PSI ಹುದ್ದೆ ಕೊಡಿಸುವುದಾಗಿ 60 ಲಕ್ಷ ವಂಚನೆ: ಬೆಂಗಳೂರು ಮೂಲದ 8 ಜನರ ವಿರುದ್ಧ FIR ದಾಖಲು

ಯಾದಗಿರಿಯ ಕೆಂಭಾವಿಯಲ್ಲಿ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ 60 ಲಕ್ಷ ರೂ. ವಂಚನೆ ಆರೋಪದಡಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪರಿಚಿತ ವ್ಯಕ್ತಿಯೊಬ್ಬ ಪಿಎಸ್‌ಐ ಹುದ್ದೆ ಕೊಡಿಸುವ ಆಮಿಷವೊಡ್ಡಿ ಹಂತ ಹಂತವಾಗಿ 60 ಲಕ್ಷ ರೂ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಸದ್ಯ ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PSI ಹುದ್ದೆ ಕೊಡಿಸುವುದಾಗಿ 60 ಲಕ್ಷ ವಂಚನೆ: ಬೆಂಗಳೂರು ಮೂಲದ 8 ಜನರ ವಿರುದ್ಧ FIR ದಾಖಲು
ಕೆಂಭಾವಿ ಪೊಲೀಸ್​ ಠಾಣೆ
Image Credit source: tv9 kannada
Edited By:

Updated on: Sep 21, 2026 | 8:22 PM

ಯಾದಗಿರಿ, ಸೆಪ್ಟೆಂಬರ್​ 21: ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ 60 ಲಕ್ಷ ರೂ ಪಡೆದು ವಂಚನೆ ಆರೋಪ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳ್ಳಳ್ಳಿ  ಗ್ರಾಮದ ದೇವೇಂದ್ರ ಎಂಬುವವರ ದೂರು ಹಿನ್ನೆಲೆ ಎಂಟು ಜನರ ವಿರುದ್ಧ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಡೆದಿದ್ದೇನು?

ಸುರಪುರ ತಾಲೂಕಿನ ತಳ್ಳಳ್ಳಿ (ಬಿ) ಗ್ರಾಮದ ದೇವೇಂದ್ರ ಎಂಬುವವರ ಅಣ್ಣನ ಪತ್ನಿ ಪಿಎಸ್‌ಐ ಹುದ್ದೆಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಆರೋಪಿ ಗಿರೀಶ್ ಪರಿಚಯವಾಗಿದ್ದ. ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿ ಮೊದಲು 1 ಕೋಟಿ ರೂ ಬೇಡಿಕೆ ಇಟ್ಟಿದ್ದ. ಅಲ್ಲದೆ ದೀಪಕ್, ಶಶಾಂಕ್‌ಗೌಡ, ಉತ್ತೇಜ, ಶ್ರೇಯಸ್‌ಗೌಡ, ಆನಂದ್​​ ಎನ್ನುವವರ ಮೊಬೈಲ್​​ ನಂಬರ್​​ ನೀಡಿದ್ದ.

ಇದನ್ನೂ ಓದಿ: ಕೆಪಿಎಸ್​ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಎಸ್​ಐಟಿ ರಚಿಸಿ ಹೈಕೋರ್ಟ್​​ನಿಂದ ಮಹತ್ವದ ಆದೇಶ

ಇದನ್ನು ನಂಬಿದ ದೇವೇಂದ್ರ ಅವರು 2026ರ ಏಪ್ರಿಲ್ 7 ರಂದು ಅರಸಿನಕುಂಟೆಯ ರೂಮ್​​ ಒಂದರಲ್ಲಿ ಗಿರೀಶ್ ಹಾಗೂ ದೀಪಕ್​​ಗೆ 20 ಲಕ್ಷ ರೂ ನಗದು ನೀಡಿದ್ದಾರೆ. ನಂತರ ಲಕ್ಷ್ಮೀ ವೆಂಕಟೇಶ್ವರ ಎಂಟರ್‌ಪ್ರೈಸಸ್, ಉತ್ತೇಜ ಹಾಗೂ ಎಂಸಿ ರಂಗನಾಥ್ ಅವರ ಖಾತೆಗಳಿಗೆ ಒಟ್ಟು 40 ಲಕ್ಷ ರೂ ಹಣ ವರ್ಗಾವಣೆ ಮಾಡಿದ್ದಾರೆ. ಹೀಗೆ ಹಂತ ಹಂತವಾಗಿ ಒಟ್ಟು 60 ಲಕ್ಷ ರೂ ಹಣ ಎಗರಿಸಿದ್ದಾರೆ.

ಸಾಲ ಸೋಲ ಮಾಡಿ ಹಣ ನೀಡಿದ ವ್ಯಕ್ತಿ 

ಇತ್ತ ದೇವೇಂದ್ರ ಅವರು ಹೋಮ್ ಲೋನ್, ಹೊಲ ಮಾರಾಟ ಹಾಗೂ ಸಂಬಂಧಿಕರಿಂದ ಸಾಲ ಪಡೆದು ಈ ಲಕ್ಷಾಂತರ ರೂ ಹಣ ಹೊಂದಿಸಿದ್ದರು. ಆದರೆ, ಪ್ರಸ್ತುತ ಪಿಎಸ್‌ಐ ನೇಮಕಾತಿ ನಡೆಯದ ಹಿನ್ನೆಲೆ ಹಣವನ್ನು ವಾಪಸ್ ಕೇಳಿದಾಗ ಆತ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಹಾಗಾಗಿ ಹಣ ಹಾಗೂ ಹುದ್ದೆ ಎರಡನ್ನೂ ನೀಡದೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೆಪಿಎಸ್​​ಸಿ ಕರ್ಮಕಾಂಡದ ಮತ್ತಷ್ಟು ಸ್ಫೋಟಕ ಸಂಗತಿ ಬಯಲು: ಅಕ್ರಮದ ಹಣದಲ್ಲಿ ಗೆಳತಿಯೊಂದಿಗೆ ಮೋಜು ಮಸ್ತಿ

ಈ ಸಂಬಂಧ ಕೆಂಭಾವಿ ಠಾಣೆಯ ಪೊಲೀಸರು ಗಿರೀಶ್, ದೀಪಕ್, ಶಶಾಂಕ್‌ಗೌಡ, ಉತ್ತೇಜ, ಶ್ರೇಯಸ್‌ಗೌಡ, ಆನಂದ್, ಎಂ.ಸಿ. ರಂಗನಾಥ್ ಮತ್ತು ಸತ್ಯ ಅಲಿಯಾಸ್ ಸತೀಶ್ ವಿರುದ್ಧ ಬಿಎನ್‌ಎಸ್ ಕಲಂ 316(2), 318(2), 318(4) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:20 pm, Mon, 21 September 26

Loading...
Unable to load recommendations.
Follow Us