ಪಿಎಸ್ಐ ಪರಶುರಾಮ್ ಸಾವು ಪ್ರಕರಣ: ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ವಿರುದ್ಧ ಕೇಳಿ ಬಂತು ಗಂಭೀರ ಆರೋಪ
ಶಾಸಕ ಚೆನ್ನಾರೆಡ್ಡಿ ಪಾಟೀಲ್, ತಮ್ಮ ಕ್ಷೇತ್ರದ ವ್ಯಾಪ್ತಿಯ ಠಾಣೆಗಳನ್ನು ಒಂದು ರೀತಿ ಹರಾಜಿಗೆ ಇಟ್ಟಿದ್ದರು. ಯಾರು ಹೆಚ್ಚು ಹಣ ನೀಡುತ್ತಾರೊ ಅವರಿಗೆ ವರ್ಗಾವಣೆ ಶಿಫಾರಸು ಪತ್ರ ನೀಡ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದ್ದು ಯಾದಗಿರಿಗೆ ಸಿಐಡಿ ತಂಡ ಎಂಟ್ರಿ ಕೊಟ್ಟಿದೆ. ಸದ್ಯ ತನಿಖೆ ಚುರುಕುಗೊಂಡಿದೆ.
ಯಾದಗಿರಿ, ಆಗಸ್ಟ್.04: ಯಾದಗಿರಿ ನಗರದ ಸೈಬರ್ ಠಾಣೆ ಪಿಎಸ್ಐ ಪರಶುರಾಮ್ ಸಾವು (PSI Parshuram Death) ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣಿಗೆಯಾಗಿದೆ. ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು (Channareddy Patil Tunnur) ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಕೇಸ್ ದಾಖಲಾಗಿದೆ. ಕಿರುಕುಳ, ಪ್ರಚೋದನೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಪರಶುರಾಮ ಪತ್ನಿ ಶ್ವೇತ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದೆ.
ಕೇಸ್ ದಾಖಲಾಗುತ್ತಿದ್ದಂತೆ ಶಾಸಕ ಹಾಗೂ ಪುತ್ರ ಇಬ್ಬರೂ ಫೋನ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಂಧನದ ಭೀತಿ ಹಿನ್ನೆಲೆ ತಂದೆ ಮಗ ಎಸ್ಕೇಪ್ ಆದ್ರಾ ಎನ್ನಲಾಗುತ್ತಿದೆ. ಮನೆ ಮತ್ತು ಕಚೇರಿ ಬಳಿಯೂ ಸಿಗದೆ ನಾಪತ್ತೆಯಾಗಿದ್ದಾರೆ. ಶಾಸಕರ ಕಚೇರಿ ಬಳಿ ಒಬ್ಬನೇ ಒಬ್ಬ ವ್ಯಕ್ತಿಯೂ ಸುಳಿಯುತ್ತಿಲ್ಲ ಯಾವುದೇ ವಾಹನಗಳು ನಿಂತಿಲ್ಲ. ಕಚೇರಿಯ ಮುಖ್ಯ ಗೇಟ್ ಲಾಕ್ ಮಾಡಲಾಗಿದೆ. ಕೇಸ್ ದಾಖಲಾಗಿ 8 ಗಂಟೆ ಕಳೆದ್ರೂ ಸಂಪರ್ಕಕ್ಕೆ ಸಿಗ್ತಾಯಿಲ್ಲ. ಅದರಲ್ಲೂ ಕೇಸ್ ಸಿಐಡಿಗೆ ವರ್ಗಾವಣೆ ಆದ ಬಳಿಕವಂತೂ ಇನ್ನು ಹೆದರಿಕೆ ಶುರುವಾಗಿದೆ.
