AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳ ಆತಂಕವನ್ನು ರಾಜಕೀಯ ದಾಳ ಮಾಡಿಕೊಳ್ಳಬೇಡಿ: ರಾಹುಲ್ ಗಾಂಧಿಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಖಡಕ್ ತಿರುಗೇಟು

ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಹುಲ್ ಗಾಂಧಿ ಅವರ ವಿದ್ಯಾರ್ಥಿ ಕುರಿತ ಹೇಳಿಕೆಗೆ ತೀವ್ರ ತಿರುಗೇಟು ನೀಡಿದ್ದಾರೆ. ವಿದ್ಯಾರ್ಥಿಗಳನ್ನು ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುವ ಬದಲು, ರಚನಾತ್ಮಕ ಪರಿಹಾರಗಳ ಬಗ್ಗೆ ಮಾತನಾಡಲು ಮಾಜಿ ಸಚಿವರು ಆಗ್ರಹಿಸಿದ್ದಾರೆ. PM-Vidyalaxmi, PM-USHA ಯೋಜನೆಗಳು, ಪರೀಕ್ಷಾ ಅಕ್ರಮ ತಡೆ ಕಾಯ್ದೆ ಮೂಲಕ ವಿದ್ಯಾರ್ಥಿಗಳ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳ ಆತಂಕವನ್ನು ರಾಜಕೀಯ ದಾಳ ಮಾಡಿಕೊಳ್ಳಬೇಡಿ: ರಾಹುಲ್ ಗಾಂಧಿಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಖಡಕ್ ತಿರುಗೇಟು
ಧರ್ಮೇಂದ್ರ ಪ್ರಧಾನ್ Image Credit source: PTI
ನಯನಾ ರಾಜೀವ್
|

Updated on: Sep 20, 2026 | 10:13 AM

Share

ನವದೆಹಲಿ, ಸೆಪ್ಟೆಂಬರ್ 20: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ರಾಹುಲ್ ಗಾಂಧಿ ಅವರು ಕೈಯಲ್ಲಿ ಮೈಕ್ ಹಿಡಿದುಕೊಂಡು ವಿದ್ಯಾರ್ಥಿಗಳನ್ನು ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುವ ಕೃತಕ ಕಥಾನಕವನ್ನು ಸೃಷ್ಟಿಸುತ್ತಿದ್ದಾರೆ. ಸಂಕೀರ್ಣವಾದ ಶೈಕ್ಷಣಿಕ ಪರಿಸರವನ್ನು ಕೇವಲ ರಾಜಕೀಯ ಘೋಷಣೆಗಳಿಗೆ ಇಳಿಸುವ ಬದಲು ರಚನಾತ್ಮಕ ಪರಿಹಾರಗಳ ಬಗ್ಗೆ ಮಾತನಾಡಲಿ” ಎಂದು ಸಚಿವರು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಸರಣಿ ಅಂಕಿಅಂಶಗಳೊಂದಿಗೆ ಪ್ರತ್ಯುತ್ತರ ನೀಡಿದ್ದಾರೆ.

ರಾಜಕೀಯ ನಾಟಕವಲ್ಲ, ಉತ್ತರ ಬೇಕು: ದೇಶದ ವಿದ್ಯಾರ್ಥಿಗಳಿಗೆ ರಾಜಕೀಯ ಲಾಭದ ನಾಟಕಗಳ ಅಗತ್ಯವಿಲ್ಲ, ಅವರಿಗೆ ನಿಖರವಾದ ಉತ್ತರಗಳು ಮತ್ತು ಕ್ರಿಯಾಶೀಲ ಸಂಸ್ಥೆಗಳು ಬೇಕು ಎಂದು ಪ್ರಧಾನ್ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ 2014-15ರಲ್ಲಿ ಶೇಕಡಾ 23.7 ರಷ್ಟಿದ್ದು, ಅದು 2023-24ರ ವೇಳೆಗೆ ಶೇಕಡಾ 30 ಕ್ಕೆ ಏರಿಕೆಯಾಗಿದೆ. ಕಳೆದ ಒಂದು ದಶಕದಲ್ಲಿ ಕ್ಯೂಎಸ್ (QS) ವಿಶ್ವ ಶ್ರೇಯಾಂಕದಲ್ಲೂ ಭಾರತೀಯ ಶಿಕ್ಷಣ ಸಂಸ್ಥೆಗಳ ಸ್ಥಾನ ಗಮನಾರ್ಹವಾಗಿ ಸುಧಾರಿಸಿದೆ.

