
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರಿನಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪವ ಒಂದನ್ನು ರಕ್ಷಿಸಿ ಕಾಡಿನಲ್ಲಿ ಬಿಡುಗಡೆ ಮಾಡಲಾಗಿದೆ.
ಕಳೆದ 15 ದಿನದಿಂದ ಕೆಳಗೂರು ಟೀ ಎಸ್ಟೇಟ್ ಬಳಿ ಕಾಳಿಂಗ ಸರ್ಪವೊಂದು ಕಾಣಿಸಿಕೊಳ್ತಿತ್ತು. ಇದಕ್ಕೆ ಹೆದರಿ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ರು. ಹೀಗಾಗಿ ಉರಗ ತಜ್ಞ ಆರೀಫ್ ಕಾಳಿಂಗ ಸರ್ಪವನ್ನು ಸೆರೆಹಿಡಿದು ಚಾರ್ಮಾಡಿ ಘಾಟ್ನ ಕಾಡಿನಲ್ಲಿ ಬಿಡುಗಡೆ ಮಾಡಿದ್ದಾರೆ.
Published On - 4:32 pm, Wed, 26 August 20