ಆ ಜಿಲ್ಲೆ ರಚನೆಯಾಗಿ ಬರೋಬರಿ 13 ವರ್ಷಗಳು ಕಳೆದಿವೆ. ಜಿಲ್ಲಾ ಕೇಂದ್ರ ಆಗಿದ್ದಾಗಿನಿಂದಲೂ ಜಿಲ್ಲಾ ನ್ಯಾಯಲಯ ಕೂಡ ಆರಂಭವಾಗಿದೆ. ಆದ್ರೆ ನ್ಯಾಯಾಲಯಕ್ಕೆ ಸುಸಜ್ಜಿತ ಕಟ್ಟಡಬೇಕು ಅಂತ ನ್ಯಾಯವಾದಿಗಳು ಹೋರಾಟ ನಡೆಸಿದ್ರು. ಬಳಿಕ ಸರ್ಕಾರ ಹೊಸ ಕಟ್ಟಡಕ್ಕೆ ಹಣ ಕೂಡ ಮಂಜೂರು ಮಾಡಿದೆ. ಆದ್ರೆ ಹೊಸ ಕಟ್ಟಡ ಕಾಮಗಾರಿ ಮುಗಿದು ಕೋರ್ಟ್ ಆರಂಭವಾಗಬೇಕಿತ್ತು. ಅನುದಾನದ ಕೊರತೆಯಿಂದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣ್ತಾಯಿಲ್ಲ. ಇದೇ ಕಾರಣಕ್ಕೆ ವಕೀಲರು ಈಗ ಭಿಕ್ಷಾಟನೆ (Begging) ಮಾಡಿ ಹಣ ಸಂಗ್ರಹ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ನ್ಯಾಯಾಲಯಗಳ ಸಂಕೀರ್ಣದ ಕಟ್ಟಡಕ್ಕಿಲ್ಲ ಅನುದಾನ.. ಅನುದಾನದ ಕೊರತೆ ಹಿನ್ನೆಲೆಯಲ್ಲಿ ಕುಂಟುತ್ತಾ ಸಾಗಿರುವ ಕಾಮಗಾರಿ. ಕಾಮಗಾರಿ ಮುಗಿಯದ್ದಕ್ಕೆ ಸರ್ಕಾರದ ವಿರುದ್ಧ ವಕೀಲರು ಆಕ್ರೋಶಗೊಂಡಿದ್ದಾರೆ. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯಲ್ಲಿ (Yadgir District Court).
ಹೌದು ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಹೊಸ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ನಿರ್ಮಾಣವಾಗುತ್ತಿದೆ. ಜಿಲ್ಲಾ ಕೇಂದ್ರವಾಗಿ 13 ವರ್ಷ ಕಳೆದ್ರು ಜಿಲ್ಲಾ ನ್ಯಾಯಾಲಯಕ್ಕೆ ಸುಸಜ್ಜಿತ ಕಟ್ಟಡವಿರಲಿಲ್ಲ. ಹಿಂದೆ ಇದ್ದ ತಾಲೂಕು ನ್ಯಾಯಾಲಯದ ಕಟ್ಟಡದಲ್ಲೇ ಜಿಲ್ಲಾ ನ್ಯಾಯಾಲಯ ನಡೆಸಿಕೊಂಡು ಬರ್ತಾಯಿದ್ರು. ಕಟ್ಟಡ ಚಿಕ್ಕದಾಗಿದ್ದರಿಂದ ಕೆಲಸಗಳು ಆಗ್ತಾಯಿಲ್ಲ. ಇದೆ ಕಾರಣಕ್ಕೆ 2018 ರಲ್ಲಿ ನ್ಯಾಯವಾದಿಗಳ ಜಿಲ್ಲಾ ಸಂಘದಿಂದ ಹೊಸ ಕಟ್ಟಡಕ್ಕಾಗಿ 29 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು.
ಯಾದಗಿರಿ ತಹಶೀಲ್ದಾರ ಕಚೇರಿ ಪಕ್ಕದಲ್ಲೇ ನಿರಂತರ ಹೋರಾಟ ನಡೆಸಲಾಗಿತ್ತು. ಕೊನೆಗೂ ಸರ್ಕಾರ ಹೊಸ ಕಟ್ಟಡಕ್ಕೆ ಒಪ್ಪಿಕೊಂಡಿತ್ತು. ಇದೆ ಕಾರಣಕ್ಕೆ ಜಿಲ್ಲಾಡಳಿತ ಭವನದ ಹಿಂಭಾಗದಲ್ಲೇ 10 ಎಕರೆ ಜಮೀನು ಗುರುತಿಸಿ ನ್ಯಾಯಾಲಯಕ್ಕೆ ಮಂಜೂರು ಕೂಡ ಮಾಡಿತ್ತು. ಬಳಿಕ 2020 ರಲ್ಲಿ 15 ಕೋಟಿ ಹಣವನ್ನ ಬಿಡುಗಡೆ ಮಾಡಿತ್ತು. ಗುತ್ತಿಗೆ ಪಡೆದು ಗುತ್ತಿಗೆದಾರ ನ್ಯಾಯಾಲಯದ ಸಂಕೀರ್ಣದ ಕಟ್ಟಡ ಕಾಮಗಾರಿಯನ್ನ 18 ತಿಂಗಳ ಒಳಗಾಗಿ ಮುಗಿಸಬೇಕಾಗಿತ್ತು. ಆದ್ರೆ ಹೆಚ್ಚುವರಿ ಅನುದಾನದ ಅವಶ್ಯಕತೆ ಇರುವ ಕಾರಣಕ್ಕೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇತ್ತ ಸರ್ಕಾರ ಕೂಡ ಅನುದಾನವನ್ನ ನೀಡದೆ ಸತಾಯಿಸುವ ಕೆಲಸ ಮಾಡ್ತಾಯಿದೆ. ಇದೆ ಕಾರಣಕ್ಕೆ ವಕೀಲರ ಸಂಘದಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ..
