ಹಸಿರು ವಲಯದ ಬೇಲೂರು ತಾಲೂಕಿನಲ್ಲಿ 40 ಜನರಿಗೆ ಜ್ವರ, ಆತಂಕ

ಹಸಿರು ವಲಯದ ಬೇಲೂರು ತಾಲೂಕಿನಲ್ಲಿ 40 ಜನರಿಗೆ ಜ್ವರ, ಆತಂಕ

ಹಾಸನ: ಬೇಲೂರು ತಾಲೂಕಿನ ಗ್ರಾಮದಲ್ಲಿ ಹಲವರಿಗೆ ಎರಡು ವಾರಗಳಿಂದ ನಿರಂತರವಾಗಿ ಜ್ವರ ಬಾಧಿಸುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಕಳೆದ ಎರಡು ವಾರಗಳಿಂದ ಬೇಲೂರು ತಾಲೂಕಿನ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರು ನಿತ್ಯವೂ ಆಸ್ಪತ್ರೆಗೆ ಬರುತ್ತಿದ್ದಾರೆ.

ತಾಲ್ಲೂಕು ಆಡಳಿತದ ದಿವ್ಯ ನಿರ್ಲಕ್ಷ್ಯ: ಕೊರೊನೊ ಸೋಂಕು ಹೆಮ್ಮಾರಿ ಕಾಟದ‌ ನಡುವೆ ಈ ಜ್ವರದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಹತ್ತಾರು ಗ್ರಾಮಸ್ಥರು ಬೇಲೂರಿನ ಹಲವು ಖಾಸಗಿ ಕ್ಲಿನಿಕ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಸೂಕ್ತ ಸ್ಚಚ್ಛತೆ ಇಲ್ಲದೆ ಜನರಿಗೆ ಜ್ವರ ಬಂದಿರುವ ಶಂಕೆಯಿದೆ. ಆದ್ರೆ ತೀವ್ರ ಜ್ವರ ಕಾಣಿಸಿಕೊಂಡರೂ ಅಧಿಕಾರಿಗಳು ಸ್ಪಂದಿಸದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ. ತಾಲೂಕು ಆಡಳಿತದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click on your DTH Provider to Add TV9 Kannada