AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಂಡು ಹೋದ ಕೊಂಡು ಹೋದ: 400 ಹೋಟೆಲ್​ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ‘ಕಿಲಾಡಿ ತಾತ’!

ಧಾರವಾಡ: ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಹೊಟ್ಟೆ ಬಿರಿಯುವ ಹಾಗೆ ಊಟ ಮಾಡಿ, ಬಿಲ್ ಪಾವತಿಸದೆ ಯಾಮಾರಿಸುತ್ತಿದ್ದ 64 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಬಿಮೆಂಟ್ಸ್ ಜಾನ್(64) ಬಂಧಿತ ಆರೋಪಿ. ನಗರದ ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಬಿಮೆಂಟ್ಸ್ ಜಾನ್, ಹೋಟೆಲ್​ಗಳಲ್ಲಿ ಉಪಾಹಾರ ಸೇವಿಸಿ ಬಳಿಕ ಹಣ ನೀಡದೆ ಯಾಮಾರಿಸುತ್ತಿದ್ದನಂತೆ. ಇದೇ ರೀತಿಯಲ್ಲಿ ಈ ಕಿಲಾಡಿ ತಾತ ಸುಮಾರು 400 ಹೋಟೆಲ್​ಗಳಿಗೆ ಉಂಡೆನಾಮ ಹಾಕಿದ್ದಾನಂತೆ. ಸುಮಾರು 12,000 ರೂ. ಬಿಲ್ ಕಟ್ಟದೆ ಯಾಮಾರಿಸಿದ್ದ ವೃದ್ಧ ಅಷ್ಟಕ್ಕೇ ನಿಲ್ಲದೆ ಹೋಟೆಲ್​ನಲ್ಲಿದ್ದ ಲ್ಯಾಪ್​ಟಾಪ್​ […]

ಉಂಡು ಹೋದ ಕೊಂಡು ಹೋದ: 400 ಹೋಟೆಲ್​ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ‘ಕಿಲಾಡಿ ತಾತ’!
ಸಾಧು ಶ್ರೀನಾಥ್​
| Edited By: |

Updated on: Aug 26, 2020 | 4:47 PM

Share

ಧಾರವಾಡ: ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಹೊಟ್ಟೆ ಬಿರಿಯುವ ಹಾಗೆ ಊಟ ಮಾಡಿ, ಬಿಲ್ ಪಾವತಿಸದೆ ಯಾಮಾರಿಸುತ್ತಿದ್ದ 64 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಬಿಮೆಂಟ್ಸ್ ಜಾನ್(64) ಬಂಧಿತ ಆರೋಪಿ.

ನಗರದ ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಬಿಮೆಂಟ್ಸ್ ಜಾನ್, ಹೋಟೆಲ್​ಗಳಲ್ಲಿ ಉಪಾಹಾರ ಸೇವಿಸಿ ಬಳಿಕ ಹಣ ನೀಡದೆ ಯಾಮಾರಿಸುತ್ತಿದ್ದನಂತೆ. ಇದೇ ರೀತಿಯಲ್ಲಿ ಈ ಕಿಲಾಡಿ ತಾತ ಸುಮಾರು 400 ಹೋಟೆಲ್​ಗಳಿಗೆ ಉಂಡೆನಾಮ ಹಾಕಿದ್ದಾನಂತೆ.

ಸುಮಾರು 12,000 ರೂ. ಬಿಲ್ ಕಟ್ಟದೆ ಯಾಮಾರಿಸಿದ್ದ ವೃದ್ಧ ಅಷ್ಟಕ್ಕೇ ನಿಲ್ಲದೆ ಹೋಟೆಲ್​ನಲ್ಲಿದ್ದ ಲ್ಯಾಪ್​ಟಾಪ್​ ಸಹ ಕದ್ದಿದ್ದನಂತೆ! ಈತನ ಈ ಕೃತ್ಯದಿಂದ ಬೇಸತ್ತ ಹೋಟೆಲ್ ಮಾಲೀಕರು, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಹುಡುಕಾಟ ಶುರು ಮಾಡಿದ ಪೊಲೀಸರು ಬಿಮೆಂಟ್ಸ್ ಜಾನ್​ನನ್ನು ಬಂಧಿಸಿದ್ದಾರೆ.