ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಸಿನಿ ತಾರೆಯರ ಕಲರವ: ಸಿನಿಮಾ ಶೋಟಿಂಗ್​ಗೆ ಬಿಎಂಆರ್​ಸಿಎಲ್ ಗ್ರೀನ್ ಸಿಗ್ನಲ್

ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರಿ ಜೀವನಾಡಿಯಾಗಿರೋ ನಮ್ಮ ಮೆಟ್ರೋ ಇನ್ಮುಂದೆ ಬಿಗ್ ಸ್ಕ್ರೀನ್ ಮೇಲೂ ಸಂಚರಿಸೋಕೆ ಸಜ್ಜಾಗಿದೆ. ಹಾಲಿವುಡ್, ಬಾಲಿವುಡ್​ಗಳಲ್ಲಿ ಬರ್ತಿದ್ದ ಮೆಟ್ರೋ ಸೀನ್​ಗಳಂತೆ ಇನ್ಮುಂದೆ ಕನ್ನಡದ ಸಿನಿಮಾ, ಸೀರಿಯಲ್​ನಲ್ಲೂ ನಮ್ಮ ಮೆಟ್ರೋ ಮಿಂಚೋಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಚೆನ್ನೈ, ದೆಹಲಿ ಮೆಟ್ರೋ ಬಳಿಕ ಇದೀಗ ನಮ್ಮ ಮೆಟ್ರೋದಲ್ಲೂ ಸಿನಿಮಾ, ಸೀರಿಯಲ್ ಶೂಟಿಂಗ್​ಗೆ ಗ್ರೀನ್ ಸಿಗ್ನಲ್ ಕೊಡಲಾಗಿದೆ.

ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಸಿನಿ ತಾರೆಯರ ಕಲರವ: ಸಿನಿಮಾ ಶೋಟಿಂಗ್​ಗೆ ಬಿಎಂಆರ್​ಸಿಎಲ್ ಗ್ರೀನ್ ಸಿಗ್ನಲ್
ನಮ್ಮ ಮೆಟ್ರೋ
Follow us
Kiran Surya
| Updated By: ಆಯೇಷಾ ಬಾನು

Updated on: Nov 24, 2023 | 9:22 AM

ಬೆಂಗಳೂರು, ನ.24: ಸಿಲಿಕಾನ್‌ ಸಿಟಿ ಜನರ ಅಚ್ಚುಮೆಚ್ಚಿನ ಸಾರಿಗೆಯಾಗಿರೋ ನಮ್ಮ ಮೆಟ್ರೋದಲ್ಲಿ (Namma Metro) ಇನ್ಮುಂದೆ ಶೂಟಿಂಗ್‌ ಕ್ಯಾಮರಾ, ಸೆಲೆಬ್ರೆಟಿಗಳು ಕಾಣಿಸಿಕೊಳ್ಳುವ ಲಕ್ಷಣ ಕಾಣ್ತಿದೆ. ಇಷ್ಟುದಿನ ಮೆಟ್ರೋ ಆವರಣದಲ್ಲಿ ಕ್ಯಾಮರಾ ಬಳಕೆ, ಚಿತ್ರೀಕರಣಕ್ಕೆ ಅವಕಾಶ ಸಿಗದೇ ಚಾನ್ಸ್‌ಗಾಗಿ ಕಾಯ್ತಿದ್ದ ಚಿತ್ರರಂಗದ ಮಂದಿಗೆ ಬಿಎಂಆರ್‌ಸಿಎಲ್‌ (BMRCL) ಗುಡ್‌ನ್ಯೂಸ್‌ ಕೊಟ್ಟಿದೆ. ದೆಹಲಿ, ಚೆನ್ನೈ ಮೆಟ್ರೋ ಬಳಿಕ ಬೆಂಗಳೂರಿನ ನಮ್ಮ ಮೆಟ್ರೋದಲ್ಲೂ ಸಿನಿಮಾ ಹಾಗೂ ಸೀರಿಯಲ್‌ಗಳ ಶೂಟಿಂಗ್‌ಗೆ ಅನುಮತಿ ಕೊಡೋಕೆ BMRCL ಮುಂದಾಗಿದ್ದು, ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳು, ಮೆಟ್ರೋ ರೈಲುಗಳಲ್ಲೂ ಬಣ್ಣದ ಲೋಕದ ಕಲರವ ಕೇಳುವ ಕಾಲ ಹತ್ತಿರವಾಗ್ತಿದೆ.

