ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್​​: ತಲೆಮರೆಸಿಕೊಂಡ ಸ್ವಯಂ ಘೋಷಿತ ದೇವಮಾನವ?

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪದಡಿ ಶಹಾಪುರದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ದೇವಮಾನವ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಬಂಧನದ ಭೀತಿಯಿಂದ ಮುತ್ಯಾ ತಲೆಮರೆಸಿಕೊಂಡಿದ್ದಾರೆ ಎಂಬ ವದಂತಿ ಇದ್ದು, ಈ ನಡುವೆ ಪೊಲೀಸರು ಮಠದಲ್ಲಿ ಸ್ಥಳ ಮಹಜರು ಕಾರ್ಯ ನಡೆಸಿದ್ದಾರೆ. ಭಕ್ತರು ಮಾತ್ರ ಇದು ಮುತ್ಯಾ ಮತ್ತು ಮಠದ ಹೆಸರು ಕೆಡಿಸುವ ಕೆಲಸ ಎಂದು ದೂರಿದ್ದಾರೆ.

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್​​: ತಲೆಮರೆಸಿಕೊಂಡ ಸ್ವಯಂ ಘೋಷಿತ ದೇವಮಾನವ?
ಮಲ್ಲಿಕಾರ್ಜುನ ಮುತ್ಯಾ
Image Credit source: Google
Edited By:

Updated on: Feb 26, 2026 | 1:21 PM

ಯಾದಗಿರಿ, ಫೆಬ್ರವರಿ 26: ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತನೆ ಹಿನ್ನೆಲೆ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬಂಧನದ ಭೀತಿ ಹಿನ್ನೆಲೆ ಪ್ರಕರಣ ದಾಖಲಾಗುತ್ತಿದ್ದಂತೆ ಮುತ್ಯಾ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಸುದ್ದಿ ಹರಿದಾಡಿವೆ. ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾರಣ ಸ್ವಯಂ ಘೋಷಿತ ದೇವಮಾನವನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಪೊಲೀಸರಿಂದ ಸ್ಥಳ ಮಹಜರು

Mallikarjuna Mutya case: ಮಹಲ್ ರೋಜಾದಲ್ಲಿರುವ ಮಠದಲ್ಲಿ ಸ್ಥಳ ಮಹಜರು ಕಾರ್ಯ | #TV9D
ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ ತಾಲೂಕಿನ ಗೋಗಿ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಹಿನ್ನೆಲೆ ಮಹಲ್ ರೋಜಾದಲ್ಲಿರುವ ಮಠದಲ್ಲಿ ಪೊಲೀಸರು ಸ್ಥಳ ಮಹಜರು ಕಾರ್ಯ ನಡೆಸಿದ್ದಾರೆ. ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಮ್ಮುಖದಲ್ಲಿ ಮುತ್ಯಾ ಮಠದ ಎಲ್ಲಾ ಕೋಣೆಗಳಲ್ಲಿ ಮಹಜರು ನಡೆಸಲಾಗಿದೆ. ಪ್ರಕರಣದ ತನಿಖೆಗೆ ಶಹಾಪುರ ಸಿಪಿಐ ಶರಣಗೌಡ ನ್ಯಾಮಣ್ಣನವರ ನೇಮಕ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾಗೆ ಪೊಲೀಸರು ನೋಟಿಸ್​ ನೀಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

ಭಕ್ತರ ಆತಂಕ

Mallikarjuna Mutya Case: ಅಪ್ರಾಪ್ತೆಯ ಮೈಕೈ ಸವರಿ ಮುತ್ತು ಕೊಟ್ಟ ಮುತ್ಯಾ? ಭಕ್ತರು ಹೇಳಿದ್ದೇನು? |#TV9D

