AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಎಸ್​​ಸಿ ಕರ್ಮಕಾಂಡದ ಮತ್ತಷ್ಟು ಸ್ಫೋಟಕ ಸಂಗತಿ ಬಯಲು: ಅಕ್ರಮದ ಹಣದಲ್ಲಿ ಗೆಳತಿಯೊಂದಿಗೆ ಮೋಜು ಮಸ್ತಿ

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಒಂದೆಡೆ ಸಿಐಡಿ ತನಿಖೆ ನಡೆಸಿದ್ದರೆ, ಮತ್ತೊಂದೆಡೆ ಇಡಿ ಸಹ ಶೋಧ ನಡೆಸಿದ್ದು, ಈ ವೇಳೆ ಮತ್ತಷ್ಟು ಕರ್ಮಕಾಂಡ ಬಯಲಿಗೆ ಬಂದಿದೆ. ಹೌದು...ಕೆಪಿಎಸ್​​ಸಿ ಅಕ್ರಮ ಹಣದಿಂದ ಬಸವರಾಜ್ ಕನ್ನಾಳೆ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ ಕುಮಾರ್ ಮೋಜು ಮಸ್ತಿ ಮಾಡಿರುವುದು ಬೆಳಕಿಗೆ ಬಂದಿದೆ.

ಕೆಪಿಎಸ್​​ಸಿ ಕರ್ಮಕಾಂಡದ ಮತ್ತಷ್ಟು ಸ್ಫೋಟಕ ಸಂಗತಿ ಬಯಲು: ಅಕ್ರಮದ ಹಣದಲ್ಲಿ ಗೆಳತಿಯೊಂದಿಗೆ ಮೋಜು ಮಸ್ತಿ
Gyanendra Kumar And Basavaraj Kannale
ರಮೇಶ್ ಬಿ. ಜವಳಗೇರಾ
|

Updated on:Sep 20, 2026 | 10:34 AM

Share

ಬೆಂಗಳೂರು, (ಸೆಪ್ಟೆಂಬರ್ 20): ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಅಕ್ರಮದ ದುಡ್ಡಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ ಕುಮಾರ್ ಮೋಜು-ಮಸ್ತಿ ಬಯಲಾಗಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ, ಜ್ಞಾನೇಂದ್ ಕುಮಾರ್ ಮೆಚ್ಚಿಸಲು ಖರ್ಚುಗಳಿಗೆ ಸುಮಾರು 11 ಲಕ್ಷ ವೆಚ್ಚ ಭರಿಸಿದ್ದಾನೆ. ಈ ವರ್ಷ ಜ್ಞಾನೇಂದ್ ಕುಮಾರ್ಮ ತ್ತು ಗೆಳತಿ ಸುತ್ತಾಡಲು ಬಸವರಾಜ್ ಕನ್ನಾಳೆ 23 ಏರ್ ಟಿಕೆಟ್ ಕೊಡಿಸಿದ್ದು, ಜ್ಞಾನೇಂದ್ ಕುಮಾರ್ ಗೆಳತಿ ಜೊತೆಗೆ ಉತ್ತರ ಪ್ರದೇಶ ಹಾಗೂ ವಿವಿಧ ಕಡೆ ಸುತ್ತಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಭೀಮಾ ಜ್ಯೂವೆಲ್ಲರಿ ಗೆ ಹಣ ವರ್ಗಾಯಿಸಲು ಬಸವರಾಜ್ ಕನ್ನಾಳೆ ಸ್ನೇಹಿತರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನ ತೆರೆರುವುದು ಗೊತ್ತಾಗಿದೆ. ಎಲ್ಲಾ ಮಾಹಿತಿಯನ್ನು‌ ಎಸ್ಪಿಪಿ  ಕೋರ್ಟ್ ಗೆ ನೀಡಿದೆ. ಕನ್ನಾಳೆ ಭಗವತಿ ಎಂಟರ್ ಪ್ರೈಸಸ್ ಮಾಲೀಕನಾಗಿದ್ದು, ತನ್ನ ಬೀದರ್ ನಲ್ಲಿರುವ ಭಗವತಿ ಎಂಟರ್ ಪ್ರೈಸಸ್ ಮೂಲ ಟಿಕೆಟ್ ಖರೀದಿಸಿದ್ದ. ಇನ್ನೊಂದೆಡೆ ಜ್ಞಾನೇಂದ್ ಕುಮಾರ್, ಮಾರ್ಚ್ ಮತ್ತು ಜೂನ್ ನಲ್ಲಿ ಗೆಳತಿಗಾಗಿ 52 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಡೈಮಂಡ್‌ ಖರೀದಿ ಮಾಡಿದ್ದಾರೆ. 1.90 ಲಕ್ಷ ನಗದು ಹಾಗೂ ಸ್ನೇಹಿತೆಯ ಕ್ರೆಡಿಟ್ ಕಾರ್ಡ್ ಮೂಲಕ 1 ಲಕ್ಷ ಸೇರಿದಂತೆ ಒಟ್ಟು 2.90 ಲಕ್ಷ ಪಾವತಿಸಲಾಗಿದೆ. ಉಳಿದ ಹಣವನ್ನ ಬೀದರ್ ನ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ  ಸಂಘ ನಿಯಮಿತದ ಕೋ ಆಪರೇಟಿವ್ ಬ್ಯಾಂಕ್ ಮೂಲಕ ಪಾವತಿ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆಕ್ಷೇಪಣೆ ಅರ್ಜಿಯಲ್ಲಿ ತಿಳಿಸಲಾಗಿದೆ.  ಚಿನ್ನ ಖರೀದಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ.

