ನಾವಿನ್ನು ಹೆದರಲ್ಲ, ನಮ್ಮನ್ನು ಹೆದರಿಸೋ ಕಾಲ ದೂರ; ಈಗ ಬಾದ್​ಶಾಗಳ ಕಾಲ ಅಲ್ಲ, ಜನರ ಕಾಲ! -ಓವೈಸಿ

ಭಾರತದಲ್ಲಿ ಈಗ ಬಾದ್​ಶಾಗಳ ಕಾಲ ಅಲ್ಲ, ಜನರ ಕಾಲ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ AIMIMಪಾರ್ಟಿ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

  • TV9 Web Team
  • Published On - 23:18 PM, 26 Jan 2021
ನಾವಿನ್ನು ಹೆದರಲ್ಲ, ನಮ್ಮನ್ನು ಹೆದರಿಸೋ ಕಾಲ ದೂರ; ಈಗ ಬಾದ್​ಶಾಗಳ ಕಾಲ ಅಲ್ಲ, ಜನರ ಕಾಲ! -ಓವೈಸಿ
ಅಸಾದುದ್ದೀನ್ ಓವೈಸಿ

ಬೀದರ್​: ಭಾರತದಲ್ಲಿ ಈಗ ಬಾದ್​ಶಾಗಳ ಕಾಲ ಅಲ್ಲ, ಜನರ ಕಾಲ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ AIMIMಪಾರ್ಟಿ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ಉಳಿಸಿ ಭಾರತ ಉಳಿಸಿ ಸಂವಾದದಲ್ಲಿ ಮಾತನಾಡಿದ ಓವೈಸಿ ದೆಹಲಿಯಲ್ಲಿ ಕುರ್ಚಿ ಮೇಲೆ ಬಾದ್​ಶಾಗಳು ಕುಳಿತಿದ್ದೀರಾ ಎಂದು ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೊತೆಗೆ, ನಾವಿನ್ನು ಹೆದರಲ್ಲ, ನಮ್ಮನ್ನು ಹೆದರಿಸುವ ಕಾಲ ದೂರ ಎಂದು ಸಹ ಹೇಳಿದರು.

‘ಜೈ ಹಿಂದ್ ಅಂತಾ ಘೋಷಣೆ ಕೊಟ್ಟಿದ್ದು ನೇತಾಜಿ ಅವರ ಸಾಥಿ ಅಬಿದ್ ಹಸನ್’
ಈ ನಡುವೆ, ಜೈ ಹಿಂದ್ ಅಂತಾ ಘೋಷಣೆ ಕೊಟ್ಟಿದ್ದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾಥಿ ಅಬಿದ್ ಹಸನ್. ನರೇಂದ್ರ ಮೋದಿ ಹಾಗೂ ಸಂಘ ಪರಿವಾರ ಈ ಸತ್ಯ ಹೇಳುವುದಿಲ್ಲ ಎಂದು ಓವೈಸಿ ಕಿಡಿಕಾರಿದರು.

‘BJPಯಲ್ಲಿ ಈಗ ನರೇಂದ್ರ ಮೋದಿ ಭಕ್ತಿಯೇ ಹೆಚ್ಚಾಗಿದೆ’
BJPಯಲ್ಲಿ ಈಗ ನರೇಂದ್ರ ಮೋದಿ ಭಕ್ತಿಯೇ ಹೆಚ್ಚಾಗಿದೆ. ಆದರೆ ರಾಜಕೀಯದಲ್ಲಿ ವಿನಾಶದ ದಾರಿ ಅಂದರೆ ಭಕ್ತಿ ಎಂದು ಸಂವಾದಲ್ಲಿ ಅಸಾದುದ್ದೀನ್ ಓವೈಸಿ ಹೇಳಿದರು.

ನಾನು ಹೋದಲ್ಲಿ ಬಿಜೆಪಿಗೇ ಲಾಭ ಅಂತಾ ಜನ ಹೇಳ್ತಾರೆ. ಆದ್ರೆ ಡಾ.ಅಂಬೇಡ್ಕರ್ ಅವರನ್ನು ಮೋಸದಿಂದ ಸೋಲಿಸಿದ್ದು ಕಾಂಗ್ರೆಸ್ ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿದರು.

RSSನವರು ಗೋವುಗಳ ಬಗ್ಗೆ ಮಾತಾಡ್ತಾರಲ್ಲಾ.. ಯಾವತ್ತಾದ್ರೂ ಅವರು ಸಗಣಿ, ಗಂಜಲ ಎತ್ತಿದ್ದಾರಾ? -ಸಿದ್ದರಾಮಯ್ಯ ಪ್ರಶ್ನೆ