20ನೇ ರೋಜ್‌ಗಾರ್ ಮೇಳದಲ್ಲಿ 51,000 ಜನಕ್ಕೆ ನೇಮಕಾತಿ ಪತ್ರ ವಿತರಣೆ: ವಿಕಸಿತ ಭಾರತದಲ್ಲಿ ಯುವಕರ ಪಾತ್ರ ನಿರ್ಣಾಯಕ ಎಂದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 19) ದೇಶಾದ್ಯಂತ 47'ರೋಜ್‌ಗಾರ್ ಮೇಳ'ದಲ್ಲಿ 51,000ಕ್ಕೂ ಹೆಚ್ಚು ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ವರ್ಚುವಲ್ ಆಗಿ ವಿತರಿಸಿದರು. ಈ ಮೂಲಕ 'ರೋಜ್‌ಗಾರ್ ಮೇಳ' ಆರಂಭವಾದಾಗಿನಿಂದ, ದೇಶಾದ್ಯಂತ ಸುಮಾರು 12 ಲಕ್ಷ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಇನ್ನು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ನವದೆಹಲಿ, (ಸೆಪ್ಟೆಂಬರ್ 19): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವರ್ಚುವಲ್ ಆಗಿ ‘ರೋಜ್‌ಗಾರ್ ಮೇಳ’ದಲ್ಲಿ 51,000ಕ್ಕೂ ಹೆಚ್ಚು ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಅಕ್ಟೋಬರ್ 2022 ರಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳ ಗುರಿಯೊಂದಿಗೆ ಪ್ರಾರಂಭಿಸಲಾದ ಈ ಮೇಳವು ರಾಷ್ಟ್ರವ್ಯಾಪಿ ಮಿಷನ್-ಮೋಡ್ ನೇಮಕಾತಿ ಪ್ರಯತ್ನವಾಗಿ ವಿಕಸನಗೊಂಡಿದೆ. ಈವರೆಗೆ 20 ಆವೃತ್ತಿ ಪೂರ್ಣಗೊಂಡಿದ್ದು, ಬರೋಬ್ಬರಿ 12.75 ಲಕ್ಷ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಾಗಿದೆ.
20ನೇ ರೋಜ್‌ಗಾರ್ ಮೇಳದ ಅಡಿ ದೇಶಾದ್ಯಂತ 51,000ಕ್ಕೂ ಹೆಚ್ಚು ಯುವಕ ಯುವತಿಯರು ಸರ್ಕಾರಿ ಸೇವೆಯ ನೇಮಕಾತಿ ಪತ್ರಗಳನ್ನು ವರ್ಚುಯಲ್ ಆಗಿ ವಿತರಿಸಿದರು. ಬಳಿಕ ಮಾತನಾಡಿದ ಅವರು, 2047ರ ವೇಳೆಗೆ ವಿಕಸಿತ ಭಾರತವಾಗುವತ್ತ ಭಾರತದ ಪಯಣದಲ್ಲಿ ಯುವಜನರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.ಹಬ್ಬದ ಋತುಗಳ ಸಂದರ್ಭದಲ್ಲಿನ ಸಂಭ್ರಮಾಚರಣೆಯಲ್ಲಿ ಸರ್ಕಾರದ ಸೇವೆಗೆ ಯುವಜನತೆ ಸೇರಲು ಸಿದ್ದವಾಗಿದ್ದು, ಇದು ಅವರ ಕುಟುಂಬಕ್ಕೆ ಹೊಸ ಸಂತಸ ತಂದಿದೆ ಎಂದರು,
ಇದನ್ನೂ ಓದಿ: ಜಾಗತಿಕ ಸರಾಸರಿಗಿಂತ ಭಾರತದ ಇಂಗಾಲ ಹೊರಸೂಸುವಿಕೆ ಕಡಿಮೆ: ಪರಿಸರ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
ಹೊಸದಾಗಿ ಸರ್ಕಾರದ ಸೇವೆಗೆ ಸೇರಲು ನೇಮಕಗೊಂಡವರು 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ಗುರಿಯತ್ತ ದೇಶವನ್ನು ಮುನ್ನಡೆಸುವ ವೇಳೆ ನಮ್ಮ ಜೊತೆಯಾಗಿದ್ದಾರೆ. ಅವರ ಪ್ರತಿಯೊಂದು ನಿರ್ಧಾರವೂ ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತದ ಅಭಿಯಾನಗಳನ್ನು ಬಲಪಡಿಸಲು ಕೊಡುಗೆ ನೀಡುವಂತಿರಬೇಕು. ಭಾರತದ ಯುವ ಜನಸಂಖ್ಯೆ, ಪ್ರತಿಭೆ ಮತ್ತು ಕೌಶಲಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿದ್ದು, ಭಾರತೀಯ ಆವಿಷ್ಕಾರಕರು, ಉದ್ಯಮಿಗಳು ಮತ್ತು ಯುವಜನತೆಯಿಂದ ಜಗತ್ತು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ ಎಂದು ಹೇಳಿದರು.