ಇದನ್ನೂ ಓದಿ: ಕೆಪಿಎಸ್​​ಸಿ ಹಗರಣ: ಸಿಐಡಿ ಆಯ್ತು ಈಗ ಇಡಿ ಇಕ್ಕಳದಲ್ಲಿ ಸಿಲುಕಿದ ಐಎಎಸ್ ಅಧಿಕಾರಿ

ಪಶುವೈದ್ಯಾಧಿಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ವಾಮಾ ಮಾರ್ಗದಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಇದಕ್ಕಾಗಿ ನಿರ್ದಿಷ್ಟ ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಮೂಲಕ ಹಣ ವರ್ಗಾಯಿಸುವಂತೆ ಕನ್ನಾಳೆ ಸೂಚಿಸಿದ್ದ. ಕನ್ನಾಳೆ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ 11 ಮಂದಿ ಆಕಾಂಕ್ಷಿ ಅಭ್ಯರ್ಥಿಗಳಿಂದ ಹಣ ಪಾವತಿ ಸುಮಾರು 60 ರಿಂದ 70 ಲಕ್ಷ ರೂ.ಗಳನ್ನು ಪಾವತಿಸಿರುವ ವಿಷಯವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕನ್ನಾಳೆಯ ತವರು ಜಿಲ್ಲೆ ಬೀದರ್‌ನಲ್ಲಿ  2019ರಲ್ಲಿ ಜ್ಞಾನೇಂದ್ರ ಸಿಇಓ ಆಗಿದ್ದಾಗ ಪರಿಚಯವಾಗಿದ್ದು, ಐಎಎಸ್ ಅಧಿಕಾರಿ ಪರಿಚಯ ಬಳಿಕ ವಾಣಿಜ್ಯ ಹಿತಾಸಕ್ತಿಗಳನ್ನು ಬೆಳೆಸಿಕೊಂಡಿದ್ದ. ಬಳಿಕ ಜ್ಞಾನೇಂದ್ರ 2024ರ ಮಾರ್ಚ್ ನಿಂದ 2026ರ ಮಾರ್ಚ್ ವರೆಗೆ  ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ವೇಳೆ ಕನ್ನಾಳೆ ಜೊತೆಗೆ ಅವ್ಯವಹಾರಗಳು ಮತ್ತಷ್ಟು ಹೆಚ್ಚಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:34 am, Sun, 20 September 26

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್