ಇನ್ನು ಕಾಮಗಾರಿ ಯೋಜನೆ ಪ್ರಕಾರ ಮುಗಿದಿದ್ರೆ ಇಷ್ಟೊತ್ತಿಗೆ ಹೊಸ ಕಟ್ಟಡ ಆರಂಭವಾಗುತ್ತಿತ್ತು. ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಶಿ ಫ್ಟ್ ಆಗಿ ಕೆಲಸ ಕಾರ್ಯಗಳು ನಡೆಯುತ್ತಿದ್ವು. ಆದ್ರೆ ಸರ್ಕಾರ ಕಳೆದ ಆರು ತಿಂಗಳುಗಳಿಂದ ಅನುದಾನ ಬಿಡುಗಡೆ ಮಾಡುವ ಮಾತುಗಳನ್ನ ಹೇಳಿ ಅನುದಾನ ಬಿಡುಗಡೆ ಮಾಡದೆ ಸತಾಯಿಸುವ ಕೆಲಸ ಮಾಡ್ತಾಯಿದೆ.
ಇನ್ನುಳಿದ ಬಾಕಿ ಕಾಮಗಾರಿ ಮುಗಿದು ನ್ಯಾಯಾಲಯದ ಸಂಕೀರ್ಣ ಪೂರ್ಣಗೊಳ್ಳಬೇಕು. ಅಂದ್ರೆ ಇನ್ನು 10 ಕೋಟಿ ಹಣದ ಅವಶ್ಯಕತೆಯಿದೆ. ಆದ್ರೆ ಈ ಹಣವನ್ನ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಇತ್ತು ಗುತ್ತಿಗೆದಾರ ಅನುದಾನ ಇಲ್ಲ ಕಾರಣಕ್ಕೆ ಕೆಲಸವನ್ನ ಆಮೆ ಗತಿಯಲ್ಲಿ ಸಾಗುವಂತೆ ನೋಡಿಕೊಂಡಿದ್ದಾನೆ. ಜೊತೆಗೆ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಕಟ್ಟಡ, ಫೋಕ್ಸೋ ವಿಶೇಷ ನ್ಯಾಯಾಲಯ ಕಟ್ಟಡ ಮಂಜೂರಾಗಿದ್ದು ಇದಕ್ಕೂ ಹಣ ಬಿಡುಗಡೆ ಮಾಡಬೇಕಿದೆ.
ಇಷ್ಟೇ ಅಲ್ದೆ ಕೋರ್ಟ್ ಸಂಕೀರ್ಣಕ್ಕೆ ಅಗತ್ಯ ಸೌಲಭ್ಯಗಳನ್ನ ಒದಗಿಸುವ ಕೆಲಸ ಕೂಡ ಮಾಡೋದು ಬಾಕಿಯಿದೆ. ಸರ್ಕಾರ ಈ ರೀತಿ ನಿರ್ಲಕ್ಷ್ಯ ತೋರುತ್ತಿದ್ದ ಕಾರಣಕ್ಕೆ ಸಾಕಷ್ಟು ಬಾರಿ ವಕೀಲರ ಸಂಘದಿಂದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಹಾಗೂ ಕಾನೂನು ಸಚಿವರಿಗೆ ಸಾಕಷ್ಟು ಬಾರಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಯಾರೊಬ್ಬರು ಸಹ ಮನವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಇದೆ ಕಾರಣಕ್ಕೆ ವಕೀಲರೆಲ್ಲರು ಸೇರಿ ಯಾದಗಿರಿ ಜಿಲ್ಲೆಯಲ್ಲಿ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಕಟ್ಟಡ ನಿರ್ಮಾಣಕ್ಕಾಗಿ ನೀಡುವ ಕೆಲಸಕ್ಕೆ ಮುಂದಾಗುವ ಯೋಜನೆಯಲ್ಲಿದ್ದಾರೆ ಜಿಲ್ಲಾ ವಕೀಲರ ಸಂಘದ ಸದಸ್ಯರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