AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ ತೆರಳಲಿವೆ 4 ಶ್ರಮಿಕ ವಿಶೇಷ ರೈಲು, 6000 ವಲಸಿಗರ ಪ್ರಯಾಣ

ನೆಲಮಂಗಲ: ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ಅನೇಕ ಮಂದಿ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡು ಸಮಸ್ಯೆ ಎದುರಿಸುತ್ತಿದ್ದರು. ಇಂತಹ ವಲಸಿಗರನ್ನ ತಮ್ಮ ತಾಯ್ನಾಡಿಗೆ ಕಳುಹಿಸಲು ಸರ್ಕಾರ ಪ್ರಾರಂಭಿಸಿರುವ ಶ್ರಮಿಕ ವಿಶೇಷ ರೈಲು ಯೋಜನೆಯಲ್ಲಿ ಈಗಾಗಲೆ ಲಕ್ಷಾಂತರ ವಲಸಿಗರು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಸೇವಾ ಸಿಂಧು ಪೋರ್ಟಲ್ ಮುಖಾಂತರ ನೋಂದಣಿ ಮಾಡಿಕೊಂಡ ವಲಸಿಗರಿಗಾಗಿ ಇಂದು ಸಹ 4 ಶ್ರಮಿಕ್ ರೈಲುಗಳು ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ ತೆರಳಲಿವೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಉತ್ತರಪ್ರದೇಶದ […]

ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ ತೆರಳಲಿವೆ 4 ಶ್ರಮಿಕ ವಿಶೇಷ ರೈಲು, 6000 ವಲಸಿಗರ ಪ್ರಯಾಣ
ಆಯೇಷಾ ಬಾನು
|

Updated on:May 31, 2020 | 2:32 PM

Share

ನೆಲಮಂಗಲ: ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ಅನೇಕ ಮಂದಿ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡು ಸಮಸ್ಯೆ ಎದುರಿಸುತ್ತಿದ್ದರು. ಇಂತಹ ವಲಸಿಗರನ್ನ ತಮ್ಮ ತಾಯ್ನಾಡಿಗೆ ಕಳುಹಿಸಲು ಸರ್ಕಾರ ಪ್ರಾರಂಭಿಸಿರುವ ಶ್ರಮಿಕ ವಿಶೇಷ ರೈಲು ಯೋಜನೆಯಲ್ಲಿ ಈಗಾಗಲೆ ಲಕ್ಷಾಂತರ ವಲಸಿಗರು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಸೇವಾ ಸಿಂಧು ಪೋರ್ಟಲ್ ಮುಖಾಂತರ ನೋಂದಣಿ ಮಾಡಿಕೊಂಡ ವಲಸಿಗರಿಗಾಗಿ ಇಂದು ಸಹ 4 ಶ್ರಮಿಕ್ ರೈಲುಗಳು ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ ತೆರಳಲಿವೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಉತ್ತರಪ್ರದೇಶದ ಘೋರಕ್‌ಪುರಕ್ಕೆ ಸಂಜೆ 4ಕ್ಕೆ ಹಾಗೂ ಪಶ್ಚಿಮಬಂಗಾಳದ ನ್ಯೂ ಜಲ್ಪೈಗುರಿ ನಗರಕ್ಕೆ ಸಂಜೆ 6ಕ್ಕೆ ರೈಲುಗಳು ಹೊರಡಲಿವೆ‌. ಚಿಕ್ಕಬಾಣವಾರ ರೈಲು ನಿಲ್ದಾಣದಿಂದ ಜಾರ್ಖಾಂಡ್‌ನ ಹರ್ಟೀಯಾಗೆ ಸಂಜೆ 4ಕ್ಕೆ ಹಾಗೂ ಜಾರ್ಖಾಂಡ್‌ನ ನಗರಕ್ಕೆ ಸಂಜೆ 6ಕ್ಕೆ ರೈಲುಗಳು ಹೊರಡಲಿವೆ‌.

ಬೆಂಗಳೂರಿನ ವಿವಿದೆಡೆ ನೆಲೆಸಿರುವ ವಲಸಿಗರು ತಾಯ್ನಾಡಿಗೆ ಮರಳಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಬಿಬಿಎಂಪಿ ಅಧಿಕಾರಿಗಳು ಬಿಎಂ‌ಟಿಸಿ ಬಸ್ ಮುಖಾಂತರ ವಲಸಿಗರನ್ನು ರೈಲು ನಿಲ್ದಾಣಕ್ಕೆ ಕರೆತರಲಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರಿಗೂ ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಿದ್ದು, ರೋಗಲಕ್ಷಣಗಳು ಇಲ್ಲದಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಎಲ್ಲಾ ಬಸ್‌ಗಳಲ್ಲೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಹಾಗೂ ನಾಗರೀಕ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Published On - 1:59 pm, Sun, 31 May 20

ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್
ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್
ಕೆಂಪೇಗೌಡ ಏರ್​ಪೋರ್ಟಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು
ಕೆಂಪೇಗೌಡ ಏರ್​ಪೋರ್ಟಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?