ಆರೋಪಿಗಳ ಬಳಿ ಹಣ ಪಡೆದು ಸಂಧಾನ ಮಾಡಿಕೊಂಡಿರುವುದಾಗಿ ಪಿಎಸ್​ಐ ಪರಶುರಾಮ ಕುಟುಂಬಸ್ಥರ ವಿರುದ್ಧ ಆರೋಪ

ಯಾದಗಿರಿ ಪಿಎಸ್​ಐ ಪರಶುರಾಮ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿಯಿಂದ ತನಿಖೆ ಚುರುಕುಗೊಂಡಿದೆ. ಆದರೆ, ಪರಶುರಾಮ ಅವರ ಸಾವಿನ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳಿಂದ ಹಣ ಪಡೆದು ಪರಶುರಾಮ ಅವರ ಮಾವ ಸಂಧಾನ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆರೋಪಿಗಳ ಬಳಿ ಹಣ ಪಡೆದು ಸಂಧಾನ ಮಾಡಿಕೊಂಡಿರುವುದಾಗಿ ಪಿಎಸ್​ಐ ಪರಶುರಾಮ ಕುಟುಂಬಸ್ಥರ ವಿರುದ್ಧ ಆರೋಪ
ಪಿಎಸ್‌ಐ ಪರಶುರಾಮ
Follow us
| Updated By: ಸುಷ್ಮಾ ಚಕ್ರೆ

Updated on: Sep 13, 2024 | 7:34 PM

ಯಾದಗಿರಿ: ಯಾದಗಿರಿ ಪೊಲೀಸ್ ಠಾಣೆಯ ಪಿಎಸ್‌ಐ ಪರಶುರಾಮ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಳಿ ಹಣ ಪಡೆದು ಸಂಧಾನ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಮೃತ ಪರಶುರಾಮ ಅವರ ಮಾವ ಹಾಗೂ ಕುಟುಂಬಸ್ಥರ ವಿರುದ್ಧ ಈ ಆರೋಪ ಕೇಳಿಬಂದಿದೆ. ಆದರೆ, ನಾವು ಯಾರ ಬಳಿಯೂ ಹಣ ಪಡೆದಿಲ್ಲ ಎಂದು ಪರಶುರಾಮ ಅವರ ಮಾವ ವೆಂಕಟಸ್ವಾಮಿ ಯಾದಗಿರಿ ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ನಾವು ಅಳಿಯನನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಬಂದಿಲ್ಲ. ಆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಇನ್ನೂ ನಮಗೆ ಕೊಟ್ಟಿಲ್ಲ. ಈಗಾಗಲೇ ಈ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಸಿಐಡಿ ಅಧಿಕಾರಿಗಳು ಸರಿಯಾಗಿಯೇ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಮ್ಮ ಮನೆಗೆ ಬಂದು ನಮ್ಮ ಮಗಳಿಂದ ಮಾಹಿತಿ ಪಡೆದಿದ್ದಾರೆ. ನಮ್ಮ ಹೋರಾಟಕ್ಕೆ ಸಾಕಷ್ಟು ಸಂಘಟನೆಗಳು ಸಹಕಾರ ನೀಡಿದ್ದವು. ಹೋರಾಟಗಾರರು ಸಹ ಯಾರಿಂದಲೂ ಹಣ ಪಡೆದಿಲ್ಲ ಎಂದು ವೆಂಕಟಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಪರಶುರಾಮ ನಿಗೂಢ ಸಾವು ಕೇಸ್: ಯಾದಗಿರಿಗೆ ಎಂಟ್ರಿಕೊಟ್ಟ ಸಿಐಡಿ ತಂಡ, ಇಂಚಿಂಚು ಮಾಹಿತಿ ಕಲೆ

ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಮಗ ಪಂಪಣ್ಣ ಗೌಡ ಕಾರಣ ಎಂದು ಪರಶುರಾಮ ಅವರ ಪತ್ನಿ ಕೇಸ್ ದಾಖಲಿಸಿದ್ದರು. ಈ ಸಾವಿನ ಕೇಸ್ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಪರಶುರಾಮ ಅವರ ಸಾವಿಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಆರೋಪ ವಿಚಾರವಾಗಿ ಆರೋಪಿಗಳ ಬಳಿ ದುಡ್ಡು ಪಡೆದು ಸಂದಾನ ಮಾಡಿಕೊಂಡಿರುವ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಪಿಎಸ್​ಐ ಪರಶುರಾಮ ಸಾವು ಕೇಸ್​: ರಾಜ್ಯ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ

ಮೃತ ಪರಶುರಾಮ ಅವರ ಮಾವ ಹಾಗೂ ಕುಟುಂಬಸ್ಥರು ಸಂಧಾನ ಮಾಡಿಕೊಂಡಿರುವ ಚರ್ಚೆ ನಡೆಯುತ್ತಿದ್ದು, ಯಾದಗಿರಿ ನಗರದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಮೃತ ಪರಶುರಾಮ ಮಾವ ವೆಂಕಟಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಏನಿದು ಪ್ರಕರಣ?:

ಯಾದಗಿರಿ ಪಿಎಸ್‌ಐ ಪರಶುರಾಮ ಅವರ ಸಾವು ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಪಿಎಸ್‌ಐ ವರ್ಗಾವಣೆ ವಿಚಾರವಾಗಿ ಶಾಸಕ ಚೆನ್ನಾರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ವರ್ಗಾವಣೆಗಾಗಿ ಭಾರೀ ಲಂಚದ ಬೇಡಿಕೆ ಇಡಲಾಗಿತ್ತು ಎಂದು ಪರಶುರಾಮ ಅವರ ಕುಟುಂಬಸ್ಥರು ಆರೋಪಿಸಿದ್ದರು. ಹೀಗಾಗಿ, ಈ ನಿಗೂಢ ಸಾವಿನ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲುಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