PSI ಪರಶುರಾಮ್‌ ಸಾವು: ಸರ್ಕಾರ ಆದೇಶಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ಎಂಟ್ರಿ, ಮೊದಲ ದಿನ ಏನೇನಾಯ್ತು?

ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೆ ಕಾರಣಕ್ಕೆ ತನಿಖೆಯ ಹೊಣೆಯನ್ನ ಸಿಐಡಿಗೆ ನೀಡಿದೆ. ತನಿಖೆಯ ಜವಾಬ್ದಾರಿಯನ್ನ ಹೊತ್ತ ಸಿಐಡಿ ತಂಡ ಇಂದು(ಭಾನುವಾರ) ಯಾದಗಿರಿ ಎಂಟ್ರಿ‌ ಕೊಟ್ಟು ತನಿಖೆ ಶುರು ಮಾಡಿದೆ. ಆದ್ರೆ, ಆರೋಪ ಹೊತ್ತಿರುವ ಶಾಸಕ ಹಾಗೂ ಶಾಸಕರ ಪುತ್ರ ಮಾತ್ರ ಇನ್ನು ನಾಪತ್ತೆ ಆಗಿದ್ದಾರೆ. ಬಂಧನ ಭೀತಿ‌ ಹಿನ್ನಲೆ ತಲೆ ಮರಿಸಿಕೊಡಿದ್ದಾರೆ.

PSI ಪರಶುರಾಮ್‌ ಸಾವು: ಸರ್ಕಾರ ಆದೇಶಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ಎಂಟ್ರಿ, ಮೊದಲ ದಿನ ಏನೇನಾಯ್ತು?
PSI ಪರಶುರಾಮ್‌ ಸಾವು: ಸರ್ಕಾರ ಆದೇಶಿಸಿದ ಮರುದಿನವೇ ಯಾದಗಿರಿಗೆ CID ಎಂಟ್ರಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 04, 2024 | 8:02 PM

ಯಾದಗಿರಿ, ಆ.04: ಯಾದಗಿರಿ ನಗರ ಠಾಣೆಯಿಂದ ಯಾದಗಿರಿ(Yadagiri) ಸೈಬರ್ ಠಾಣೆಗೆ ವರ್ಗಾವಣೆ ಆಗಿದ್ದ ಪಿಎಸ್ಐ ಪರಶುರಾಮ ಸಾವಿನ ಹಿಂದೆ ನೂರೆಂಟು ಅನುಮಾನಗಳು ಹುಟ್ಟಿಕೊಂಡಿವೆ. ನಿನ್ನೆ(ಆ.03) ಪರಶುರಾಮ ಪತ್ನಿ ಕೊಟ್ಟ ದೂರಿನ್ವಯ ಯಾದಗಿರಿ ನಗರ ಠಾಣೆಯಲ್ಲಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಸಾವಿಗೆ ಪ್ರಚೋದನೆ, ಕಿರುಕುಳ ಹಾಗೂ ಜಾತಿ ನಿಂಧನೆ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾಗಿ ಒಂದೆರಡು ಗಂಟೆಯಲ್ಲೇ ರಾಜ್ಯ ಸರ್ಕಾರ, ಪ್ರಕರಣದ ತನಿಖೆ ಜವಾಬ್ದಾರಿಯನ್ನ ರಾಜ್ಯ ಸಿಐಡಿಗೆ ವರ್ಗಾವಣೆ ಮಾಡಿದೆ. ಕೇಸ್ ವರ್ಗಾವಣೆ ಆದ ಒಂದೆ ದಿನಕ್ಕೆ ಸಿಐಡಿ ತಂಡ ಫುಲ್ ಆಕ್ಟಿವ್ ಆಗಿದ್ದು, ಇವತ್ತು ಡಿವೈಎಸ್ಪಿ ನೇತೃತ್ವದ ಸಿಐಡಿ ತಂಡ ಯಾದಗಿರಿ ನಗರಕ್ಕೆ ಎಂಟ್ರಿ ಕೊಟ್ಟಿದೆ. ಯಾದಗಿರಿ ಬಂದಿದ್ದೆ ತಡ ಡಿವೈಎಸ್ಪಿ ಕಚೇರಿಯಲ್ಲಿ ಅಗತ್ಯ ದಾಖಲೆಗಳನ್ನ ಪರಿಶೀಲನೆ ನಡೆಸಿದೆ.