ವರ್ಗಾವಣೆ ಶಿಫಾರಸು ಪತ್ರ ನೀಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದ ಶಾಸಕ
ಶಾಸಕ ಚೆನ್ನಾರೆಡ್ಡಿ ಪಾಟೀಲ್, ತಮ್ಮ ಕ್ಷೇತ್ರದ ವ್ಯಾಪ್ತಿಯ ಠಾಣೆಗಳನ್ನು ಒಂದು ರೀತಿ ಹರಾಜಿಗೆ ಇಟ್ಟಿದ್ದರು. ಯಾರು ಹೆಚ್ಚು ಹಣ ನೀಡುತ್ತಾರೊ ಅವರಿಗೆ ವರ್ಗಾವಣೆ ಶಿಫಾರಸು ಪತ್ರ ನೀಡ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. 4-5 ಪಿಎಸ್ಐಗಳ ನಡುವೆ ಪೈಪೋಟಿ ಸೃಷ್ಟಿಸಿ ಹೆಚ್ಚು ನೀಡಿದವರಿಗೆ ಪೋಸ್ಟಿಂಗ್ ಮಾಡಲಾಗುತ್ತಿತ್ತು. ಹಣ ಇಲ್ಲದ ಪಿಎಸ್ಐಗಳಿಗೆ ಪೋಸ್ಟಿಂಗ್ ಸಿಗುತ್ತಿರಲಿಲ್ಲ? 1 ವರ್ಷದ ಪೋಸ್ಟಿಂಗ್ ಪಡೆಯಲು 20-30 ಲಕ್ಷ ಬೇಡಿಕೆ ಇಡುತ್ತಿದ್ದರು. ಹಣ ನೀಡಿದರೂ ಜಾತಿಯ ಲೆಕ್ಕಾಚಾರ ಹಾಕುತ್ತಿದ್ದರು. ಯಾದಗಿರಿ ವ್ಯಾಪ್ತಿಯ 2-3 ಠಾಣೆಗಳಲ್ಲಿ ಶಾಸಕನಿಗೆ 20-30 ಲಕ್ಷ ನೀಡಿ ಪೋಸ್ಟಿಂಗ್ ಪಡೆದಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಯಾದಗಿರಿ ಪಿಎಸ್ಐ ಪರಶುರಾಮ ಸಹಜ ಸಾವು ಎಂದ ಪರಮೇಶ್ವರ್: ಎ1 ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ
ಯಾದಗಿರಿಗೆ ಎಂಟ್ರಿ ಕೊಟ್ಟ ಸಿಐಡಿ ತಂಡ
ಇನ್ನು ಪಿಎಸ್ಐ ಪರಶುರಾಮ್ ಸಾವು ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದ್ದು ಯಾದಗಿರಿಗೆ ಸಿಐಡಿ ತಂಡ ಎಂಟ್ರಿ ಕೊಟ್ಟಿದೆ. ಸದ್ಯ ತನಿಖೆ ಚುರುಕುಗೊಂಡಿದೆ. ಸಿಐಡಿ ತನಿಖೆಗೆ ನೀಡಿದ ಒಂದೇ ದಿನದಲ್ಲಿ ಯಾದಗಿರಿ ನಗರಕ್ಕೆ ಸಿಐಡಿ ಡಿವೈಎಸ್ಪಿ ಪುನೀತ ನೇತೃತ್ವದ ತಂಡ ಭೇಟಿ ನಿಡಿದೆ. ಯಾದಗಿರಿ ನಗರ ಪೊಲೀಸರಿಂದ ಕೇಸ್ ಫೈಲ್ ಪಡೆದು FIR ಪ್ರತಿ, ಪಂಚನಾಮೆ ವರದಿ ಸೇರಿದಂತೆ ಮಾಹಿತಿ ಪಡೆದು ತನಿಖಾ ತಂಡ ತನಿಖೆ ಶುರು ಮಾಡಲಿದೆ.
ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪಣ್ಣಗೌಡ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಯಾದಗಿರಿ ಡಿವೈಎಸ್ಪಿ ಕಚೇರಿಗೆ ಸಿಐಡಿ ಟೀಂ ಆಗಮಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:22 pm, Sun, 4 August 24