ಯಾದಗರಿಯ ಸೀತಾಫಲ ಹಣ್ಣಿಗೆ ಏಕಿಷ್ಟು ಡಿಮ್ಯಾಂಡ್​​ ? ಇದರ ವಿಶೇಷತೆ ಏನು ? ಇಲ್ಲಿದೆ ಮಾಹಿತಿ

| Updated By: ವಿವೇಕ ಬಿರಾದಾರ

Updated on: Nov 01, 2022 | 7:20 PM

ಕಲ್ಯಾಣ ಕರ್ನಾಟಕದ ಯಾದಗಿರಿ ಸೀತಾಫಲ ಹಣ್ಣಿನ ತವರು ಮನೆ ಎಂದೇ ಪ್ರಸಿದ್ಧಿ ಪಡೆದಿದೆ.

ಯಾದಗರಿಯ ಸೀತಾಫಲ ಹಣ್ಣಿಗೆ ಏಕಿಷ್ಟು ಡಿಮ್ಯಾಂಡ್​​ ? ಇದರ ವಿಶೇಷತೆ ಏನು ? ಇಲ್ಲಿದೆ ಮಾಹಿತಿ
ಸೀತಾಫಲ
Follow us on

ಸೀತಾಫಲ ಹಣ್ಣು ಸೀತೆಯ ಹೆಸರಿನೊಂದಿಗೆ ನಂಟು ಹೊಂದಿದೆ. ಈ ಹಣ್ಣಿನಲ್ಲಿ ಬೀಜಗಳು ಜಾಸ್ತಿ, ತಿನ್ನಲು ತುಸು ಕಸರತ್ತು ಮಾಡಬೇಕೆನ್ನುವುದನ್ನು ಬಿಟ್ಟರೇ, ಸೀತಾಫಲ ಸಿಹಿಯ ಜೊತೆ ಸ್ವಾದಿಷ್ಟ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಸರ್ವ ರೋಗಗಳಿಗೆ ರಾಮಬಾಣದಂತಿರುವ ಸೀತಾಫಲ ಹಣ್ಣು ಕೇವಲ ಎರಡು ತಿಂಗಳ ಮಾತ್ರ ಸಿಗುತ್ತದೆ. ಈ ಹಣ್ಣನ್ನು ತಿನ್ನಲ್ಲೂ ಜನರು ಮುಗಿ ಬಿದ್ದು ಖರೀದಿ ಮಾಡ್ತಾರೆ. ಅಷ್ಟಕ್ಕೂ ಸೀಲಾಫಲ ಹಣ್ಣೀನ ತವರೂರು ಯಾವುದು ನಿಮೆಗೆ ಗೊತ್ತಾ? ಇಲ್ಲಿದೆ ಓದಿ

ಕಲ್ಯಾಣ ಕರ್ನಾಟಕದ, ಕರ್ನಾಟಕದ ಕಿರೀಟ ಯಾದಗಿರಿ ಸೀತಾಫಲ ಹಣ್ಣಿನ ತವರು ಮನೆ ಎಂದೇ ಪ್ರಸಿದ್ಧಿ ಪಡೆದಿದೆ. ಯಾದಗಿರಿ ನಗರದ ಹಳೆ ಬಸ್ ನಿಲ್ದಾಣ ಮುಂದೆ ಹಾಗೂ ಹತ್ತಿಕುಣಿ ಕ್ರಾಸ್ ಬಳಿಯ ರಸ್ತೆ ಈ ಎರಡು ತಿಂಗಳಗಳ ಕಾಲ ಸೀತಾಫಲ ಹಣ್ಣುಗಳ ಮಾರಕಟ್ಟೆಯಾಗಲಿದೆ. ಇಲ್ಲಿಯ ರುಚಿ ರುಚಿಯಾದ ಸ್ವಾದಿಷ್ಟ ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ವರ್ಷಕ್ಕೆ 2 ತಿಂಗಳ ಅವಧಿಯಲ್ಲಿ ಸಿಗುವ ಮತ್ತು ಹೆಚ್ಚು ದಿನ ಶೇಕರಿಸಲಾಗದ ಕೇವಲ 4 ರಿಂದ 5 ದಿನಗಳ ವರೆಗೆ ಬಾಳುವುದರಿಂದ ಹಣ್ಣನ್ನು ಇಷ್ಟಪಡುವ ಗ್ರಾಹಕರಿಗೂ ಮತ್ತು ಮಾರಾಟಗಾರರಿಗೂ ಸುಗ್ಗಿಯ ಸಂಭ್ರಮವಾಗಿದೆ.

