AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದೂ ಕೂಡ ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲಿನಲ್ಲಿ 7500 ವಲಸಿಗರ ಪ್ರಯಾಣ

ನೆಲಮಂಗಲ: ಲಾಕ್‌ಡೌನ್‌ನಿಂದ ಇಡೀ ದೇಶವೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೂಲಿ ಕಾರ್ಮಿಕರ ಬದುಕಂತೋ ದುಸ್ಥಿತಿಯ ಹಂತಕ್ಕೆ ತಲುಪಿದೆ. ವಲಸೆ, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಬಳವಿಲ್ಲದೆ ಪರದಾಡುವ ಪರಿಸ್ಥಿತಿ ಕಂಡು ಕೇಂದ್ರ ಸರ್ಕಾರ ಶ್ರಮಿಕ್ ಹೆಸರಿನ ವಿಶೇಷ ರೈಲು ಯೋಜನೆ ಜಾರಿಗೆ ತಂದಿದೆ. ಇದುವರೆಗೂ ರಾಜ್ಯಾದ್ಯಂತ ಸುಮಾರು 2.8 ಲಕ್ಷ ವಲಸಿಗರು ತಮ್ಮ ಊರುಗಳಿಗೆ ತೆರಳಿದ್ದು, ಇಂದು ಸಹ ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲು ಪ್ರಯಾಣಿಸಲಿವೆ. ಬೆಂಗಳೂರಿನ ಚಿಕ್ಕಬಾಣವಾರ ರೈಲು ನಿಲ್ದಾಣದಿಂದ ಉತ್ತರಪ್ರದೇಶದ ಘೋರಕ್‌ಪುರಕ್ಕೆ ಸಂಜೆ […]

ಇಂದೂ ಕೂಡ ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲಿನಲ್ಲಿ 7500 ವಲಸಿಗರ ಪ್ರಯಾಣ
ಆಯೇಷಾ ಬಾನು
ಆಯೇಷಾ ಬಾನು|

Updated on:Jun 01, 2020 | 2:54 PM

Share

ನೆಲಮಂಗಲ: ಲಾಕ್‌ಡೌನ್‌ನಿಂದ ಇಡೀ ದೇಶವೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೂಲಿ ಕಾರ್ಮಿಕರ ಬದುಕಂತೋ ದುಸ್ಥಿತಿಯ ಹಂತಕ್ಕೆ ತಲುಪಿದೆ. ವಲಸೆ, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಬಳವಿಲ್ಲದೆ ಪರದಾಡುವ ಪರಿಸ್ಥಿತಿ ಕಂಡು ಕೇಂದ್ರ ಸರ್ಕಾರ ಶ್ರಮಿಕ್ ಹೆಸರಿನ ವಿಶೇಷ ರೈಲು ಯೋಜನೆ ಜಾರಿಗೆ ತಂದಿದೆ. ಇದುವರೆಗೂ ರಾಜ್ಯಾದ್ಯಂತ ಸುಮಾರು 2.8 ಲಕ್ಷ ವಲಸಿಗರು ತಮ್ಮ ಊರುಗಳಿಗೆ ತೆರಳಿದ್ದು, ಇಂದು ಸಹ ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ 5 ಶ್ರಮಿಕ್ ರೈಲು ಪ್ರಯಾಣಿಸಲಿವೆ.

ಬೆಂಗಳೂರಿನ ಚಿಕ್ಕಬಾಣವಾರ ರೈಲು ನಿಲ್ದಾಣದಿಂದ ಉತ್ತರಪ್ರದೇಶದ ಘೋರಕ್‌ಪುರಕ್ಕೆ ಸಂಜೆ 4 ಗಂಟೆಗೆ ರೈಲು ಹೊರಡಲಿದ್ದು, ಹೊಸೂರು ರಸ್ತೆ ರೈಲು ನಿಲ್ದಾಣದಿಂದ ಅಸ್ಸಾಂ ರಾಜ್ಯದ ದಿಬ್ರುಗರ್‌ ನಗರಕ್ಕೆ ಸಂಜೆ 4ಕ್ಕೆ ಮತ್ತೊಂದು ರೈಲು ಪ್ರಯಾಣ ಬೆಳಸಲಿದೆ. ಉಳಿದಂತೆ ಕ್ರಾಂತೀವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಪಶ್ಚಿಮಬಂಗಾಳದ ಜಲ್ಪೈಗುರಿ ನಗರಕ್ಕೆ ಸಂಜೆ 6 ಗಂಟೆ ಹಾಗೂ ರಾತ್ರಿ 8 ಗಂಟೆಗೆ ಹೊರಡಲಿದ್ದು, ರಾತ್ರಿ 10ಕ್ಕೆ ಒಡಿಸ್ಸಾ ರಾಜ್ಯದ ಬಾಲಸೋರಗೆ ನಗರಕ್ಕೆ ಮತ್ತೊಂದು ರೈಲು ಪ್ರಯಾಣ ಆರಂಭಿಸಲಿದೆ. ಪ್ರತಿ ರೈಲಿನಲ್ಲೂ 1500 ಜನರಂತೆ 5 ರೈಲಿನಲ್ಲಿ 7500 ವಲಸಿಗರು ತಾಯ್ನಾಡಿಗೆ ಪ್ರಯಾಣ ಬೆಳಸಲಿದ್ದಾರೆ.

ನಾಗರಿಕ ರೈಲು ಸೇವೆ ಆರಂಭವಾಗಿದ್ದರೂ ಸಹ ಶ್ರಮಿಕ್ ರೈಲು ಯೋಜನೆ ಕೆಲ ದಿನಗಳ ಕಾಲ ಮುಂದುವರೆಯಲಿದ್ದು, ಸೇವಾ ಸಿಂಧು ಮೂಲಕ ನೋಂದಣಿ ಮಾಡಿಕೊಂಡಿರುವ ಪ್ರಯಾಣಿಕರಿಗೆ ಅವಕಾಶ ಮಾಡಿಕೊಡಲಾಗುವುದು. ಬೆಂಗಳೂರಿನ ವಿವಿಧೆಡೆ ನೆಲೆಸಿರುವ ಕಾರ್ಮಿಕರನ್ನು ಬಿಬಿಎಂಪಿ ಅಧಿಕಾರಿಗಳು ಬಿಎಂಟಿಸಿ ಬಸ್ ಮೂಲಕ ಕರೆತರಲಿದ್ದು ರೈಲು ನಿಲ್ದಾಣದ ಬಳಿ ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್ ಮಾಡಿ ಆರೋಗ್ಯ ಸ್ಥಿರವಾಗಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಎಲ್ಲಾ ಬಸ್‌ಗಳಿಗೂ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗುವುದು ಹಾಗೂ ಪ್ರತಿ ರೈಲು ನಿಲ್ದಾಣದಲ್ಲಿ ನಾಗರಿಕ‌ ಪೊಲೀಸ್ ಹಾಗೂ ರೈಲ್ವೆ ಪೊಲೀಸರನ್ನೂ ಭದ್ರತೆಗಾಗಿ ನಿಯೋಜಿಸಲಾಗುವುದು.

Published On - 11:39 am, Mon, 1 June 20

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