ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭ; ವಿಧಾನಸಭೆ ಕಲಾಪ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಆಡಳಿತ, ವಿಪಕ್ಷ ಸದಸ್ಯರ ಆಸನ ಖಾಲಿ ಖಾಲಿಯಾಗಿವೆ. ಆಡಳಿತ ಪಕ್ಷದ ಸುಮಾರು 45, ವಿಪಕ್ಷದ ಸುಮಾರು 22, ಜೆಡಿಎಸ್ ಪಕ್ಷದ ಸುಮಾರು 13 ಶಾಸಕರಷ್ಟೇ ಹಾಜರಾಗಿದ್ದಾರೆ. ಮೊದಲ ದಿನದ ಕಲಾಪಕ್ಕೆ ಹೆಚ್ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಗೈರಾಗಿದ್ದಾರೆ.
ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಿದೆ. 10 ದಿನಗಳ ಕಾಲ ನಡೆಯುವ ಈ ಅಧಿವೇಶನಕ್ಕೆ ಬೇಕಾಗುವ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಶಾಸಕರು, ಸಚಿವರು ಬೆಳಗಾವಿಯ ಸುವರ್ಣಸೌಧಕ್ಕೆ ಆಗಮಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ನೂತನ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದಾರೆ. ಮೊದಲ ದಿನವೇ ಕಲಾಪಕ್ಕೆ ಬಹುತೇಕ ಶಾಸಕರು ಗೈರಾಗಿದ್ದಾರೆ. ಆಡಳಿತ, ವಿಪಕ್ಷ ಸದಸ್ಯರ ಆಸನ ಖಾಲಿ ಖಾಲಿಯಾಗಿವೆ. ಆಡಳಿತ ಪಕ್ಷದ ಸುಮಾರು 45, ವಿಪಕ್ಷದ ಸುಮಾರು 22, ಜೆಡಿಎಸ್ ಪಕ್ಷದ ಸುಮಾರು 13 ಶಾಸಕರಷ್ಟೇ ಹಾಜರಾಗಿದ್ದಾರೆ. ಮೊದಲ ದಿನದ ಕಲಾಪಕ್ಕೆ ಬಿಎಸ್ ಯಡಿಯೂರಪ್ಪ, ಹೆಚ್ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಗೈರಾಗಿದ್ದಾರೆ. ವಿಧಾನಸಭೆ ಕಲಾಪ ಆರಂಭವಾಗಿದ್ದು, ನೇರ ವೀಕ್ಷಣೆಗೆ ಲಿಂಕ್ ವಿಡಿಯೋ ಮೇಲೆ ಕ್ಲಿಕ್ ಮಾಡಿ.
Published on: Dec 13, 2021 12:02 PM
Latest Videos