ಮಲ್ಲಿಕಾರ್ಜುನ ಮುತ್ಯಾನ ಮೇಲೆ ಪೋಕ್ಸೋ ಕೇಸ್ ಹಿನ್ನಲೆ ಮಠದತ್ತ ಭಕ್ತರ ದಂಡೇ ಆಗಮಿಸುತ್ತಿದೆ. ಮುತ್ಯಾನ ಆಶೀರ್ವಾದದಿಂದ ನಮಗೆ ಒಳ್ಳೆಯದಾಗಿದೆ. ಅವರು ಆ ರೀತಿ ಕೆಲಸ ಮಾಡುವ ವ್ಯಕ್ತಿ ಅಲ್ಲ. ಮುತ್ಯಾ ಮತ್ತು ಮಠಕ್ಕೆ ಕಳಂಕ ತರುವ ಕೆಲಸ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ತಪ್ಪಾಗಿ ಬಿಂಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತಾವು ಪೊಲೀಸ್​​ ದೂರು ನೀಡಲಿದ್ದು, ಕ್ರಮವಾಗದಿದ್ದರೆ ಮುಂದೇನು ಎಂಬ ಬಗ್ಗೆ ನಿರ್ಧಾರ ಮಾಡೋದಾಗಿ ಭಕ್ತರು ತಿಳಿಸಿದ್ದಾರೆ.

‘ಮುತ್ಯಾ ಎಲ್ಲೂ ಪರಾರಿ ಆಗಿಲ್ಲ’

Mallikarjuna Mutya Brother: ಮಲ್ಲಿಕಾರ್ಜುನ ಮುತ್ಯಾ ತಪ್ಪು ಮಾಡಿಲ್ಲ ಸಹೋದರ ಪರಶುರಾಮ ಹೇಳಿಕೆ|#TV9D

ವೈರಲ್​​ ಆಗಿರುವ ವಿಡಿಯೋದಲ್ಲಿರುವ ಅಪ್ರಾಪ್ತ ಬಾಲಕಿ ಪೋಷಕರು ಮಲ್ಲಿಕಾರ್ಜುನ್​​ ಮುತ್ಯಾ ಸಂಬಂಧಿಕರು. ಹೀಗಾಗಿ ಮಠಕ್ಕೆ ಬಂದಾಗ ಬಾಲಕಿ ಜತೆ ಸಹೋದರನ ರೀತಿ ಪ್ರೀತಿ ತೋರಿದ್ದಾರೆ. ಮಗಳು ಖುಷಿಯಿಂದ ಇದ್ದ ಕಾರಣಕ್ಕೆ ಕುಟುಂಬ ಸಮೇತ ಮಠಕ್ಕೆ ಬಂದ ಬಾಲಕಿ ತಂದೆಯೇ ವಿಡಿಯೋ ಮಾಡಿದ್ದಾರೆ. ಆದ್ರೆ ವಿಡಿಯೋವನ್ನು ಕೆಟ್ಟ ದೃಷ್ಟಿಯಿಂದ ಬಿಂಬಿಸಲಾಗಿದೆ. ನನ್ನ ಸಹೋದರನ ವಿರುದ್ಧ ಕೇಸ್​ ದಾಖಲಿಸಿದ್ದನ್ನು ಖಂಡಿಸುತ್ತೇವೆ. ಮುತ್ಯಾ ಎಲ್ಲೂ ಪರಾರಿ ಆಗಿಲ್ಲ, ಬೇರೆ ಬೇರೆ ಮಠಗಳಿಗೆ ಹೋಗ್ತಿದ್ದಾರೆ. ನಾವು ತಪ್ಪು ಮಾಡಿಲ್ಲ ಎಂದ ಮೇಲೆ ಯಾಕೆ ಪರಾರಿ ಆಗುತ್ತೇವೆ ಎಂದು ಮಲ್ಲಿಕಾರ್ಜುನ ಮುತ್ಯಾ ಸಹೋದರ ಪರಶುರಾಮ ಮುತ್ಯಾ ಟಿವಿ9ಗೆ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us