ಬೆಂಗಳೂರಿನ ಮೆಟ್ರೋಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದ್ದು ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮೀಳಾ ಜೋಶಾಯಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ವಿಚಾರ ಕನ್ನಡ ಚಲನಚಿತ್ರರಂಗ ಇದನ್ನು ಸ್ವಾಗತ ಮಾಡ್ತಿವಿ. 25% ರಿಯಾಯಿತಿ ನೀಡಿರೋದ್ರಿಂದ ಕನ್ನಡ ಚಿತ್ರರಂಗ ಬೆಳೆಯುತ್ತದೆ ಮತ್ತು ಬೇರೆಬೇರೆ ಭಾಷೆಯ ಚಲನಚಿತ್ರಗಳು ನಮ್ಮ ರಾಜ್ಯದಲ್ಲಿ ‌ಚಿತ್ರೀಕರಣ ಆಗುತ್ತದೆ ಎಂದು ತಿಳಿಸಿದರು.

ಇನ್ನು ಮೆಟ್ರೋ ಆವರಣ, ಮೆಟ್ರೋ ರೈಲುಗಳಲ್ಲಿ ಶೂಟಿಂಗ್‌ ಮಾಡಲು ಒಂದು ದಿನಕ್ಕೆ 6 ಲಕ್ಷ ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ. ಕನ್ನಡದ ಚಿತ್ರಗಳಿಗೆ 25% ರಿಯಾಯಿತಿ ಕೊಟ್ಟಿರೋ ಬಿಎಂಆರ್‌ಸಿಎಲ್‌, ಇತರೆ ಭಾಷೆಗಳ ಚಿತ್ರೀಕರಣಕ್ಕೆ 6 ಲಕ್ಷ ಹಣವನ್ನ ವಸೂಲಿ ಮಾಡೋಕೆ ಪ್ಲಾನ್‌ ಮಾಡಿದೆ. ಇನ್ನು ಲಾ ಅಂಡ್ ಅರ್ಡರ್ ಸಮಸ್ಯೆ ಆಗುವ, ಸಮಾಜಕ್ಕೆ ಹಾನಿ ಉಂಟಾಗುವ, ಜನರ ಭಾವನೆಗೆ ಧಕ್ಕೆ ಉಂಟಾಗುವ ಯಾವುದೇ ಸಿನಿಮಾ ಅಥವಾ ಸೀರಿಯಲ್‌ ಶೂಟಿಂಗ್‌ಗೆ ನಿರ್ಬಂಧ ಹೇರಿದ್ದು, ಪೀಕ್‌ ಅವರ್‌ನಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಅವಕಾಶ ಕೊಡೋಕೆ ತಯಾರಿ ನಡೆದಿದೆ. ಇನ್ನು ಶೂಟಿಂಗ್‌ನಿಂದ ಬಂದ ಹಣವನ್ನ ನಾನ್‌ಫೇರ್‌ ಇನ್‌ಕಮ್‌ ಅಂತಾ ಪರಿಗಣಿಸಿ ಮೆಟ್ರೋದರ ಏರಿಕೆಯಾದ್ರೆ ಅಂತಾ ಸಮಯದಲ್ಲಿ ಪ್ರಯಾಣಿಕರಿಗೆ ಸಬ್ಸಿಡಿ ರೂಪದಲ್ಲಿ ನೀಡೋಕು BMRCL ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ರೈಲಿನಲ್ಲಿ ಕಾಲೇಜು ಯುವತಿಗೆ ಲೈಂಗಿಕ ಕಿರುಕುಳ: ಕಿಡಿಗೇಡಿ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಸದ್ಯ ಚಿತ್ರೀಕರಣಕ್ಕೆ 30 ದಿನ ಇರುವಾಗಲೇ ಸಿನಿಮಾ ಅಥವಾ ಸಿರೀಯಲ್‌ ಸ್ಕ್ರಿಪ್ಟ್ ಜೊತೆಗೆ ಶೂಟ್ ಮಾಡುವ ಮುನ್ನ ಅಪ್ಲಿಕೇಶನ್ ಹಾಕುವುದು ಕಡ್ಡಾಯವಾಗಿದ್ದು, ಯಾವ ಡೇಟ್ ಅಲ್ಲಿ ಶೂಟಿಂಗ್ ಮಾಡ್ತೇವೆ, ಯಾವ ಲೊಕೇಶನ್ ಅಲ್ಲಿ ಮಾಡ್ತೇವೆ ಅಂತ ಉಲ್ಲೇಖ ಮಾಡಬೇಕಿದೆ. ಇದರ ಜೊತೆಗೆ ಶೂಟಿಂಗ್‌ಗೆ ಕೆಲ ಷರತ್ತುಗಳನ್ನು ವಿಧಿಸಿರೋ BMRCL, ಇದಕ್ಕೆಲ್ಲಾ ಓಕೆ ಅಂದ್ರೆ ಮಾತ್ರ ಶೂಟಿಂಗ್‌ಗೆ ಪರ್ಮಿಸನ್‌ ಕೊಡಲಿದೆ.

