ಮಹಿಳೆಯರೇ ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡ್ಕೊಳ್ಳಿ; ಇಂದು, ನಾಳೆ ಜಮೆಯಾಗಲಿದೆ ಗೃಹಲಕ್ಷ್ಮಿ ಹಣ

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ನೀಡಿದ್ದಾರೆ. ಬೆಳಗಾವಿಯಲ್ಲಿ ‘ಟಿವಿ9’ ಜೊತೆ ಮಾತನಾಡಿದ ಅವರು, ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಯಾವಾಗ ವರ್ಗಾವಣೆಯಾಗಲಿದೆ ಎಂದು ತಿಳಿಸಿದ್ದಾರೆ. ಆ ಮಾಹಿತಿ ಇಲ್ಲಿದೆ.

ಮಹಿಳೆಯರೇ ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡ್ಕೊಳ್ಳಿ; ಇಂದು, ನಾಳೆ ಜಮೆಯಾಗಲಿದೆ ಗೃಹಲಕ್ಷ್ಮಿ ಹಣ
ಗೃಹಲಕ್ಷ್ಮಿ ಯೋಜನೆ
Follow us
| Updated By: ಗಣಪತಿ ಶರ್ಮ

Updated on: Jun 29, 2024 | 10:14 AM

ಬೆಳಗಾವಿ, ಜೂನ್ 29: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ, ಪ್ರತಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆ ಬಗ್ಗೆ ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಯಾಗುತ್ತಿತ್ತು. ಯೋಜನೆಯ ಹಣ ಖಾತೆಗಳಿಗೆ ಬರುತ್ತಿಲ್ಲ ಎಂದು ಮಹಿಳೆಯರು ಅಲವತ್ತುಕೊಳ್ಳುತ್ತಿದ್ದರು. ಆದರೆ, ಇದೀಗ ಆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಹಣವನ್ನು ಮೇ 1ರಂದು ಕೊಟ್ಟಿದ್ದೆವು. ಜೂನ್ ತಿಂಗಳ ಹಣ ಈಗಾಗಲೇ ಟ್ರೆಷರಿಗೆ ಹಾಕಿದ್ದೇವೆ ಇಡೀ ರಾಜ್ಯದಲ್ಲಿ ಇವತ್ತು ಮತ್ತು ನಾಳೆ ನಾಳೆ ಕ್ರೆಡಿಟ್ ಆಗಲಿದೆ ಎಂದಿದ್ದಾರೆ.

ಯಾವುದೇ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ, ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಕೊಟ್ಟಾಗ ನಲವತ್ತು ಪರ್ಸಂಟ್ ಕಮಿಷನ್ ತೆಗೆದುಕೊಂಡು ಮನೆಯಲ್ಲಿ ಕುಳಿತರು ಎಂದು ಟೀಕಿಸಿದರು.

ಎರಡು ಸಾವಿರ ರೂಪಾಯಿ ಕೊಟ್ಟು ನಾಲ್ಕು ಸಾವಿರ ರೂಪಾಯಿ ಕಸಿದುಕೊಳ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿ, ಬಿಜೆಪಿಯವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಪೆಟ್ರೋಲ್ ದರ ಏರಿಕೆ ಆಗಿದೆ ಎಂದು ಹೇಳಿದ್ದಾರೆ. ಇದೇ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಪೆಟ್ರೋಲ್​ ದರವನ್ನು ನೂರು ರೂಪಾಯಿ ತಗೊಂಡು ಹೋಗಿದ್ದರು. ನಲವತ್ತು ರೂಪಾಯಿ ಪೆಟ್ರೋಲ್ ದರ ಏರಿಸಿದ್ದ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಹೋಗುತ್ತದೆ ಎಂದು ಟೀಕಿಸಿದರು.

ಎಲ್ಲ ಬಡವರಿಗೆ ಒಂದು ವರ್ಷಕ್ಕೆ ಅರವತ್ತು ಸಾವಿರ ಕೋಟಿ ರೂಪಾಯಿ ಕೊಡುತ್ತಿದ್ದೇವೆ. ಮೂರು ರೂಪಾಯಿ ಹೆಚ್ಚಾದರೆ ಇಷ್ಟು ಮಾತನಾಡುತ್ತಿದ್ದಾರೆ, ನಾಚಿಕೆ ಆಗಲ್ವಾ ಅವರಿಗೆ. 400 ರೂಪಾಯಿ ಇದ್ದ ಸಿಲಿಂಡರ್ 1,100 ರೂಪಾಯಿ ಆದಾಗ ಮಾತಾಡಲಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಕರ್ನಾಟಕದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಗೃಹ ಸಚಿವ ಅಮಿತ್‌ ಶಾಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಮೇ ತಿಂಗಳಲ್ಲಿ ಎಲ್ಲರ ಅಕೌಂಟ್‌ಗೆ ಗೃಹಲಕ್ಷ್ಮಿ ಹಣ ಹೋಗಿದೆ. ಕಾಂಗ್ರೆಸ್ ಪಕ್ಷದ ಸರ್ಕಾರ ಐದು ವರ್ಷ ಕಾರ್ಯಭಾರ ಮಾಡುತ್ತದೆ. ಐದು ವರ್ಷ ಕೂಡ ಗೃಹಲಕ್ಷ್ಮಿ ಮನೆ ಮನೆ ಬಾಗಿಲಿಗೆ ಹೋಗುತ್ತಾಳೆ. ಗೃಹಲಕ್ಷ್ಮಿ ಮುಂದುವರೆಯುತ್ತದೆ. ಯಾರು ಕೂಡ ಆತಂಕಕ್ಕೊಳಗಾಗುವುದು ಬೇಡ. ಕೊಟ್ಟ ಭಾಷೆಯಂತೆ ಪ್ರತಿ ತಿಂಗಳು ತಪ್ಪದೆ ಹಣ ಹಾಕುತ್ತೇವೆ. ಯಾರೂ ಎನೇ ಮಾತನಾಡಿದರೂ, ಬಿಜೆಪಿಯವರು ಹೇಳಿದರೂ ಕಿವಿಗೋಡಬೇಡಿ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್