AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ವರ್ಷಕ್ಕೊಮ್ಮೆ ಈ ರೀತಿ ಸಮಸ್ಯೆ ಬರುತ್ತೆ; ಇಂಥಾ ಸಮಯದಲ್ಲಿ ನನಗೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ: ಶಾಸಕ ಜಮೀರ್ ಅಹ್ಮದ್

ಸಿಎಂ ಯಡಿಯೂರಪ್ಪ 1,700 ಕೋಟಿ ರೂ. ಪರಿಹಾರ ಘೋಷಣೆ ಮಾಡಿದರು. ಆದರೆ ಅಪ್ಲಿಕೇಶನ್ ಹಾಕೋಕೆ ಆ್ಯಪ್ ವರ್ಕ್ ಆಗ್ತಿಲ್ಲ. ಎಲ್ಲಿ ಹೋಯ್ತು 1,700 ಕೋಟಿ ಪರಿಹಾರ ಧನ? 250 ಕೋಟಿ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಉಳಿದ ಹಣ ಎಲ್ಲಿ ಹೋಯ್ತು? ಎಂದು ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

100 ವರ್ಷಕ್ಕೊಮ್ಮೆ ಈ ರೀತಿ ಸಮಸ್ಯೆ ಬರುತ್ತೆ; ಇಂಥಾ ಸಮಯದಲ್ಲಿ ನನಗೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ: ಶಾಸಕ ಜಮೀರ್ ಅಹ್ಮದ್
ಶಾಸಕ ಜಮೀರ್ ಅಹ್ಮದ್
sandhya thejappa
|

Updated on: Jun 19, 2021 | 1:54 PM

Share

ಬೆಂಗಳೂರು: 100 ವರ್ಷಕ್ಕೆ ಒಮ್ಮೆ ಈ ರೀತಿ ಸಮಸ್ಯೆ ಬರುತ್ತದೆ. ಇಂತಹ ಸಮಯದಲ್ಲಿ ನನಗೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ಕೊರೊನಾ ಎರಡನೇ ಅಲೆ ಬರುತ್ತೆ ಅಂತ ತಜ್ಞರು ಸರ್ಕಾರಕ್ಕೆ ಸಲಹೆ ಕೊಟ್ಟಿದ್ರು. ಆದ್ರೆ ಸರ್ಕಾರ ಉಡಾಫೆಯಿಂದ ಮುಂಜಾಗ್ರತವಾಗಿ ಯಾವುದೇ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಸಾಕಷ್ಟು ಜನ ಬೆಡ್ ಸಿಗದೇ ಮೃತಪಟ್ಟಿದ್ದಾರೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನ ನಾನು ಮಾಡ್ತಾ ಇದ್ದೀನಿ. ನಮ್ಮ ದುರಾದೃಷ್ಟ ಸಂಕಷ್ಟದ ವೇಳೆ ಬಿಜೆಪಿ ಸರ್ಕಾರ ಇದೆ ಎಂದು ಹೇಳಿದರು.

ಸಿಎಂ ಯಡಿಯೂರಪ್ಪ 1,700 ಕೋಟಿ ರೂ. ಪರಿಹಾರ ಘೋಷಣೆ ಮಾಡಿದರು. ಆದರೆ ಅಪ್ಲಿಕೇಶನ್ ಹಾಕೋಕೆ ಆ್ಯಪ್ ವರ್ಕ್ ಆಗ್ತಿಲ್ಲ. ಎಲ್ಲಿ ಹೋಯ್ತು 1,700 ಕೋಟಿ ಪರಿಹಾರ ಧನ? 250 ಕೋಟಿ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಉಳಿದ ಹಣ ಎಲ್ಲಿ ಹೋಯ್ತು? ಎಂದು ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

