ರಾಜ್ಯ ಸರ್ಕಾರದ ಕೊರೊನಾ ನಿರ್ವಹಣೆ ರೀತಿಗೆ ಹೈಕೋರ್ಟ್‌ನಿಂದ ತೀವ್ರ ತರಾಟೆ
ಬೆಂಗಳೂರು: ಕೊರೊನಾ ಹೆಮ್ಮಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಪದೆ ಪದೆ ಎಡವುತ್ತಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ಮಂಗಳಾರತಿ ಮಾಡಿದ್ದು, ಕೂಡಲೆ ಎನ್-95 ಮಾಸ್ಕ್ ಹಾಗೂ ಸಾಮನ್ಯ ರೋಗಿಗಳ ಚಿಕಿತ್ಸೆಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡಲು ಸೂಚಿಸಿದೆ. ಈ ಸಂಬಂಧ ಇಂದು ನಡೆದ ವಿಚಾರಣೆಯಲ್ಲಿ ಎನ್ 95 ಮಾಸ್ಕ್, ಸ್ಯಾನಿಟೈಸರ್‌ಗೆ ಬೆಲೆ ನಿಗದಿ ವಿಚಾರ ಕುರಿತು ಸಮರ್ಪಕ ಮಾಹಿತಿ ನೀಡದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಜುಲೈ ನಿಂದ ಪ್ರತಿನಿತ್ಯ 2,000 ಕ್ಕೂ […]

ಬೆಂಗಳೂರು: ಕೊರೊನಾ ಹೆಮ್ಮಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಪದೆ ಪದೆ ಎಡವುತ್ತಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ಮಂಗಳಾರತಿ ಮಾಡಿದ್ದು, ಕೂಡಲೆ ಎನ್-95 ಮಾಸ್ಕ್ ಹಾಗೂ ಸಾಮನ್ಯ ರೋಗಿಗಳ ಚಿಕಿತ್ಸೆಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡಲು ಸೂಚಿಸಿದೆ.
ಈ ಸಂಬಂಧ ಇಂದು ನಡೆದ ವಿಚಾರಣೆಯಲ್ಲಿ ಎನ್ 95 ಮಾಸ್ಕ್, ಸ್ಯಾನಿಟೈಸರ್‌ಗೆ ಬೆಲೆ ನಿಗದಿ ವಿಚಾರ ಕುರಿತು ಸಮರ್ಪಕ ಮಾಹಿತಿ ನೀಡದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಜುಲೈ ನಿಂದ ಪ್ರತಿನಿತ್ಯ 2,000 ಕ್ಕೂ ಮೀರಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ.
ಮಾರುಕಟ್ಟೆಯಲ್ಲಿ ಎನ್-95 ಮಾಸ್ಕ್, ಸ್ಯಾನಿಟೈಸರ್ ಲಭ್ಯವಿದೆಯೇ ಇಲ್ಲವೋ ಎನ್ನುವುದರ ಕುರಿತು ರಾಜ್ಯ ಸರ್ಕಾರ ಸಮರ್ಪಕ ಮಾಹಿತಿ ನೀಡಿಲ್ಲ. ಎನ್-95 ಮಾಸ್ಕ್, ಸ್ಯಾನಿಟೈಸರ್ ಲಭ್ಯತೆ ಪರಿಶೀಲಿಸಿಲ್ಲ. ಡೀಲರ್‌ಗಳ ಬಳಿ ಸ್ಟಾಕ್ ಇರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯವಿದೆಯೇ ಇಲ್ಲವೋ ಎನ್ನುವುದನ್ನು ತಿಳಿಸಿಲ್ಲ.
ಇದೆಲ್ಲಕ್ಕೂ ಮಿಗಿಲಾಗಿ ಈ ಮಾಸ್ಕ್‌ಗಳು ಹಾಗೂ ಸ್ಯಾನಿಟೈಸರ್ಸ್ ಜನಸಾಮನ್ಯನಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿವೆಯೋ ಇಲ್ಲವೋ ಎಂದು ಸರ್ಕಾರ ಪರಿಶೀಲಿಸಬೇಕು. ಆದ್ರೆ ಇದನ್ನು ಮಾಡಿಲ್ಲ. ಸರ್ಕಾರ ಯಾವ ಬೆಲೆಗೆ ಎನ್-95 ಖರೀದಿಸಿದೆ ಎಂದು ತಕ್ಷಣವೇ ತಿಳಿಸಬೇಕು ಎಂದು ಸೂಚಿಸಿದೆ.
ಕೋವಿಡ್‌ಯೇತರ ರೋಗಿಗಳ ಪರಿಸ್ಥಿತಿ ಕುರಿತು ಗಮನ ಹರಿಸಿದ ನ್ಯಾಯಾಲಯ, 70 ವರ್ಷದ ವ್ಯಕ್ತಿಯೊಬ್ಬರು ಇ-ಮೇಲ್ ಕಳುಹಿಸಿದ್ದಾರೆ. ಕೋವಿಡ್‌ಯೇತರ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಹತ್ತಾರು ಆಸ್ಪತ್ರೆಗಳನ್ನು ಅಲೆದರು ಅಳಿಯನಿಗೆ ಅಗತ್ಯ ತುರ್ತು ಚಿಕಿತ್ಸೆ ನಿರಾಕರಿಸಿವೆ ಎಂದು ಅವಲತ್ತು ಕೊಂಡಿದ್ದನ್ನು ಸರ್ಕಾರದ ಗಮನಕ್ಕೆ ತಂದಿತು.
ಅಷ್ಟೇ ಅಲ್ಲ ಅವರ ಹಾಗೇ ಇಂಥದ್ದೇ ಪರಿಸ್ಥಿತಿ ಎದುರಿಸುತ್ತಿರುವ ಇತರ ಕೋವಿಡ್‌ಯೇತರ ರೋಗಿಗಳ ಪರಿಸ್ಥಿತಿ ಏನು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ಉಚ್ಚ ನ್ಯಾಯಾಲಯ, ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಖಡಕ್ ಆಗಿ ಸೂಚನೆ ಕೊಟ್ಟಿದೆ.