ಪಿಎಂ-ವಿದ್ಯಾಲಕ್ಷ್ಮಿ (PM-Vidyalaxmi): ಅರ್ಹ ವಿದ್ಯಾರ್ಥಿಗಳಿಗೆ ಯಾವುದೇ ಶ್ಯೂರಿಟಿ ಇಲ್ಲದೆ ಶೈಕ್ಷಣಿಕ ಸಾಲ ಮತ್ತು ಬಡ್ಡಿ ಸಹಾಯಧನ ಒದಗಿಸಲಾಗುತ್ತಿದೆ.

ಪಿಎಂ-ಉಷಾ (PM-USHA): ರಾಜ್ಯ ಮಟ್ಟದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಮೂಲಸೌಕರ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಈ ಯೋಜನೆಯಡಿ ಭಾರಿ ಅನುದಾನ ನೀಡಲಾಗುತ್ತಿದೆ.

ಮತ್ತಷ್ಟು ಓದಿ: ಛತ್ರೋನ್ ಕಿ ಗೂಂಜ್: ರಾಹುಲ್ ಗಾಂಧಿಯ ಸುಳ್ಳಿನ ಸರಮಾಲೆಯನ್ನು ಬಿಚ್ಚಿಟ್ಟ ಬಿಜೆಪಿಯ ಜೂಟ್ ಕಿ ಗೂಂಜ್

ಪರೀಕ್ಷಾ ಅಕ್ರಮ ತಡೆ ಕಾಯ್ದೆ ಹಾಗೂ ಸುಧಾರಣೆ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಸರ್ಕಾರ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಿಗೆ (CBT) ಒತ್ತು ನೀಡುತ್ತಿದೆ. 2024 ರಲ್ಲಿ ಜಾರಿಗೆ ತರಲಾದ ಪರೀಕ್ಷಾ ಅಕ್ರಮ ತಡೆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ.

ಪೋಸ್ಟ್​

ಇಂದೋರ್‌ನ ‘ಛಾತ್ರೋಂ ಕಿ ಗೂಂಜ್’ ಸಮಾವೇಶ: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಿ, ನೀಟ್ (NEET), ಯುಜಿಸಿ-ನೆಟ್ ಸೇರಿದಂತೆ ಹಲವು ಪರೀಕ್ಷಾ ಅಕ್ರಮಗಳನ್ನು ಪ್ರಸ್ತಾಪಿಸಿ ಇಡೀ ವ್ಯವಸ್ಥೆಯನ್ನು ಕೆಲವೇ ಜನರ ಹಿತಾಸಕ್ತಿಗೆ ಒತ್ತೆ ಇಡಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024: ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ತಂದಿರುವ ಈ ಕಾಯ್ದೆಯಡಿ, ಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ವಂಚನೆಯಲ್ಲಿ ಭಾಗಿಯಾಗುವ ಸಂಘಟಿತ ಅಪರಾಧಿಗಳಿಗೆ 1 ಕೋಟಿ ರೂ.ವರೆಗೆ ದಂಡ ಹಾಗೂ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳು ಆಕ್ರೋಶಗೊಳ್ಳುವಂತೆ ಪ್ರಚೋದಿಸಲು ರಾಜಕಾರಣಿಯೊಬ್ಬರ ಅಗತ್ಯವಿಲ್ಲ, ಅವರಿಗೆ ಸದಾ ಜೊತೆಯಾಗಿ ನಿಲ್ಲುವ ಸರ್ಕಾರ ಮತ್ತು ವಿಸ್ತರಿಸುವ ಅವಕಾಶಗಳು ಬೇಕು. ವಿದ್ಯಾರ್ಥಿಗಳ ಮೇಲೆ ರಾಜಕೀಯ ಮಾಡುವುದಕ್ಕೂ, ವಿದ್ಯಾರ್ಥಿಗಳ ಹಿತಕ್ಕಾಗಿ ರಾಜಕೀಯ ಮಾಡುವುದಕ್ಕೂ ಇದೇ ವ್ಯತ್ಯಾಸ” ಎಂದು ಧರ್ಮೇಂದ್ರ ಪ್ರಧಾನ್ ತಮ್ಮ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