ಸಾರಿಗೆ ಸಚಿವ ಲಕ್ಷ್ಮಣ್​ ಸವದಿಯವರಿಗೆ ಪತ್ರ ಬರೆದು ಬಿಎಂಟಿಸಿ ವಿರುದ್ಧ ದೂರು ಹೇಳಿದ ಹಿರಿಯ ನಾಗರಿಕ; ಕ್ರಮ ಕೈಗೊಳ್ಳುವಂತೆ ಮನವಿ

ಹಿರಿಯ ನಾಗರಿಕರಿಗೆ ಸಂಸ್ಥೆಯ ಎಲ್ಲ ಸಾರಿಗೆ ವಾಹನಗಳಲ್ಲಿ, ಎಲ್ಲ ವಿಧದ ಪ್ರಯಾಣಕ್ಕೆ ಶೇ.25ರಷ್ಟು ರಿಯಾಯಿತಿ ನೀಡಬೇಕು ಎಂದಿದೆಯೇ ಹೊರತು, ಹವಾನಿಯಂತ್ರಿತ (ವಜ್ರ) ಬಸ್ಸುಗಳ ಮಾಸಿಕ ಪಾಸ್​ಗೆ ಈ ನಿಯಮ ಅನ್ವಯ ಆಗುವುದಿಲ್ಲ ಎಂದೇನೂ ಇಲ್ಲ ಎಂದು ಶ್ರೀಪತಿ ರಾವ್​ ತಿಳಿಸಿದ್ದಾರೆ.

ಸಾರಿಗೆ ಸಚಿವ ಲಕ್ಷ್ಮಣ್​ ಸವದಿಯವರಿಗೆ ಪತ್ರ ಬರೆದು ಬಿಎಂಟಿಸಿ ವಿರುದ್ಧ ದೂರು ಹೇಳಿದ ಹಿರಿಯ ನಾಗರಿಕ; ಕ್ರಮ ಕೈಗೊಳ್ಳುವಂತೆ ಮನವಿ
ಬಿಎಂಟಿಸಿ ಹವಾನಿಯಂತ್ರಿತ ಬಸ್​ (ಸಂಗ್ರಹ ಚಿತ್ರ)
Follow us
Lakshmi Hegde
|

Updated on:Feb 23, 2021 | 3:58 PM

ಬೆಂಗಳೂರು: ಹಿರಿಯ ನಾಗರಿಕರಿಗೆ ಬಿಎಂಟಿಸಿಯ ಹವಾ ನಿಯಂತ್ರಿತ (ವಜ್ರ) ಬಸ್​ಗಳಲ್ಲಿ ಪ್ರಯಾಣಿಸಲು ಮಾಸಿಕ ಪಾಸುಗಳಲ್ಲಿ ರಿಯಾಯಿತಿ ನೀಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಪರಿಶೀಲನೆ ನಡೆಸಿ, ಶೇ.25ರಷ್ಟು ರಿಯಾಯಿತಿ ಕೊಡಲು ಆದೇಶ ನೀಡಿ ಎಂದು ವೆಂಕಟಾದ್ರಿ ಲೇಔಟ್​ನ ಹಿರಿಯ ನಾಗರಿಕ ಬಿ.ಶ್ರೀಪತಿರಾವ್ ಎಂಬುವರು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ್​ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ನಾನು 2018ರಲ್ಲೇ ಬಿಎಂಟಿಸಿ ಅಧಿಕಾರಿಗಳು, ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರಿಗೂ ಲಿಖಿತ ಮನವಿ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಕೆಎಸ್​ಆರ್​ಟಿಸಿ ಸೇರಿ ಎಲ್ಲ ಸಹಕಾರಿ ನಿಗಮಗಳ ಬಸ್​ಗಳಲ್ಲಿ ಹಿರಿಯ ನಾಗರಿಕರಿಗೆ ಮಾಸಿಕ ಪಾಸ್​ ದರದಲ್ಲಿ ಶೇ.25ರಷ್ಟು ರಿಯಾಯಿತಿ ಕೊಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿ ಹಲವು ವರ್ಷಗಳೇ ಕಳೆದಿವೆ. ಅದೇ ರೀತಿ ಬಿಎಂಟಿಸಿ ಬಸ್​ಗಳಲ್ಲೂ ಸಹ ರಿಯಾಯಿತಿ ನೀಡಲಾಗುತ್ತಿದೆ. ಆದರೆ BMTCಯ ಎಲ್ಲ ರೀತಿಯ ಹವಾನಿಯಂತ್ರಿತ (ಎಸಿ) ಬಸ್​ಗಳಲ್ಲಿ (ವಿಮಾನ ನಿಲ್ದಾಣಕ್ಕೆ ಹೋಗುವ ವಾಯುವಜ್ರ ಬಸ್​ ಗಳನ್ನು ಹೊರತುಪಡಿಸಿ) ಇದುವರೆಗೂ ಹಿರಿಯ ನಾಗರಿಕರಿಗೆ ಮಾಸಿಕ ಪಾಸ್​ಗಳಲ್ಲಿ ರಿಯಾಯಿತಿ ನೀಡುತ್ತಿಲ್ಲ. ಇದು ಸರ್ಕಾರದ ನಿಯಮದ ಉಲ್ಲಂಘನೆಯಾಗಿದ್ದು, 2018ರಲ್ಲಿಯೇ ಬಿಎಂಟಿಸಿ ಅಧ್ಯಕ್ಷರು, ಎಂಡಿಗೆ ಪತ್ರ ಬರೆದಿದ್ದೇನೆ. ಆದರೆ ಅವರು, ಎಸಿ ಬಸ್​ಗಳಲ್ಲಿ ಮಾಸಿಕ ಪಾಸ್​ ದರ ರಿಯಾಯಿತಿ ಕಲ್ಪಿಸುವಂತೆ ಸರ್ಕಾರ ಆದೇಶ ಹೊರಡಿಸಿಲ್ಲವೆಂದು ಉತ್ತರಿಸಿದ್ದಾರೆ ಎಂದು ಬಿ.ಶ್ರೀಪತಿರಾವ್ ಪತ್ರದಲ್ಲಿ ತಿಳಿಸಿದ್ದಾರೆ.