ಸ್ಪೇಷಲ್ ಪ್ಯಾಕೇಜ್ ಪರಿಹಾರ ಬಡವರಿಗೆ ಸಿಕ್ತಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲ. ಶೇ.80ರಷ್ಟು ಜನ ವ್ಯವಸ್ಥೆ ಸರಿ ಇಲ್ಲದ ಕಾರಣ ಮೃತಪಟ್ಟಿದ್ದಾರೆ. ಬಿಪಿಎಲ್ ಕಾರ್ಡ್ ಇಲ್ಲದವರು ಸತ್ತಿದ್ದಾರೆ. ಅವರ ಗತಿ ಏನು? ಕಳೆದ ವಾರ ಪ್ರಧಾನ ಮಂತ್ರಿಗಳ ಪ್ರೆಸ್ ಮೀಟ್ ಇತ್ತು. ಏನೇನೂ ಘೋಷಣೆ ಮಾಡಿಲ್ಲ. ವ್ಯಾಕ್ಸಿನ್ ಉಚಿತವಾಗಿ ನೀಡುತ್ತೇನೆ ಅಂದ್ರು. ಜಿಎಸ್ಟಿ ಟ್ಯಾಕ್ಸ್ ಬಿಟ್ಬಿಡಿ ನಾವೇ ನಿಮಗೆ ಉಚಿತವಾಗಿ ವ್ಯಾಕ್ಸಿನ್ ಕೊಡ್ತೀವಿ. ದೇಶ್ ಕೀ ಅಚ್ಚೇ ದೀ ಆಯಾಂಗೆ ಬಾಯಿ ಬೆಹನೋ ಅಂತ ದೊಡ್ಡ ದೊಡ್ಡ ಭಾಷಣ ಮಾಡುತ್ತಿದ್ದರು. ಟೀ ಮಾರುತ್ತಿದ್ದವರು ಬಡವರ ಬಗ್ಗೆ ಕಾಳಜಿ ಇದೆ ಅಂತ ಜನರು ಪ್ರಧಾನಿ ಮಾಡಿದರು. ಆದ್ರೀಗ ಅವರು ಏನ್ ಮಾಡ್ತಿದ್ದಾರೆ. ಪೆಟ್ರೋಲ್ ದರ 100 ರೂ. ಗಿಂತ ಹೆಚ್ಚಾಗಿದೆ. ಕ್ರೂಡಾಯಿಲ್ ಮೇಲೆ ಶೇ.63 ರಷ್ಟು ಟ್ಯಾಕ್ಸ್ ಹಾಕುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಎರಡನೇ ಅಲೆ ಬಂದ ಮೇಲೆ ಜೆಡಿಎಸ್ ಅವ್ರು ಎಲ್ರೂ ಹೋಂ ಕ್ವಾರಂಟೈನ್ ಆಗಿದ್ದಾರೆ. ಜನಸೇವೆ ಮಾಡೋದನ್ನ ಮರೆತಿದ್ದಾರೆ. ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿ ಆಗಿ ತೋಟಕ್ಕೆ ಸೇರಿಕೊಂಡಿದ್ದಾರೆ. ಮೂರನೇ ಅಲೆ ಬರುತ್ತೆ ಅಂತ ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ 1,300 ಐಸಿಯು ಬೆಡ್ ಇದೆ. ಆದ್ರೆ 4500 ಐಸಿಯು ಬೆಡ್ ಬೇಕಾಗಿದೆ. ಮೂರನೇ ಅಲೆಗಾದ್ರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಇದನ್ನೂ ಓದಿ

ಬಿಜೆಪಿ ಯುದ್ಧಕಾಂಡ ಜನಸಾಮಾನ್ಯರ ಕರ್ಮಕಾಂಡವಾಗಿದೆ, ನರಕಯಾತನೆಗೆ ಕೊನೆಯೇ ಇಲ್ಲ- ಡಿಕೆ ಶಿವಕುಮಾರ್ ವ್ಯಥೆ

ರೇಣುಕಾಚಾರ್ಯಗೆ.. ಸರ್ ನೀವು ಆರೋಗ್ಯ ಸಚಿವರಾಗಬೇಕು ಎಂದ ಸೋಂಕಿತ!

(Zameer Ahmed says I have had opportunity to help during a hundred years of hardship)

Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