ಮೆಟ್ರೋದಲ್ಲಿ ಶೂಟಿಂಗ್‌ ಮಾಡೋಕೆ ಪಾಲಿಸಬೇಕಾದ ಷರತ್ತುಗಳೇನು?

  • ಶೂಟಿಂಗ್‌ಗೆ ಮುನ್ನ ಅಪ್ಲೀಕೇಶನ್‌, ಸ್ಕ್ರಿಪ್ಟ್ ಸಲ್ಲಿಕೆ ಕಡ್ಡಾಯ
  • ಶೂಟಿಂಗ್ ಮಾಡುವಾಗ ಡೋರ್ ಓಪನ್ ಮಾಡುವ ಹಾಗಿಲ್ಲ
  • ಪೀಕ್ ಅವರ್ ಇರೋ ಟೈಮ್‌ನಲ್ಲಿ ಶೂಟ್ ಮಾಡುವ ಹಾಗಿಲ್ಲ
  • BMRCL ಒಬ್ಬ ಸಿಬ್ಬಂದಿ ಶೂಟಿಂಗ್ ಮಾಡುವಾಗ ಜೊತೆ ಇರ್ತಾರೆ
  • ಅನುಮತಿ ನೀಡಿರೋ ಸ್ಥಳದಲ್ಲಿ ಮಾತ್ರ ಶೂಟಿಂಗ್‌ ಮಾಡಬೇಕು
  • ಟೀಂನಲ್ಲಿರೋ ಮಹಿಳೆಯರ ಜವಾಬ್ದಾರಿ ತಂಡದ್ದೇ ಆಗಿರುತ್ತೆ
  • ಚಿತ್ರೀಕರಣ ವೇಳೆ ಏನೇ ಅನಾಹುತ ಆದ್ರೂ ಚಿತ್ರತಂಡವೇ ಹೊಣೆ
  • ಮೆಟ್ರೋ ಪರಿಕರಗಳಿಗೆ ಹಾನಿಯಾದ್ರೆ ಹಣ ಭರಿಸಬೇಕು

ಒಟ್ಟಿನಲ್ಲಿ ಇಷ್ಟು ದಿನ ಬೇರೆ ಬೇರೆ ಕಡೆ ಮೆಟ್ರೋದಲ್ಲಿ ಶೂಟಿಂಗ್‌ ಮಾಡ್ತಿದ್ದ ಸಿನಿಮಾ ಮಂದಿಗೆ ಇದೀಗ ಬೆಂಗಳೂರಿನ ವಾತಾವರಣದಲ್ಲೇ ಮೆಟ್ರೋದಲ್ಲಿ ಶೂಟ್‌ ಮಾಡೋಕೆ ಚಾನ್ಸ್ ಸಿಗ್ತಿದೆ. ಸದ್ಯ ಬಿಎಂಆರ್‌ಸಿಎಲ್‌ ಒಂದಷ್ಟು ಷರತ್ತುಗಳ ಜೊತೆಗೆ ಈ ಹೊಸ ಪ್ರಯೋಗಕ್ಕೆ ಮುಂದಾಗ್ತಿದ್ದು, ನಮ್ಮ ಮೆಟ್ರೋದ ಅಂಗಳದಲ್ಲಿ ಯಾವೆಲ್ಲಾ ಸಿನಿಮಾ, ಸಿರೀಯಲ್‌ಗಳು ರೂಪ ಪಡೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್