ಬಿಎಂಟಿಸಿಯ ಈ ನಿಲುವು ಅತಾರ್ಕಿಕ. ಹಿರಿಯ ನಾಗರಿಕರಿಗೆ ಸಂಸ್ಥೆಯ ಎಲ್ಲ ಸಾರಿಗೆ ವಾಹನಗಳಲ್ಲಿ, ಎಲ್ಲ ವಿಧದ ಪ್ರಯಾಣಕ್ಕೆ ಶೇ.25ರಷ್ಟು ರಿಯಾಯಿತಿ ನೀಡಬೇಕು ಎಂದಿದೆಯೇ ಹೊರತು, ಹವಾನಿಯಂತ್ರಿತ (ವಜ್ರ) ಬಸ್ಸುಗಳ ಮಾಸಿಕ ಪಾಸ್​ಗೆ ಈ ನಿಯಮ ಅನ್ವಯ ಆಗುವುದಿಲ್ಲ ಎಂದೇನೂ ಇಲ್ಲ. ಒಂದುವೇಳೆ ಬಿಎಂಟಿಸಿಯ ಈ ವಾದವನ್ನು ಒಪ್ಪುವುದಾದರೆ, ಸರ್ಕಾರ ಹಿರಿಯ ನಾಗರಿಕರ ಮಾಸಿಕ ಪಾಸಿಗೆ, ದೈನಂದಿನ ಪಾಸು, ದಿನವಹಿ ಒಮ್ಮುಖ ಪ್ರಯಾಣಕ್ಕೆ ಖರೀದಿಸುವ/ ಪಡೆಯುವ ಟಿಕೆಟಿಗೆ ಸಂಬಂಧಿಸಿ ಪ್ರತ್ಯೇಕ ಆದೇಶವನ್ನೇ ಹೊರಡಿಸಬೇಕಿತ್ತು. ಆದರೆ ಅಂಥ ಆದೇಶ ಯಾವುದೂ ಇಲ್ಲ ಎಂದೂ ಹೇಳಿದ್ದಾರೆ.

ನಷ್ಟವೇನೂ ಇಲ್ಲ ಹವಾನಿಯಂತ್ರಿತ ಬಸ್​ಗಳಲ್ಲಿ ಹಿರಿಯ ನಾಗರಿಕರಿಗೆ ಮಾಸಿಕ ಪಾಸ್​ಗಳಲ್ಲಿ ರಿಯಾಯಿತಿ ನೀಡುವುದರಿಂದ ಆಗುವ ನಷ್ಟ ತೀರ ಕಡಿಮೆ. ಪಾಸ್​ ಇದೆ ಎನ್ನುವ ಕಾರಣಕ್ಕೆ ಹಿರಿಯ ನಾಗರಿಕರು ಅನಗತ್ಯವಾಗಿ ಓಡಾಡುವುದಿಲ್ಲ. ಅಗತ್ಯ ಕೆಲಸವಿದ್ದಾಗ ಮಾತ್ರ ಅವರು ಹೊರಗೆ ಹೋಗುತ್ತಾರೆ. ಇನ್ನು ರಿಯಾಯಿತಿ ನೀಡಿದರಷ್ಟೇ ಒಂದಷ್ಟು ಪಾಸ್​ಗಳು ಮಾರಾಟ ಆಗಬಹುದು. ಇದರಿಂದ ಬಿಎಂಟಿಸಿಗೂ ಆದಾಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಹಾಗೇ, ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ. ನೀವು ವೈಯಕ್ತಿವಾಗಿ ಗಮನಹರಿಸಿ ಹಿರಿಯ ನಾಗರಿಕರಿಗೆ ಶೇ.25ರಷ್ಟು ರಿಯಾಯಿತಿ ನೀಡಬೇಕು ಎಂದು ಲಕ್ಷ್ಮಣ್​ ಸವದಿಯವರ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹ್ಯಾಲಿಪ್ಯಾಡ್ ನಿರ್ಮಾಣ ಹೆಸರಿನಲ್ಲಿ ಚಿಕ್ಕಮಗಳೂರು ಅಧಿಕಾರಿಗಳಿಂದ ಮೋಸ, ಸುಳ್ಳು ದಾಖಲೆ ತೋರಿಸಿ ಸರ್ಕಾರಕ್ಕೆ ವಂಚನೆ

Published On - 3:03 pm, Tue, 23 February 21

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್