ಪೋಕ್ಸೋ ಪ್ರಕರಣ: ಮಲ್ಲಿಕಾರ್ಜು ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್

ಕಲ್ಯಾಣ ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಹಾಗೂ ಪೋಕ್ಸೋ (POCSO) ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯದಿಂದ ಭಾರಿ ಹಿನ್ನಡೆಯಾಗಿದೆ. ಜಾಮೀನು ಸಿಗುವ ಭರವಸೆಯಲ್ಲಿದ್ದ ಮುತ್ಯಾ ಮತ್ತು ಆತನ ಭಕ್ತರಿಗೆ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ನಿರಾಕರಿಸುವ ಮೂಲಕ ಶಾಕ್ ನೀಡಿದೆ. ಹಾಗಾದ್ರೆ, ಮುತ್ಯಾ ಜೈಲುಪಾಲಾಗುತ್ತಾರಾ?.

ಪೋಕ್ಸೋ ಪ್ರಕರಣ: ಮಲ್ಲಿಕಾರ್ಜು ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್
Mallikarjun Mutya
Edited By:

Updated on: Mar 09, 2026 | 5:10 PM

ಯಾದಗಿರಿ (ಮಾರ್ಚ್ 09): ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಮುತ್ಯಾ (Mallikarjun Mutya) ನಿರೀಕ್ಷಣಾ ಜಾಮೀನು ಅರ್ಜಿ (Bail Plea)  ವಜಾಗೊಂಡಿದೆ. ತಮ್ಮ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ್ದ ಯಾದಗಿರಿ (Yadagir ) ಜಿಲ್ಲಾ ಪ್ರಧಾನ, ವಿಶೇಷ ಸತ್ರ ನ್ಯಾಯಾಲಯದ   ನ್ಯಾಯಾಧೀಶರಾದ ಮರಳುಸಿದ್ದರಾಧ್ಯ ಅವರು ಇಂದು (ಮಾರ್ಚ್ 09) ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ವಿಚಾರಣೆಗೆ ಹಾಜರಾಗುವ ಮೊದಲೇ ಅಜ್ಞಾತ ಸ್ಥಳದಿಂದಲೇ  ಮಲ್ಲಿಕಾರ್ಜುನ ಮುತ್ಯಾ, ತಮ್ಮ ವಿರುದ್ಧದ ಫೋಕ್ಸೋ ಪ್ರಕರಣ ರದ್ದು ಕೋರಿ ಕಲಬುರಗಿ ಹೈಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಅದೇನಾಯ್ತೋ ಏನೋ ಏಕಾಏಕಿ ಕೋರ್ಟ್​​ನಿಂದ ಅರ್ಜಿ ವಾಪಸ್ ಪಡೆದುಕೊಂಡು ಬಳಿಕ ನಿರೀಕ್ಷಣಾ ಜಾಮೀನು ಕೋರಿ ಯಾದಗಿರಿ ಜಿಲ್ಲಾ ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಇದಕ್ಕೆ ಸರ್ಕಾರಿ ವಕೀಲರು ಇದಕ್ಕೆ ಆಕ್ಷೇಪ ಸಲ್ಲಿಸಿದ್ದರು. ಇದರಿಂದ ಶುಕ್ರವಾರ ಕೋರ್ಟ್​,  ಎರಡು ಕಡೆ ವಾದ ಪ್ರತಿವಾದ ಆಲಿಸಿದ್ದು, ​ಜಾಮೀನು ಆದೇಶವನ್ನು ಇಂದಿಗೆ (ಮಾರ್ಚ್ 09) ಕಾಯ್ದಿರಿಸಿತ್ತು. ಇದೀಗ ಕೋರ್ಟ್ ಮುತ್ಯಾನಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದ ಸ್ವಯಂ ಘೋಷಿತ ದೇವಮಾನವನಿಗೆ ಸಂಕಷ್ಟ ಎದುರಾಗಿದ್ದು, ಇದೀಗ ಜಾಮೀನಿಗಾಗಿ ಹೈಕೋರ್ಟ್​​ ಮೆಟ್ಟಿಲೇರಬೇಕಿದೆ.

ಇದನ್ನೂ ನೋಡಿ: ಫೋಕ್ಸೋ ಕೇಸ್: ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು

ಫೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ ಮುತ್ಯಾ, ಮೂರ್ನಾಲ್ಕು ದಿನದ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಶಹಪೂರ ಸಿಪಿಐ ಶರಣಗೌಡ ನಾಮಣ್ಣವರ ಅವರು ತನಿಖೆಯನ್ನು ಚುರುಕುಗೊಳಿಸಿದ್ದು, ಈಗಾಗಲೇ ಮಲ್ಲಿಕಾರ್ಜುನ ಮುತ್ಯಾನನ್ನು ಮೊದಲ ಹಂತದ ವಿಚಾರಣೆ ಅವರ ನಾಲ್ಕು ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಈ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಡಿಜಿಟಲ್ ಸಾಕ್ಷ್ಯಗಳು ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೊಬೈಲ್‌ನಲ್ಲಿರುವ ಸಂದೇಶಗಳು, ಕರೆ ದಾಖಲೆಗಳು ಅಥವಾ ವಿಡಿಯೋಗಳ ಬಗ್ಗೆ ತನಿಖಾ ತಂಡವು ತಾಂತ್ರಿಕ ಪರಿಶೀಲನೆ ನಡೆಸುತ್ತಿದೆ.

ಏನಿದು ಪ್ರಕರಣ?

ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ರಾಜ್ಯಾದ್ಯಂತ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಯಾದಗಿರಿ ಜಿಲ್ಲಾಧಿಕಾರಿ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಡಿಸಿ ಸೂಚನೆ ಮೇರೆಗೆ  ಫೆಬ್ರವರಿ 25ರಂದು ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮುತ್ಯಾ ನಾಪತ್ತೆಯಾಗಿದ್ದ. ಇನ್ನೊಂದೆಡೆ ಅವರ ಭಕ್ತರು ಹಾಗೂ ಕೋಲಿ ಸಮಾಜ ಪ್ರತಿಭಟನೆ ನಡೆಸಿದ್ದು, ಮುತ್ಯಾ ವಿರುದ್ಧದ ಫೋಕ್ಸೋ ಪ್ರಕರಣ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು.

ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:50 pm, Mon, 9 March 26

Follow Us