ಯಾದಗಿರಿ ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು ಹಳ್ಳಿ ಜನ ಸೀತಾಫಲ ಹಣ್ಣಗಳನ್ನು ತಂದು ನಗರ ಪ್ರದೇಶದಲ್ಲಿ ಮಾರಾಟ ಮಾಡುತ್ತಾರೆ. ನಗರದ ಪ್ರದೇಶದ ಜನ ಎರಡು ತಿಂಗಳ ಈ ಸೀಲಾಫಲ ಸೀಜನ್ ಸಕತ್ ಎಂಜಾಯ್ ಮಾಡುತ್ತಾರೆ. ಕೇವಲ ಎರಡೇ ತಿಂಗಳುಗಳು ಮಾತ್ರ ಸಿಗುವ ಕಾರಣ ಮಿಸ್ ಮಾಡದೆ ಸೀತಾಫಲ ಹಣ್ಣಿನ ಸವಿಯನ್ನು ಸವಿಯುತ್ತಾರೆ. ಈ ವರ್ಷವಂತು ಮುಂಗಾರು ಮಳೆ ಅಬ್ಬರಿಸಿದ್ದರಿಂದ ಕಾರಣ ಸೀತಾಫಲ ಹಣ್ಣುಗಳ ಉತ್ಪಾದನೆ ಕೂಡ ಹೆಚ್ಚಾಗಿದೆ. ಜಿಲ್ಲೆಯ ನಗರ ಪ್ರದೇಶದ ಜನ ಮಾತ್ರ ವರ್ಷ ಈ ಎರಡು ತಿಂಗಳು ಸೀತಾಫಲ ಹಣ್ಣು ಮೀಸ್ ಮಾಡದೆ ಸವಿಯುತ್ತಾರೆ. ಇನ್ನು ಬೇರೆ ಊರಲ್ಲಿರುವ ಜನರು ಇಷ್ಟ ಪಟ್ಟು ಕೇಳುವುದ್ದರಿಂದ ಯಾದಗಿರಿ ಜನ ಬೇರೆ ಊರುಗಳಿಗೆ ಪಾರ್ಸಲ್ ಸಹ ಕಳುಹಿಸಿ ಕೊಡುತ್ತಾರೆ.

ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಮತ್ತು ಯಾದಗಿರಿ ತಾಲೂಕುಗಳ ಬೆಟ್ಟ ಗುಡ್ಡಗಳು ಸೇರಿಯೇ ಯಾದಗಿರಿ ಜಿಲ್ಲೆ ಗಿರಿನಾಡೆಂದು ಕರೆಸಿಕೊಂಡಿದೆ. ಹಚ್ಚ ಹಸುರಿನ ಗಿರಿಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಸೀತಾಫಲದ 2 ತಿಂಗಳ ಸುಗ್ಗಿ ಈ ಭಾಗದ ಅನೇಕ ಬಡ ಕುಟುಂಬಗಳಗೆ ತಕ್ಕ ಮಟ್ಟಿನ ಆದಾಯ ಮೂಲವಾಗಿದೆ. ವಿಶೇಷವಾಗಿ ಯಾದಗಿರಿ ತಾಲೂಕಿನ ಹತ್ತಿಕುಣಿ ಮೀಸಲು ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಹೀಗಾಗಿ ಜನ ಬೆಳಿಗ್ಗೆ ಎದ್ದರೇ ಸಾಕು ಕೈಯಲ್ಲಿ ಚೀಲ ಹಿಡಿದುಕೊಂಡು ಅರಣ್ಯ ಪ್ರದೇಶದ ಒಳಗೆ ಹೊಕ್ಕರೆ ಚೀಲದ ತುಂಬ ಹಣ್ಣನ್ನು ತುಂಬಿಕೊಂಡೆ ಹೊರ ಬರುತ್ತಾರೆ. ಸೀತಾಫಲ ಹಣ್ಣುಗಳು ತಿನ್ನುವುದಕ್ಕೆ ಎಷ್ಟು ರುಚಿಯೋ, ಅಷ್ಟು ಆರೋಗ್ಯಕ್ಕೆ ತುಂಬಾ ಒಳ್ಳಯದು.

ಈಗ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಹಣ್ಣು ಕೆಮಿಕಲ್ ಮಿಶ್ರಿತವಾಗಿರುತ್ತೆ. ಆದರೆ ಸೀತಾಫಲ ಮಾತ್ರ ಗುಡ್ಡಗಾಡು ಪ್ರದೇಶದಲ್ಲಿ ಸಿಗುವುದರಿಂದ ಯಾವುದೆ ಕೆಮಿಕಲ್ ಮಿಶ್ರಣದ ಭಯವಿಲ್ಲ. ಇನ್ನು ಸೀತಾಫಲ ಬೆಳೆಯುವುದಕ್ಕೆ ಗಿಡಗಳಿಗೆ ನೀರು ಹಾಕುವುದಿಲ್ಲ ಗೊಬ್ಬರ ಹಾಕುವುದಿಲ್ಲ ನ್ಯಾಚೂರಲ್ ಆಗಿ ಬೆಳೆಯುವಂತ ಹಾಗೂ ಫ್ರೀಯಾಗಿ ಸಿಗುವಂತ ಹಣ್ಣಾಗಿವೆ. ಯಾದಗಿರಿ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೀತಾಫಲ ಹಣ್ಣು ಸಿಗುವ ಕಾರಣ ಮುಂಬೈ, ಹೈದ್ರಾಬಾದ್, ಪುಣೆ ಸೇರಿದಂತೆ ನಾನಾ ಕಡೆ ರಫ್ತಾಗುತ್ತದೆ. ಇದಕ್ಕಾಗಿ ಸೀತಾಫಲ ಹಣ್ಣಿಗೆ ಎರಡು ತಿಂಗಳ ಕಾಲ ಸಾಕಷ್ಟು ಡಿಮ್ಯಾಂಡ್ ಇದೆ.

Published On - 7:20 pm, Tue, 1 November 22