಕು ಇದೆಯೋ ಉಳಿದೆಲ್ಲ ಜೀವಿಗಳಿಗೂ ಅಷ್ಟೇ ಹಕ್ಕಿದೆ. ಆದರೆ ಸ್ವಾರ್ಥ ಹಾಗೂ ತಪ್ಪು ತಿಳುವಳಿಕೆಯಿಂದಾಗಿ ಪ್ರಾಣಿ, ಪಕ್ಷಿ ಸಂಕುಲದ ಜೀವಕ್ಕೆ ಈ ರೀತಿ ಹಾನಿ ಮಾಡುತ್ತ ನಾವು ಮಾನವರು ಬದುಕುತ್ತಿದ್ದೇವೆ. -ನರಸಿಂಹಮೂರ್ತಿ ಪ್ಯಾಟಿ

ಆಗಸದಲ್ಲಿ ಬಾನಾಡಿಗಳ ಚಿತ್ತಾರ.. ಚಿಲಿಪಿಲಿಗಳ ಕಲರವ, ಗದಗದಲ್ಲಿ ವಿದೇಶಿ ಪಕ್ಷಿಗಳ ಸ್ವಚ್ಚಂದ ವಿಹಾರ

Published On - 1:29 pm, Sun, 6 December 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