ಸತತ ಮೂರು ಗಂಟೆಗಳ ಕಾಲ ಡಿವೈಎಸ್ಪಿ ಕಚೇರಿಯಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದು, ಜೊತೆಗೆ ಯಾದಗಿರಿ ಸಿಪಿಐ, ಸುರಪುರ ಡಿವೈಎಸ್ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನ ಕಚೇರಿಗೆ ಕರೆಸಿಕೊಂಡು ಮಾಹಿತಿಯನ್ನ ಕಲೆ ಹಾಕಿದೆ. ಇನ್ನು ಕೇಸ್ ಸಂಬಂಧಿಸಿದಂತೆ ಎಫ್ಐಆರ್ ಪ್ರತಿ‌ ಹಾಗೂ ಕೇಸ್ ಫೈಲ್‌ಗಳನ್ನ ಪಡೆದುಕೊಂಡಿದೆ. ಇನ್ನು ಶಾಸಕರ ಮೇಲೆಯೇ ಕೇಸ್ ದಾಖಲಾಗಿದ್ದಕ್ಕೆ ಶಾಸಕರ ಮಾಹಿತಿ ಸಹ ಸ್ಥಳೀಯ ಪೊಲೀಸರಿಂದ ಪಡೆದುಕೊಂಡಿದೆ. ಇನ್ನೊಂದು ಲಂಚಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ‌ ಹಾಗೂ ಕಿರುಕುಳ‌ ಕೇಸ್ ಮೈಮೇಲೆ‌ ಹೊತ್ತಿರುವ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಮಾತ್ರ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.

ಇದನ್ನೂ ಓದಿ:ಯಾದಗಿರಿ ಪಿಎಸ್​ಐ ಅನುಮಾನಾಸ್ಪದ ಸಾವು ಪ್ರಕರಣ; ಇದು ಆತ್ಮಹತ್ಯೆ ಅಲ್ಲ, ಹತ್ಯೆ ಎಂದು ಮಾಜಿ ಸಚಿವ ರಾಜುಗೌಡ ಆರೋಪ

ಸಿಐಡಿಗೆ ವಹಿಸಿದ್ದರಿಂದ ಬಂಧನ ಭೀತಿ ಶಾಸಕರಿಗೆ ಕಾಡ್ತಾಯಿದೆ. ಇದೆ ಕಾರಣಕ್ಕೆ ಕೇಸ್ ದಾಖಲಾದ ದಿನದಿಂದ ನಾಪತ್ತೆ ಆಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶಾಸಕರ ಕಚೇರಿಯನ್ನು ಸಹ ಲಾಕ್ ಮಾಡಲಾಗಿದೆ. ನಿತ್ಯ ನೂರಾರು ಜನ ಇರುವ ಕಚೇರಿ ಶಾಸಕರ ಗೈರಿನಿಂದ ಬಣ ಬಣ ಆಂತಿದೆ. ಮನೆಯಲ್ಲೂ ಸಹ ಶಾಸಕರಿಲ್ಲ. ಬಂಧನ ಭೀತಿ‌ ಹಿನ್ನಲೆ ಜಿಲ್ಲೆ ಬಿಟ್ಟು ಬೇರೆ ಕಡೆ ಓಡಿ‌ ಹೋಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನಿನ್ನೆ ಮಾತಾಡಿರುವ ಶಾಸಕ ಚೆನ್ನಾರೆಡ್ಡಿ ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.

ಒಟ್ಟಿನಲ್ಲಿ ಪಿಎಸ್ಐ ಪರಶುರಾಮ ಸಾವಿಗೆ ಕಾರಣ ಎಂಬ ಆರೋಪ ಹೊತ್ತಿರುವ ಶಾಸಕರು ಮಾತ್ರ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇತ್ತ ಫುಲ್ ಆಕ್ಟಿವ್ ಆಗಿರುವ ಸಿಐಡಿ ತಂಡ ನಾಳೆ ಸಿಐಡಿ ಎಸ್​ಪಿ ಕೂಡ ಜಿಲ್ಲೆಗೆ ಆಗಮಿಸಿಲಿದ್ದಾರೆ. ಹೀಗಾಗಿ ತನಿಖೆ ಚುರುಕುಗೊಳ್ಳುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