ಇತ್ತೀಚಿಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆ ಉಲ್ಲೇಖಿಸಿದ ಅವರು, ಬ್ರಿಕ್ಸ್ ಸಹಕಾರವು ಕೇವಲ ಸರ್ಕಾರಗಳಿಗೆ ಮಾತ್ರ ಸೀಮಿತವಾಗದೇ, ಉದ್ಯಮಿಗಳು, ರೈತರು, ಮಹಿಳೆಯರು ಮತ್ತು ಯುವಜನರನ್ನೂ ಒಳಗೊಳ್ಳುವಂತಾಗಲು ಭಾರತವು ಪ್ರಯತ್ನಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶವು ಸುಮಾರು 40 ದೇಶಗಳೊಂದಿಗೆ ಇಂತಹ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಮುಕ್ತ ವ್ಯಾಪಾರ ಒಪ್ಪಂದಗಳು ನಮ್ಮ ಯುವಜನರಿಗೆ ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆಯುತ್ತಿವೆ. ಇಂತಹ ವ್ಯಾಪಾರ ಒಪ್ಪಂದಗಳು, ಉದ್ಯಮಿಗಳಿಗೆ ಹೊಸ ಪಾಲುದಾರಿಕೆಗಳಿಗೆ ದಾರಿ ಮಾಡಿಕೊಡುತ್ತವೆ. ಹೊಸ ಮಾರುಕಟ್ಟೆಗಳಿಗೆ ಪ್ರವೇಶವನ್ನು ಕಲ್ಪಿಸಿ, ನಮ್ಮ ಯುವಜನರಿಗೆ ಉದ್ಯೋಗದ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದಾರೆ. ನಮ್ಮ ಯುವಜನರ ಶಿಕ್ಷಣ ಮತ್ತು ಕೌಶಲಗಳು ಬದಲಾಗುತ್ತಿರುವ ಆರ್ಥಿಕತೆಯ ಅಗತ್ಯಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಪಿಎಂ ಸೇತು ಯೋಜನೆ ಮೂಲಕ ಕೈಗಾರಿಕಾ ವಲಯದ ನೇರ ಸಹಭಾಗಿತ್ವದೊಂದಿಗೆ 60,000 ಕೋಟಿ ಹೂಡಿಕೆಯ ಮೂಲಕ 1,000 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಆಧುನೀಕರಿಸಲಾಗುತ್ತಿದೆ. ಸ್ಟಾರ್ಟ್ಅಪ್ಗಳು ಟೈರ್-2 ಮತ್ತು ಟೈರ್-3 ನಗರಗಳಲ್ಲಿ ನೆಲೆಗೊಂಡಿವೆ. ಇದು ದೇಶದ ಹೊಸ ಆರ್ಥಿಕತೆಯಲ್ಲಿ ಹಳ್ಳಿಗಳು, ಪಟ್ಟಣಗಳು ಮತ್ತು ಸಣ್ಣ ನಗರಗಳ ಯುವಜನರು ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. ಖಾಸಗಿ ವಲಯಗಳಲ್ಲಿ ಉದ್ಯೋಗವಕಾಶಗಳ ವಿಸ್ತರಣೆಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.




